ಬಿಗ್ ಬಾಸ್ ಅಶ್ವಿನಿ ಅಪ್ಪನಿಗೆ ಮೂರು ಮದುವೆ, ಬೆಂಗಳೂರು ಪೂರ್ತಿ ಇವರ ಅಪ್ಪನ ಕೈಯಲ್ಲಿತ್ತು
ಜನಪ್ರಿಯ ನಟಿ ಮತ್ತು ಬಿಗ್ ಬಾಸ್ ಕನ್ನಡ 12ನೇ ಸೀಸನ್‌ನ ಸ್ಪರ್ಧಿ ಅಶ್ವಿನಿ ಗೌಡ, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಬಿಚ್ಚಿಟ್ಟ ಹೇಳಿಕೆ ಹಲವರ ಮನಸ್ಸು ಮುಟ್ಟಿದೆ. ಅಶ್ವಿನಿ ಗೌಡ ರಾಜಕೀಯ ಹಿನ್ನೆಲೆಯ ಶ್ರೀಮಂತ ಕುಟುಂಬದವರು. ಹೆಸರು, ಹಣ, ಕೀರ್ತಿ ಎಲ್ಲವೂ ಹೊಂದಿದ್ದರೂ, ಜೀವನದ ಪಥದಲ್ಲಿ ಕೆಲವು ಸಂದರ್ಭಗಳಲ್ಲಿ ಹೊಂದಾಣಿಕೆಯ ಕೊರತೆ ಎದುರಾಗುತ್ತದೆ. ತಮ್ಮ ದಾಂಪತ್ಯ ಜೀವನ ವಿಫಲವಾದ ಕಾರಣವನ್ನು ಅವರು ಖಚಿತವಾಗಿ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.
ಇನ್ನು ತನ್ನ ಗಂಡನ ಬಗ್ಗೆ ಈ ರೀತಿಯಾಗಿ ಮಾತನಾಡಿದ ಅವರು ಒಳ್ಳೆಯ ವ್ಯಕ್ತಿ, ಒಳ್ಳೆಯ ತಂದೆ, ಒಳ್ಳೆಯ ಕುಟುಂಬದಿಂದ ಬಂದವರು. ಆದರೆ ಕೆಲವೊಮ್ಮೆ ವ್ಯಕ್ತಿಗಳ ನಡುವಿನ ಭಿನ್ನಾಭಿಪ್ರಾಯ ಮತ್ತು ಹೊಂದಾಣಿಕೆಯ ಕೊರತೆ ಸಂಬಂಧವನ್ನು ದೂರ ಮಾಡುತ್ತದೆ” ಎಂದು ಅಶ್ವಿನಿ ಹೇಳಿದರು. ಅನೈತಿಕ ಸಂಬಂಧ ಅಥವಾ ಗಂಭೀರ ಸಮಸ್ಯೆಗಳೇನೂ ಇಲ್ಲ. ಆದರೆ, ಗೌರವಯುತವಾಗಿ ಬೇರೆಯಾಗುವುದು ಸರಿಯೆಂದು ಇಬ್ಬರೂ ಒಟ್ಟಾಗಿ ನಿರ್ಧರಿಸಿದ್ವಿ ಎಂದಿದ್ದಾರೆ.
ಅವರ ಪ್ರಕಾರ, ದಾಂಪತ್ಯ ಜೀವನದಲ್ಲಿ ಜಗಳ ಮತ್ತು ಒತ್ತಡ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದಕ್ಕಿಂತ ಉತ್ತಮವಾಗಿ ಮಗನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇಬ್ಬರೂ ಬೇರ್ಪಟ್ಟರು. ತಂದೆ-ತಾಯಿ ಜಗಳವನ್ನು ನೋಡುತ್ತಾ ಬೆಳೆಸುವ ಬದಲು, ಶಾಂತ ಮತ್ತು ಸಮತೋಲನದ ಪರಿಸರದಲ್ಲಿ ಮಗ ಬೆಳೆದು ದೊಡ್ಡವನಾಗುವುದು ಮುಖ್ಯವೆಂದು ಅವರು ನಂಬಿದ್ದಾರೆ.
ಅಶ್ವಿನಿ ಗೌಡ ತಮ್ಮ ಮಾಜಿ ಪತಿಯ ಕುಟುಂಬದ ಬಗ್ಗೆ ಎಂದಿಗೂ ಕೆಟ್ಟ ಮಾತು ಆಡಿಲ್ಲ ಮತ್ತು ಅವರಿಗೂ ತನ್ನ ಮೇಲಿಲ್ಲ. “ಬದುಕಿ ಬದುಕಲು ಬಿಡಿ” ಎಂಬ ಸಂದೇಶವನ್ನು ತಮ್ಮ ಅನುಭವದಿಂದ ಹಂಚಿಕೊಂಡಿದ್ದಾರೆ.ಈ ಹೇಳಿಕೆಯಿಂದ ಅಶ್ವಿನಿ ಗೌಡ ಅವರು ತಮ್ಮ ದಾಂಪತ್ಯ ವಿಫಲತೆಯನ್ನು ದ್ವೇಷ ಅಥವಾ ನಕಾರಾತ್ಮಕತೆಯಿಂದ ಅಲ್ಲ, ಬದಲಾಗಿ ಗೌರವ ಮತ್ತು ಪರಸ್ಪರ ಅರ್ಥಮಾಡಿಕೊಳ್ಳುವ ದೃಷ್ಟಿಕೋಣದಿಂದ ನೋಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.