ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಪೊ ಲೀಸ್, ಶ್ರೀಘ್ರದಲ್ಲೇ ಬಿಗ್ಬಾಸ್ ಬಂದ್
Oct 11, 2024, 08:28 IST
|
ಪ್ರತಿವರ್ಷ ಬಿಗ್ಬಾಸ್ ಆರಂಭವಾದರೆ ಸಾಕು ಸಾಲು ಸಾಲು ಪ್ರಕರಣಗಳು ದಾಖಲಾಗುತ್ತವೆ. ಕಳೆದವರ್ಷ ಹುಲಿ ಉಗುರು ಹಾಗೂ ತನಿಷಾ ಕುಪ್ಪುಂಡ ಜಾತಿ ಹೇಳಿಕೆ, ಡ್ರೋನ್ ಪ್ರತಾಪ್ ಮೋಸ ಹೀಗೆ ಹಲವಾರು ಪ್ರಕರಣ ಪೋಲಿಸರು ಬಿಗ್ಬಾಸ್ ಪ್ರವೇಶ ಮಾಡೋ ಹಾಗೆ ಮಾಡಿತ್ತು. ಈ ಸಲ ಹಾಗೆಲ್ಲ ಏನಿರಲ್ಲ ಸ್ಪರ್ಧಿಗಳೆಲ್ಲ ಸ್ಟ್ಯಾಂಡರ್ಡ್ ಎಂದು ಕೊಳ್ಳುವಷ್ಟರಲ್ಲಿ ಬಿಗ್ಬಾಸ್ ಮನೆಗೆ ಪೋಲಿಸರು ಪ್ರವೇಶಿಸಿದ್ದಾರೆ.
ಖಾಸಗಿ ವಾಹಿನಿ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮಹಿಳಾ ಆಯೋಗ ಬಿಗ್ ಶಾಕ್ ನೀಡಿದೆ. ಬಿಗ್ಬಾಸ್ನಲ್ಲಿ ಭಾಗವಹಿಸಿರುವ ಸ್ಪರ್ಧಾಳು ಮಹಿಳೆಯರಿಗೆ ಊಟ ಮತ್ತು ಶೌಚಾಲಯ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಬಿಗ್ಬಾಸ್ ಮನೆಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದರು.
ಆಯೋಗದ ಈ ನಡೆಗೆ ಗಡ ಗಡ ನಡುಗಿರುವ ಬಿಗ್ಬಾಸ್ ತಂಡ ನಾವೇ ಬಂದು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಬಿಗ್ಬಾಸ್ ಮನೆ ಪ್ರವೇಶ ಬೇಡ ಎಂದು ಪರಿ ಪರಿಯಾಗಿ ಬೇಡಿಕೊಂಡಿದೆ.ಬಿಗ್ ಬಾಸ್ ಮನೆಗೆ ಎಂಟ್ರಿ ಆಗದಂತೆ ಮಹಿಳಾ ಆಯೋಗಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರು ಮನವಿ ಮಾಡಕೊಂಡಿದ್ದು ನಾವೇ ನಿಮ್ಮ ಕಚೇರಿಗೆ ಬಂದು ಉತ್ತರ ನೀಡುತ್ತೇವೆ ಎಂದು ಕೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿನ ಊಟದ ವಿಚಾರದಲ್ಲಿನ ತಾರತಮ್ಯ ಹಾಗೂ ಶೌಚಾಲಯದ ಸಮಸ್ಯೆಗಳನ್ನು ಬಗೆಹರಿಸುತ್ತೆವೆ ಎಂದು ಆಯೋಜಕರು ಭರವಸೆ ನೀಡಿದ್ದಾರೆ. ಇದರ ಬೆನ್ನಲೇ ಇನ್ನು ವಕೀಲೆಯೊಬ್ಬರು ದೂರು ಕೂಡ ನೀಡಿದ್ದಾರೆ ಎನ್ನಲಾಗಿದೆ .
ಬಿಗ್ ಬಾಸ್‌ನಲ್ಲಿ ಕೆಲವರಿಗೆ ಕೇವಲ ಗಂಜಿ ಮಾತ್ರ ನೀಡಲಾಗುತ್ತಿದೆ. ಪೌಷ್ಠಿಕ ಆಹಾರ ನಿಡದೇ ಇರುವುದು ಅಪರಾಧ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ ಎಂದು ದೂರು ನೀಡಿರುವುದಾಗಿ ವರದಿಯಾಗಿದೆ. ಹಾಗಾಗಿ ಪೋಲಿಸರು ಪ್ರವೇಶಿಸಿ ಪರಿಶೀಲಿಸಲಿದ್ದಾರೆ ಎನ್ನಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.