ದೇಶದ ಜನತೆಗೆ ದೊಡ್ಡ ಮೋಸ? ಕರೋನಾ ವ್ಯಾಕ್ಸಿನ್ ನಲ್ಲಿ ಎಡವಟ್ಟು

 | 
Ghi

ಕೊರೊನಾ ಸೋಂಕು ಹರಡಬಾರದು ಅನ್ನೋ ಕಾರಣಕ್ಕೆ ಲಸಿಕೆ ಪಡೆದ ಜನ ನಿರಾಳರಾಗುವ ಹೊತ್ತಿಗೇ ಹಠಾತ್ ಸಾವು ಪ್ರಕರಣಗಳು ಜನರನ್ನು ಕಂಗಾಲಾಗಿಸಿದವು. ಆದರೆ ಸರ್ಕಾರ ಮಾತ್ರ ಈ ಸಾವುಗಳಿಗೂ, ಕೋವಿಡ್ ಲಸಿಕೆಗೂ ಸಂಬಂಧವಿಲ್ಲ ಎಂದಿತ್ತು. ಇದೀಗ ಲಸಿಕೆ ಅಭಿವೃದ್ಧಿ ಮಾಡಿದ ಸಂಸ್ಥೆಯೇ ತಮ್ಮ ಸಂಸ್ಥೆಯ ಲಸಿಕೆಯಿಂದ ಅಪರೂಪದ ಅಡ್ಡ ಪರಿಣಾಮ ಆಗುತ್ತೆ ಎಂದು ವರದಿ ನೀಡಿದೆ.

 ಹಾಗಾದ್ರೆ ಭಾರತದಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದ ಕೋಟಿ ಕೋಟಿ ಜನರ ಕಥೆಯೇನು ಎಂಬುದು ಉತ್ತರ ಸಿಗದ ಪ್ರಶ್ನೆ ಆಗಿದೆ.ಪ್ರತಿಷ್ಟಿತ ಔಷಧ ತಯಾರಿಕಾ ಕಂಪನಿ ಬ್ರಿಟನ್ ಮೂಲದ ಆಸ್ಟ್ರಾಜೆನಿಕಾ ತಾನು ಅಭಿವೃದ್ಧಿಪಡಿಸಿದ ಕೋವಿಡ್ - 19 ಲಸಿಕೆಯಿಂದ ಅಪರೂಪದ ಅಡ್ಡ ಪರಿಣಾಮ ಆಗುತ್ತದೆ ಎಂದು ತಪ್ಪೊಪ್ಪಿಕೊಂಡಿದೆ. ಇದನ್ನ ಥ್ರೋಂಬೋಸಿಸ್ ವಿತ್ ಥ್ರೋಂಬೋಸೈಟೋಪೇನಿಯಾ ಸಿಂಡ್ರೋಮ್  ಅಂದರೆ ಟಿಎಸ್‌ಎಸ್ ಎಂದು ಕರೆಯಲಾಗುತ್ತದೆ. 

ಕೋವಿಡ್ ಲಸಿಕೆಯಿಂದ ಆದ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಸಾವು ಪ್ರಕರಣಗಳ ಕುರಿತ ವಿಚಾರಣೆ ನಡೆಸುತ್ತಿರುವ ಬ್ರಿಟನ್ ನ್ಯಾಯಾಲಯದ ಎದುರು ಆಸ್ಟ್ರಾಜೆನಿಕಾ ಸಂಸ್ಥೆ ತಪ್ಪೊಪ್ಪಿಕೊಂಡಿರೋದು ಭಾರತದ ಪಾಲಿಗೆ ನಿಜಕ್ಕೂ ಶಾಕಿಂಗ್ ಸಂಗತಿಯಾಗಿದೆ.ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಮಾಹಿತಿಗಳ ಪ್ರಕಾರ ಆಸ್ಟ್ರಾಜೆನಿಕಾ ಸಂಸ್ಥೆ ಹಾಗೂ ಆಕ್ಸ್‌ಫರ್ಡ್‌ ವಿವಿ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಲಸಿಕೆಯನ್ನು ಭಾರತದ ಸೀರಮ್ ಇನ್ಸ್‌ಸ್ಟಿಟ್ಯೂಟ್ ತಯಾರಿಸಿತು. 

ಇದಕ್ಕೆ ಕೋವಿಶೀಲ್ಡ್‌ ಎಂದು ಹೆಸರಿಟ್ಟಿತ್ತು ಅಷ್ಟಕ್ಕೂ ಥ್ರೋಂಬೋಸಿಸ್ ವಿತ್ ಥ್ರೋಂಬೋಸೈಟೋಪೇನಿಯಾ ಸಿಂಡ್ರೋಮ್  ಅನ್ನೋದು ಅತ್ಯಂತ ಅಪರೂಪದ ಆರೋಗ್ಯ ಪರಿಸ್ಥಿತಿ. ಈ ಅಡ್ಡ ಪರಿಣಾಮ ಉಂಟಾದಾಗ ದೇಹದಲ್ಲಿ ಎಲ್ಲೆಂದರಲ್ಲಿ ರಕ್ತ ಹೆಪ್ಪುಗಟ್ಟುತ್ತದೆ. ರಕ್ತದಲ್ಲಿ ರಕ್ತ ಕಣಗಳ ಪ್ರಮಾಣ ಕುಸಿತವಾಗುತ್ತದೆ. ರಕ್ತ ಹೆಪ್ಪುಗಟ್ಟಲು ನೆರವಾಗುವ ಈ ಕಣಗಳಲ್ಲಿ ಕುಸಿತವಾದರೆ ಅದು ಮಾರಣಾಂತಿಕ ಆಗಬಲ್ಲದು.

ಟಿಎಸ್‌ಎಸ್ ಕಾಡಲು ಅರಂಭಿಸಿದಾಗ ಹೆಚ್ಚಾಗಿ ತಲೆ ನೋವು ಬರುತ್ತದೆ. ಹೊಟ್ಟೆ ನೋವು ಬರುತ್ತದೆ. ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಉಸಿರಾಟ ಕಷ್ಟಕರ ಎನಿಸುತತದೆ. ಯೋಚನೆ ಮಾಡಲು ಕಷ್ಟಕರವಾದ ಮಾನಸಿಕ ಸ್ಥಿತಿ ಎದುರಾಗುತ್ತದೆ. ಲಸಿಕೆ ಬಳಿಕ ಈ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ವೈದ್ಯರು ಪಾಸಿಟೀವ್ ಆಂಟಿ - ಪಿಎಫ್‌ 4 ಪರೀಕ್ಷೆ ಮಾಡಿ ರೋಗ ಪತ್ತೆ ಮಾಡುತ್ತಾರೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.