ಸದ್ದಿಲ್ಲದೆ ಮದುವೆಯಾದ ಬಿಗ್ ಬಾಸ್ ಸ್ಪರ್ಧಿ ರಂಜಿತ್, ಹುಡುಗಿ ಮಾತ್ರ ಅಪ್ಸರೆ

 | 
ಕಕ
ಶನಿ ಸೀರಿಯಲ್ ಸೂರ್ಯದೇವ ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಯಾಗಿದ್ದ ರಂಜಿತ್​ ಕುಮಾರ್​ ಅವರು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಹೌದು, ಬಿಗ್​ಬಾಸ್​ ಸೀಸನ್ 11ಕ್ಕೆ ಕೊನೆಯ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ರಂಜಿತ್​ ಅವರು ಪ್ರೀತಿಸಿದ ಹುಡುಗಿ ಜೊತೆಗೆ ಎಂಗೇಜ್​ ಆಗಿದ್ದಾರೆ.
ನಟ ಹಾಗೂ ಬಿಗ್‌ ಬಾಸ್‌ ಸ್ಪರ್ಧಿ ರಂಜಿತ್‌ ಮಾನಸ ಎಂಬುವವರ ಜೊತೆ ಉಂಗುರು ಬದಲಾಯಿಸಿಕೊಂಡು ಸಿಂಗಲ್‌ ಲೈಫ್‌ಗೆ ಗುಡ್‌ ಬೈ ಹೇಳಿದ್ದಾರೆ. ಮದುವೆಯಾಗಲು ಸಜ್ಜಾಗಿರುವ ನಟ ರಂಜಿತ್‌ & ಮಾನಸ, ಕುಟುಂಬಸ್ಥರು ಮತ್ತು ಕೆಲವೇ ಕೆಲ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ನಟ ರಂಜಿತ್‌ ಮತ್ತು ಮಾನಸ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ಈ ಬಗ್ಗೆ ಗುಡ್‌ ನ್ಯೂಸ್‌ ನೀಡಿದ್ದಾರೆ.
ನಟ ರಂಜಿತ್‌, ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿ, ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಟಫ್‌ ಕಾಂಪಿಟೇಟರ್‌ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಬಿಗ್‌ ಬಾಸ್‌ನಿಂದ ಹೊರಬಂದ ಬಳಿಕ ವೃತ್ತಿಯಲ್ಲಿ ಡಿಸೈನರ್‌ ಮತ್ತು ಸ್ಟೈಲಿಸ್ಟ್‌ ಆಗಿರುವ ಮಾನಸ ಅವರನ್ನು ಮದುವೆಯಾಗಲು ರಂಜಿತ್‌ ಸಜ್ಜಾಗಿದ್ದಾರೆ. ʻಮಾನಸ ಗೌಡ, ದಿ ಫ್ಯಾಷನ್‌ ಸ್ಟೇಟ್‌ಮೆಂಟ್‌ʼ ಎಂಬ ಹೆಸರಿನ ಫ್ಯಾಷನ್‌ ಸ್ಟುಡಿಯೋವನ್ನು ಹೊಂದಿರುವ ಮಾನಸ ಈಗ ರಂಜಿತ್‌ ಕೈ ಹಿಡಿಯುತ್ತಿದ್ದಾರೆ. ಸದ್ಯ ಎಂಗೇಜ್‌ಮೆಂಟ್ ಆಗಿದ್ದು ಮದುವೆ ಯಾವಾಗ ಅನ್ನೋದು ಬಹಿರಂಗವಾಗಿಲ್ಲ.
ರಂಜಿತ್​ ಅವರು ನಿಶ್ಚಿತಾರ್ಥ ಮಾಡಿಕೊಂಡಿರೋ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ, ರಂಜಿತ್​ ಅವರು ಪ್ರೀತಿಸಿದ ಹುಡುಗಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟಿದ್ದಾರೆ.ರಂಜಿತ್​ ಅವರು ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿಯ ಹೆಸರು ಮಾನಸಾ ಗೌಡ. 
ಇವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಸದ್ಯ ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು‌ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.