ಪ್ರಜ್ವಲ್ ರೇವಣ್ಣ ಕೇ ಸ್ ಗೆ ಬಿಗ್ ಟ್ವಿಸ್ಟ್;

 | 
Hu

ಸದ್ಯ ಸಕತ್ ಸಂಚಲನ ಮೂಡಿಸಿದ ಪ್ರಜ್ವಲ್ ರೇವಣ್ಣ ಪ್ರಕರಣ ರಾಜ್ಯಾದ್ಯಂದ ಕಳೆದೊಂದು ವಾರದಿಂದ ಸುದ್ದಿಯಾಗುತ್ತಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣದ ಸೂತ್ರಧಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಪ್ರಮುಖ ಸೂತ್ರಧಾರಿಗಳು ಎಂದು ವಕೀಲ ದೇವರಾಜೇಗೌಡ ಆರೋಪ ಮಾಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮಗೆ ಆಮಿಷವೊಡ್ಡಿದ ಸಂಭಾಷಣೆಯ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ.ಗೌಪ್ಯ ಸಭೆ ನಡೆಸಿ ಯಾರು ಯಾರನ್ನ ಆರೋಪಿಗಳನ್ನ ಮಾಡಬೇಕು ಅನ್ನೋದನ್ನ ಸೂಚನೆ ಕೊಟ್ಟಿದ್ದಾರೆ. ನನ್ನ ಜೀವನದ ಹೋರಾಟ ಇದ್ದಿದ್ದು ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಣಿ ಗಳ ವಿರುದ್ಧವಾಗಿದೆ. ಅದನ್ನೇ ಅಸ್ತ್ರವಾಗಿ ಇಟ್ಟುಕೊಂಡು ಕೆಲ ಕಿಡಿಗೇಡಿ ರಾಜಕಾರಣಿಗಳು ವಾಮ ಮಾರ್ಗದಲ್ಲಿ ಹೋಗಲು ಮುಂದಾಗಿದ್ದಾರೆ.

ನನ್ನ ಸಾಕ್ಷೀ ಹೇಳಿಕೆಯಲ್ಲಿ ಕಹಿ ಸತ್ಯಗಳನ್ನ ವಿಚಾರಣೆ ಸಂದರ್ಭದಲ್ಲಿ ಇಟ್ಟಿದ್ದೇನೆ. ಇದರಲ್ಲಿ ಕೆಲ ಆರೋಪಿಗಳನ್ನ ಬಂಧಿಸಲಾಗಿದೆ. ಅಶ್ಲೀಲ ವಿಡಿಯೋ ತಡೆಯಾಜ್ಞೆ ಇದ್ರು ಕೂಡ, ಅಶ್ಲೀಲ ವಿಡಿಯೋ ಹಂಚಿಕೆ ಮಾಡಿರುವ ಸಂಬಂಧ ದೂರು ದಾಖಲಾಗಿದೆ. ಇದರಲ್ಲಿ ದೇವರಾಜೇಗೌಡ ಅವರದ್ದು ಪಾತ್ರ ಏನು? ಒಬ್ಬ ಕೊಲೆಗಾರ ವಕೀಲನ ಹತ್ರ ಬಂದಾಗ, ನಮ್ಮ ವಕೀಲ ವೃತ್ತಿಯಲ್ಲಿ ಏನು ಮಾಡಬೇಕು ಅದನ್ನ ಮಾಡಿದ್ದೇನೆ. ಕಾರು ಚಾಲಕ ಕಾರ್ತಿಕ್ ನನ್ನ ಕಚೇರಿಗೆ ಬಂದು, ಒಂದು ಪೆನ್ ಡ್ರೈವ್ ಹಾಗೂ ‌ಕೆಲ ಡಾಕ್ಯುಮೆಂಟ್ ಕೊಡ್ತಾರೆ.

ಇನ್ನು ಪೆನ್‌ಡ್ರೈವ್ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗರ ಮೂಲಕ ‌ನನಗೆ ದೊಡ್ಡ ‌ಮಟ್ಟದಲ್ಲಿ ಆಫರ್ ಕೊಟ್ಟಿದ್ದರು. ಕ್ಯಾಬಿನೆಟ್ ಮಟ್ಟದ ಹುದ್ದೆ ಕೊಡುವುದಾಗಿ ಆಫರ್ ಕೊಟ್ಟಿದ್ದರು. ಮೊದಲು ನನ್ನನ್ನ ಯಾರು ಭೇಟಿ ಮಾಡಿದರು ಅನ್ನೋದನ್ನ ಅದರ ಅಡಿಯೋ ಬಿಡುಗಡೆ ಮಾಡುತ್ತಿದ್ದೇನೆ. ಇದೇ ವೇಳೆ ಎಲ್.ಆರ್. ಶಿವರಾಮೇಗೌಡ ಹಾಗೂ ದೇವರಾಜೇಗೌಡ ಅಡಿಯೋ ಸಂಭಾಷಣೆ ಮಾಡುತ್ತಿದ್ದೇನೆ. 

ಇಲ್ಲಿ ನೋಡಿ ಆಡಿಯೋ ಕ್ಲಿಪ್ಪಿಂಗ್ ಎಂದು ಹೇಳಿದರು. ಇದೇ ವೇಳೆ ಎಸ್‌ಐಟಿ ತನಿಖೆ ಮೇಲೆ ನನಗೆ ನಂಬಿಕೆ ಇಲ್ಲ. ಇದರ ತನಿಖೆಯನ್ನು ಸಿಬಿಐಗೆ ಕೊಟ್ಟರೆ, ನಾನು ಸಂಪೂರ್ಣ ಆಡಿಯೋ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.