2 ಲಕ್ಷ ಬೆಲೆಯ ಚಿನ್ನ ಬಾರಿ ಬಿಗ್ ಬಾಸ್ ಬಟ್ಟೆ ಖರೀದಿ ಮಾಡಿದ್ದು, ಇದೀಗ 70 ಸಾವಿರ ಕೊಟ್ಟು ಮನೆಯಿಂದ ಔಟ್ ಮಾಡಿದ್ರು ಎಂದ ಕರಿಬಸಪ್ಪ
ಇತ್ತೀಚೆಗೆ ಬಿಗ್‌ಬಾಸ್ ಕನ್ನಡ ಸೀಸನ್ 12ನಿಂದ ಹೊರಬಂದ ಸ್ಪರ್ಧಿ ಕರಿಬಸಪ್ಪ, ತಮ್ಮ ಎಲಿಮಿನೇಷನ್ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಬಾಡಿಬಿಲ್ಡರ್ ಆಗಿರುವ ಕರಿಬಸಪ್ಪ ಬಿಗ್‌ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯದೇ ಹೊರಬಂದಿದ್ದರಿಂದ ಅಭಿಮಾನಿಗಳು ಆಶ್ಚರ್ಯಗೊಂಡಿದ್ದರು. ಆದರೆ ಅವರ ಪ್ರಕಾರ, ಅಲ್ಲಿ ಉಳಿಯಲು ಆಟಕ್ಕಿಂತ ಜೋಡಿ ಫ್ಯಾಕ್ಟರ್ ಹೆಚ್ಚು ಕೆಲಸ ಮಾಡುತ್ತಿತ್ತೆಂದು ಹೇಳಿದ್ದಾರೆ.
ಕರಿಬಸಪ್ಪ ಅವರು ಮನೆ ಒಳಗೆ ನನಗೆ ಊಟ ಸಾಕಾಗುತ್ತಿರಲಿಲ್ಲ. ಅರ್ಧ ಚಪಾತಿ, ಪೂರಿ ತಿನ್ನುವುದರಿಂದ ಆಟಕ್ಕಿಂತ ಬದುಕು ಕಷ್ಟವಾಗಿತ್ತು. ಆದರೂ ನಾನು ಅಲ್ಲಿ ನಗುವು ತರೋಕೆ ಪ್ರಯತ್ನಿಸಿದ್ದೆ. ಆದರೆ ಅಲ್ಲಿ ಎಲ್ಲರೂ ನಮ್ಮ ಜಂಟಿಗಳನ್ನು ಟಾರ್ಗೆಟ್ ಮಾಡಿದರು. ಈ ಆಟದಲ್ಲಿ ವ್ಯಕ್ತಿತ್ವ ಮುಖ್ಯ, ಡಬಲ್ ಮೀನಿಂಗ್ ಮಾತುಗಳು ನನಗೆ ಇಷ್ಟವಿಲ್ಲ, ಎಂದು ಹೇಳಿದ್ದಾರೆ.
ಅವರು ಇನ್ನೂ ಮುಂದೆ ಹೇಳಿದ್ದು, ನನಗೆ ಒಂದು ಹುಡುಗಿ ಜೋಡಿಯಾಗಿ ಇದ್ದಿದ್ದರೆ ನಾನು ಎಲಿಮಿನೇಟ್ ಆಗುತ್ತಿರಲಿಲ್ಲ. ಅಲ್ಲಿ ಹುಡುಗ-ಹುಡುಗಿ ಜೋಡಿಗಳು ಇದ್ದವರು ಪಾರಾಗಿದರು. ನನ್ನ ಜೊತೆ ಒಂದು ಮುದ್ದಾದ ಹುಡುಗಿ ಇದ್ದಿದ್ದರೆ, ಆಕೆ ಕೇವಲ ನಗುವಿನಲ್ಲೇ ನನ್ನನ್ನ ಪಾರಮಾಡ್ತಿದ್ದಳು,ಎಂದು ನಗೆಮಿಶ್ರಿತವಾಗಿ ಹೇಳಿದ್ದಾರೆ.
ಕರಿಬಸಪ್ಪ ಅವರ ಪ್ರಕಾರ, ಬಿಗ್‌ಬಾಸ್‌ನಲ್ಲಿ ಇಂದು ಆಟಕ್ಕಿಂತಲೂ ಆಕರ್ಷಕತೆ ಮತ್ತು ಜೋಡಿ ಕಮಿಸ್ಟ್ರಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ಅಲ್ಲಿ ಕೆಲವರು ಆಟ ಆಡ್ತಿಲ್ಲ, ಆದರೆ ಅವರ ಸ್ಮೈಲ್ ಮತ್ತು ಸ್ಟೈಲ್ ಅವರಿಗೆ ಉಳಿಯಲು ಸಹಾಯ ಮಾಡುತ್ತಿದೆ. ನಾವು ಒಂಟಿಯಾಗಿ ಬಂದ್ದರಿಂದ ಎಲಿಮಿನೇಟ್ ಆಯ್ತು ಅನ್ನಿಸುತ್ತದೆ, ನನಗಿಂತ ನನ್ನ ಹೆಂಡತಿಗೆ ಬೇಸರ ಹೆಚ್ಚಾಗಿ ಆಗಿದೆ. ಏಕೆಂದರೆ ನನ್ನ ಅಲ್ಲಿಗೆ ಕಳಿಸಲು ಅವಳೇ ಎಲ್ಲಾ ತಯಾರಿ ನಡೆಸಿದ್ದಳು ಎಂದಿದ್ದಾರೆ.