ಬಿಗ್ ಬಾಸ್ 11ರ ವಿನ್ನರ್ ಲಾಯರ್ ಜಗದೀಶ್; ಕೋಟಿಯ ಕುಬೇರ ಈತ
Oct 1, 2024, 13:26 IST
|
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು - ಸುದ್ದಿ ಮಾಡಿದವರು ಲಾಯರ್ ಜಗದೀಶ್. ಲೈವ್‌ಗೆ ಬಂದು ಲಾಯರ್ ಜಗದೀಶ್ ಕೊಟ್ಟ ಬ್ರೇಕಿಂಗ್ ನ್ಯೂಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಯದ್ವಾತದ್ವಾ ವೈರಲ್ ಆಗಿತ್ತು. ಹಲವಾರು ಪ್ರಕರಣಗಳನ್ನು ಹೊರಗೆಳೆಯುತ್ತೇನೆ ಅಂತ ಹೇಳಿ ಈಗ ನೋಡಿದ್ರೆ ಸೀದಾ ಬಿಗ್ ಬಾಸ್ ಮನೆಗೆ ಲಾಯರ್ ಜಗದೀಶ್ ತೆರಳಿದ್ದಾರೆ.
ನ್ಯಾಯ ಕೊಡಿಸುವುದಕ್ಕೆ ನಾನು ಹೋರಾಡುತ್ತೇನೆ. ಒಂದಲ್ಲಾ ಒಂದು ದಿನ ನಾನು ಸಿಎಂ ಆಗ್ತೇನೆ ಅಂತ ಹೇಳಿರುವ ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯೊಳಗೆ ಬಲಗಾಲಿಟ್ಟು ಹೋಗಿದ್ದಾರೆ.ವರ್ಷಗಳ ಹಿಂದೆ ಕರ್ನಾಟಕದಲ್ಲಿ ಸದ್ದು ಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿ ಪರ ವಕಾಲತ್ತು ಹಾಕಿದ್ದವರು ವಕೀಲ ಕೆ ಎನ್ ಜಗದೀಶ್.
ಜಗದೀಶ್ ಕುಮಾರ್ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ಹೆಸರು ನೋಂದಾಯಿಸಿಕೊಂಡಿಲ್ಲ. ಆ ಹೆಸರಿನಲ್ಲಿ ಯಾವುದೇ ವಕೀಲಿಕೆ ವರ್ಗಾವಣೆ ಕೋರಿ ಅರ್ಜಿ ಬಂದಿಲ್ಲ ಎಂದು ಅಂದು ರಾಜ್ಯ ವಕೀಲರ ಪರಿಷತ್ತು ತಿಳಿಸಿತ್ತು. ಆಗ, ನಾನು ಕರ್ನಾಟಕ ಕಾನೂನು ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದೇನೆ. ದಿಲ್ಲಿ ಬಾರ್ ಕೌನ್ಸಿಲ್‌ನಲ್ಲಿ ನೋಂದಣಿಯಾಗಿದೆ. ಆಲ್ ಇಂಡಿಯಾ ಬಾರ್ ಎಕ್ಸಾಂ ಬರೆದಿದ್ದರೆ ಮಾತ್ರ ವಕಾಲತ್ ಹಾಕಲು ಅರ್ಹತೆ ಇರುತ್ತದೆ.ಅದನ್ನು ಪಾಸ್ ಮಾಡಿದ್ದೇನೆ. ವಕೀಲನಾಗಿದ್ದೇನೆ. ಕಾನೂನು ಪ್ರಕಾರ ದೇಶದ ಯಾವುದೇ ಭಾಗದಲ್ಲಿ ವಕೀಲರಾಗಿ ಕೆಲಸ ಮಾಡಬಹುದು. ತಾಕತ್ ಇದ್ದರೆ ನನ್ನ ವಿರುದ್ಧ ದೂರು ಕೊಡಿ ಎಂದು ಗುಡುಗಿದ್ದವರು ಲಾಯರ್ ಜಗದೀಶ್.
ಸೋಷಿಯಲ್ ಮೀಡಿಯಾದಲ್ಲಿ ವಕೀಲ್ ಸಾಬ್ ಎಂದೇ ಖ್ಯಾತಿ ಪಡೆದವರು ಲಾಯರ್ ಜಗದೀಶ್. ಇವರಿಗೆ ಇವರದ್ದೇ ಆದ ದೊಡ್ಡ ಅಭಿಮಾನಿ ಬಳಗವಿದೆ. ವಕೀಲ ಜಗದೀಶ್ ಅವರ ಪೂರ್ತಿ ಹೆಸರು ಜಗದೀಶ್ ಮಹಾದೇವ್ ಕೆ ಎನ್ ಜಗದೀಶ್ ಕುಮಾರ್. ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು, ಕೈಗೆ ಗ್ಲೌಸ್ ಹಾಕಿಕೊಂಡು.. ಸೂಟು ಬೂಟು ಧರಿಸಿ.. ಮೀಡಿಯಾ ಮುಂದೆ ಡೇರಿಂಗ್ ಆಗಿ ಹೇಳಿಕೆ ಕೊಡುವವರು ಲಾಯರ್ ಜಗದೀಶ್. ವಿವಾದಿತ ಕೇಸ್‌ಗಳಲ್ಲೇ ಲಾಯರ್ ಜಗದೀಶ್ ಸುದ್ದಿ ಮಾಡಿರೋದು ಹೆಚ್ಚು. ಇವರು ಬೆಂಗಳೂರಿನ ಕೋಡಿಗೇಹಳ್ಳಿ ನಿವಾಸಿ ಎನ್ನಲಾಗಿದೆ. ಆರಂಭದಲ್ಲಿ ಇವರು ಆರ್‌ಟಿಐ ಕಾರ್ಯಕರ್ತ ಆಗಿದ್ದರಂತೆ. ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ಇನ್ನು ಇವರು ಶ್ರೀಮಂತ ಮನೆತನದವರಾಗಿದ್ದು ಇವರಿಗೆ ಬಾಡಿಗಾರ್ಡ್ಸ್ ಸಹ ಇದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.