ಬಿಗ್ ಬಾಸ್ ಗೆಳೆಯ ವತೂ೯ರ್ ಸಂತೋಷ್ ಮನೆಗೆ ಭೇಟಿ ಕೊಟ್ಟ ಬೆಂಕಿ, ಸಂಭ್ರಮಿಸಿದ ಊರ ಜನ

 | 
Hhh

ಬಿಗ್​ಬಾಸ್  ಕನ್ನಡ ಸೀಸನ್ 10ರ ಫಿನಾಲೆ ದಿನ ಎಲಿಮಿನೇಟ್ ಆದ ವರ್ತೂರು ಸಂತೋಷ್ , ನಾನು ಟ್ರೋಫಿ ಗೆಲ್ಲದಿರಬಹುದು ಆದರೆ ಕೋಟ್ಯಂತರ ಜನರ ಮನಸ್ಸು ಗೆದ್ದಿದ್ದೇನೆ. ನಾನು ಸೋತಿಲ್ಲ ಗೆದ್ದವರು ಎಂದು ತಮ್ಮ ಪಯಣದ ಬಗ್ಗೆ ಹೇಳಿಕೊಂಡಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ವರ್ತೂರು ಸಂತೋಷ್, ತನಿಷಾ ಕುಪ್ಪಂಡ ಜೊತೆಗೆ ಬಾಂಧವ್ಯ ಹೊಂದಿದ್ದರು.

ಆದರೆ ಆ ಬಗ್ಗೆ ಕೆಟ್ಟದಾಗಿ ಕೆಲವರು ಮಾತನಾಡಿದ್ದರು, ತಮ್ಮ ಸ್ನೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ವರ್ತೂರು ಸಂತೋಷ್ ಖಡಕ್ ಉತ್ತರ ಕೊಟ್ಟಿದ್ದಾರೆ. ಜೊತೆಗೆ ತಮ್ಮ ಹಾಗೂ ತುಕಾಲಿ ಸಂತು ಅವರ ಸ್ನೇಹದ ಬಗ್ಗೆಯೂ ಸಹ ವರ್ತೂರು ಸಂತೋಷ್ ಮಾತನಾಡಿದ್ದಾರೆ. ಆದರೂ ಜನ ಮಾತ್ರ ಸೂಪರ್ ಜೋಡಿ, ಮದುವೆ ಯಾವಾಗ? ಜೊತೆಯಾಗಿ ಸಖತ್ ಆಗಿ ಕಾಣ್ತೀರಿ ಎಂದು ಇವರನ್ನು ಲವರ್ಸ್ ಎಂಬಂತೆಯೇ ಬಿಂಬಿಸುತ್ತಿರುವುದು ಮುಂದುವರಿದಿದೆ. ಇದೀಗ ಅವರ ಮತ್ತೂಂದು ಸುದ್ದಿ ವೈರಲ್ ಆಗಿದೆ.

ಹೌದು ವರ್ತೂರ್ ಸಂತೋಷ್ ಮನೆಗೆ ತನೀಶಾ ಭೇಟಿ ನೀಡಿದ್ದಾರೆ. ಅವರ ತೋಟ ಗದ್ದೆಗಳನ್ನು ನೋಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ವರ್ತೂರ್ ಸಂತೋಷ್ ಅವರ ತಾಯಿ ಅವರನ್ನು ಭೇಟಿ ಆಗಿ ಆಶೀರ್ವಾದ ಪಡೆದಿದ್ದಾರೆ. ಎಂದೆಲ್ಲ ರೂಮರ್ ಹಬ್ಬುತ್ತಿದೆ. ಆದರೆ ಈ ವರೆಗು ಇವರಿಬ್ಬರೂ ಈ ಘಟನೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಕೆಲ ಮೂಲಗಳು ಇದನ್ನು ಸುಳ್ಳು ಎಂದು ಹೇಳುತ್ತಿವೆ. ಬಿಗ್ ಬಾಸ್‌ ಕನ್ನಡ 10 ಕಾರ್ಯಕ್ರಮದಲ್ಲಿ ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಮಧ್ಯೆ ಒಳ್ಳೆಯ ಸ್ನೇಹ ಇತ್ತು. 

ಬಿಗ್ ಬಾಸ್‌ ಮನೆಯಿಂದ ಹೊರಗೆ ಬಂದ್ಮೇಲೂ ಆ ಸ್ನೇಹ ಮುಂದುವರೆದಿದೆ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಎಂದು ಈಗಾಗಲೆ ಹಲವು ಬಾರಿ ತನಿಶಾ ಸಹ ಹೇಳಿದ್ದಾಳೆ ಅಲ್ಲದೆ ವರ್ತೂರ್ ಸಂತೋಷ್ ಕೂಡ ಈ ಮಾತನ್ನು ಹೇಳಿದ್ದಾರೆ. ಆದರೆ ಫ್ಯಾನ್ಸ್ ಮಾತ್ರ ಇವರಿಗೆ ಮದುವೆ ಮಾಡುವುದರಲ್ಲೇ ಇದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.