ಬಿಗ್ ಬಾಸ್ ಚೈತ್ರ ಕುಂದಾಪುರ ಪೊಳಲಿ ದೇವಾಲಯಕ್ಕೆ ಭೇಟಿ, ಅಭಿಮಾನಿಗಳ ದಂಡು ಕಂಡು ಲೇಡಿ ಟೈಗರ್ ಫಿದಾ

 | 
Bbb
ನಿಮಗೆಲ್ಲಾ ಗೊತ್ತೇ ಇರುವ ಹಾಗೆ ಕಳೆದ ವಾರ ದೊಡ್ಡದಾಗಿ ಸುದ್ದಿ ಮಾಡಿದವರಲ್ಲಿ ಚೈತ್ರಾ ಕುಂದಾಪುರ ಕೂಡ ಒಬ್ಬರು. ಒಂದು ಕಡೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಮಾಜಿ ಬಿಗ್‌ ಬಾಸ್ ಕನ್ನಡದ ಸ್ಪರ್ಧಿ ಸುದ್ದಿಯಲ್ಲಿದ್ದರು. ವಿವಾಹವಾದ ಬೆನ್ನಲ್ಲೇ ಮಗಳ ಮೇಲೆ ತಂದೆಯೇ ಆರೋಪಗಳ ಸುರಿಮಳೆಯನ್ನು ಸುರಿಸಿದ್ದರು. ಮಗಳನ್ನೇ ಕಳ್ಳಿ ಎಂದು ಹೇಳಿದ್ದರು. ಖುಷಿಯಾಗಿ ಮದುವೆಯಾಗಿದ್ದ ಚೈತ್ರಾ ಕುಂದಾಪುರ ತಂದೆಯ ಟೀಕೆಯನ್ನು ಎದುರಿಸುವಂತಾಗಿತ್ತು.
ಚೈತ್ರಾ ಕುಂದಾಪುರ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡಕ್ಕೆ ಎಂಟ್ರಿ ಕೊಟ್ಟಲ್ಲಿಂದ ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ವಿವಾದದ ಬಳಿಕ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದ ಚೈತ್ರಾ ರಿಯಾಲಿಟಿ ಶೋ ಎಂಟ್ರಿ ಕೊಡುತ್ತಿದ್ದಂತೆ ಅವರ ಅದೃಷ್ಟವೇ ಬದಲಾಗಿತ್ತು. ಇದೇ ಜೋಷ್‌ನಲ್ಲಿ ವೈವಾಹಿಕ ಜೀವನಕ್ಕೂ ಕಾಲಿಡುವುದಕ್ಕೆ ನಿರ್ಧರಿಸಿದ್ದರು. ಕೊನೆಗೂ ತಾನು ಪ್ರೀತಿಸಿದ ಹುಡುಗನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಾಲೇಜು ದಿನಗಳಿಂದ ಅಂದರೆ, ಸರಿ ಸುಮಾರು 12 ವರ್ಷಗಳಿಂದ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಪ್ರೀತಿ ಮಾಡುತ್ತಿದ್ದರು. ಕೊನೆಗೂ ಇಬ್ಬರೂ ಅವರ ಮನೆಯವರನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಎಂಟ್ರಿಕೊಟ್ಟಿದ್ದಾರೆ. ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರಿಗಷ್ಟೇ ಆಹ್ವಾನ ನೀಡಲಾಗಿತ್ತು. ಇವರ ಮದುವೆಗೆ ಬಿಗ್‌ ಬಾಸ್‌ನ ಸ್ನೇಹಿತರಾದ ಉಗ್ರಂ ಮಂಜು, ರಜತ್, ಧನರಾಜ್ ಸೇರಿದಂತೆ ಹಲವು ಮಂದಿ ಭಾಗವಹಿಸಿ ಆಶೀರ್ವಾದವನ್ನು ಮಾಡಿದ್ದರು.
ಮದುವೆ.. ಮದುವೆ ಬಳಿಕ ವಿವಾದ. ಇದೆಲ್ಲವೂ ಮುಗಿಯುತ್ತಿದ್ದಂತೆ ಚೈತ್ರಾ ಕುಂದಾಪುರ ಹೆಸರು ಬದಲಾವಣೆ ಬಗ್ಗೆನೂ ಸುದ್ದಿಯಾಗುತ್ತಿದೆ. ಪತಿ ಶ್ರೀಕಾಂತ್ ಕಶ್ಯಪ್ ಅವರ ತಾಯಿ ಚೈತ್ರ ಕುಂದಾಪುರ ಅವರ ಹೆಸರನ್ನು ಬದಲಾಯಿಸಿದ್ದಾರೆ ಎಂದು ಹೇಳಲಾಗಿದೆ. ಸಂಪ್ರದಾಯ ಬದ್ಧವಾಗಿ ಚೈತ್ರಾ ಕುಂದಾಪುರ ಅವರ ಹೆಸರನ್ನು ಶ್ರೀಮೇಧಾ ಎಂದು ಬದಲಾವಣೆ ಮಾಡಲಾಗಿದೆ. ಪತಿ ಶ್ರೀಕಾಂತ್ ಅವರ ತಾಯಿ ಬಾಳೆ ಹಣ್ಣನ್ನು ತಿನ್ನಿಸುವ ಮೂಲ ಚೈತ್ರಾ ಹೆಸರನ್ನು ಸಂಪ್ರದಾಯದಂತೆ ಬದಲಾವಣೆ ಮಾಡಿದ್ದಾರೆ. ಇದು ಅವರ ಕಡೆಯ ಶಾಸ್ತ್ರ ಎಂದು ಹೇಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.