ರೇಣುಕಾಸ್ವಾಮಿ ಕೊ ಲೆ ಕೇಸಿಗೆ ಬಿಗ್ ಟ್ವಿಸ್ಟ್; ಅಮೀರ್ ಖಾನ್ ಬೆನ್ನತ್ತಿದ್ದ ಪೋ ಲೀಸರು

 | 
Ye

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಈಗ ಹೊಸ ಸಾಕ್ಷಿಗಳು ಸಿಕ್ಕಿದ್ದು ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಗುವ ಸಾಧ್ಯತೆ ಕಂಡು ಬಂದಿದೆ. ದರ್ಶನ್ ಮನೆ ಕೆಲಸಗಾರರ ವಿಚಾರಣೆಗೆ ತಯಾರಿ ಮಾಡಿಕೊಳ್ಳಲಾಗಿದ್ದು, ಬಾಬುಲ್ ಖಾನ್, ಸುಶೀಲಮ್ಮ, ಅಮೀರ್ ಖಾನ್  ಮೂವರ ಹೇಳಿಕೆ ಪಡೆಯಲು ಪೊಲೀಸರು  ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

 ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಸಿಬ್ಬಂದಿಯ ವಿಚಾರಣೆ ರೆಸ್ಟೋರೆಂಟ್ ಕೆಲಸಗಾರ ಚೇತನ್  ವಿಚಾರಣೆಗೆ ತಯಾರಿ ಮಾಡಲಾಗಿದೆ. ತನಿಖಾ ತಂಡ ಎಲ್ಲರ ಹೇಳಿಕೆ ದಾಖಲಿಸಲು ಮುಂದಾಗಿದೆ. ಮಾಜಿ ಉಪಮೇಯರ್ ಮೋಹನ್ ರಾಜ್, ಬೊಮ್ಮನಹಳ್ಳಿ ಮಾಜಿ ಕಾರ್ಪೊರೇಟರ್‌, ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಸಿಬ್ಬಂದಿ, ರೆಸ್ಟೋರೆಂಟ್ ಕೆಲಸಗಾರ ಚೇತನ್ ಇವರೆಲ್ಲರೂ ಈ ಒಂದು ಪ್ರಕರಣದಲ್ಲಿ ಹೊಸ ಸಾಕ್ಷಿಗಳಾಗಿದ್ದಾರೆಗಿದ್ದಾರೆ.

ಈಗಾಗಲೇ ಟೆಕ್ನಿಕಲ್ ಎವಿಡೆನ್ಸ್, ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ತನಿಖೆ ಚುರುಕು ಮಾಡಿರುವ ಪೊಲೀಸರು ತ್ವರಿತಗತಿಯಲ್ಲಿ ವಿಚಾರಣೆ ಮಾಡುತ್ತಿದ್ದಾರೆ. ಈ ಒಂದು ಪ್ರಕರಣದಲ್ಲಿ  ನಟ ದರ್ಶನ್ ಮನೆ ಕೆಲಸಗಾರರು ಪ್ರಮುಖ ಸಾಕ್ಷಿಗಳಾಗುತ್ತಾರಾ ಎನ್ನುವ ಕುತೂಹಲ ಸದ್ಯ ಮೂಡಿದ್ದು ಇದು ನಟ ದರ್ಶನ್​ಗೆ ಕಂಟಕವಾಗಿ ಪರಿಣಮಿಸಲಿದೆ ಎನ್ನಲಾಗಿದೆ. 

ಬಾಬುಲ್ ಖಾನ್, ಸುಶೀಲಮ್ಮ, ಅಮೀರ್ ಖಾನ್ ಅವರನ್ನು ಈ ಒಂದು ಘಟನೆಯಲ್ಲಿ ಸಾಕ್ಷಿಗಳಾಗಿ ಮಾಡಲಾಗುತ್ತದೆ ಎನ್ನಲಾಗಿದೆ. ದರ್ಶನ್ ಪರಿಚಯಸ್ಥರ ವಿಚಾರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇಬ್ಬರು ಪರಿಚಯಸ್ಥರ ವಿಚಾರಣೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ಒಂದು ಪ್ರಕರಣದಲ್ಲಿ ಅವರನ್ನು ಸಾಕ್ಷಿದಾರರು ಅಂತ ಪರಿಗಣಿಸಿ ಪೊಲೀಸರು ಹೇಳಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಸದ್ಯ ಈ ಪ್ರಕರಣದ ಬೆಳವಣಿಗೆಯಲ್ಲಿ ಮೋಹನ್ ರಾಜ್‌ ವಿಚಾರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾಜಿ ಮೇಯರ್ ಮೋಹನ್‌ ರಾಜ್‌ಗೆ ಡ್ರಿಲ್‌ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಬೊಮ್ಮನಹಳ್ಳಿ ಮಾಜಿ ಕಾರ್ಪೊರೇಟರ್‌ ಮೋಹನ್ ರಾಜ್ ಅವರನ್ನೂ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿ ಕ್ವಶ್ಚನ್ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.