ಕಿಚ್ಚನ ಬಗ್ಗೆ ಸ್ನೇಹಿತ್ ಮಾತು, ರೊ.ಚ್ಚಿಗೆದ್ದ ಬಿಗ್ ಬಾಸ್

 | 
Bd

ಈ ಬಾರಿ ಕ್ಯಾಪ್ಟನ್ ಆದವರಿಗೆ ಬಿಗ್ ಬಾಸ್ ದುಪ್ಪಟ್ಟು ಅಧಿಕಾರ ಕೊಟ್ಟಿದ್ದರು. ಅದರಂತೆ ಇಬ್ಬರು ಸ್ಪರ್ಧಿಗಳು ತಾವು ಬಿಗ್‌ ಬಾಸ್ ಮನೆಯಲ್ಲಿ ಮಾಡಿದ್ದೇನು? ಯಾಕೆ ಬಿಗ್ ಬಾಸ್‌ನಲ್ಲಿ ಇರಬೇಕಿತ್ತು ಅಂತ ವಾದ ಮಾಡಬೇಕಿತ್ತು. ಸ್ನೇಹಿತ್ ಆ ಸ್ಪರ್ಧಿಗಳ ವಾದ-ಪ್ರತಿವಾದವನ್ನು ಆಲಿಸಿ ನಾಮಿನೇಟ್ ಮಾಡಬೇಕಿತ್ತು. ಬಿಗ್ ಬಾಸ್ ಹೀಗೆ ನಾಮಿನೇಟ್ ಮಾಡಬೇಕು ಅಂತ ಅಂದಾಗಲೇ ಸ್ನೇಹಿತ್‌ ಮಾತ್ರ ತಮ್ಮ ಟೀಂ ಅವರನ್ನು ನಾಮಿನೇಶನ್‌ನಿಂದ ಬಚಾವ್ ಮಾಡ್ತಾರೆ ಅಂತ ವೀಕ್ಷಕರು ಲೆಕ್ಕ ಹಾಕಿದ್ದರು. ಅದರಂತೆಯೇ ಆಗಿದೆ.

ವಿನಯ್ ಗೌಡ ಅವರು ಅಗ್ರೆಸ್ಸಿವ್‌ನಿಂದ ಆಟ ಆಡಿ, ಎಷ್ಟು ವಾದ-ವಿವಾದ ಮಾಡಿದ್ದಾರೆ ಎನ್ನೋದು ಗೊತ್ತಿದೆ. ಸಿರಿ ಹಾಗೂ ವಿನಯ್ ಮಧ್ಯೆ ಸ್ನೇಹಿತ್ ಅವರು ವಿನಯ್‌ರನ್ನು ಬಚಾವ್ ಮಾಡಿದ್ದಾರೆ. ವಿನಯ್ ಗೌಡ ಅವರು ಅಗ್ರೆಸ್ಸಿವ್‌ನಿಂದ ಆಟ ಆಡಿ, ಎಷ್ಟು ವಾದ-ವಿವಾದ ಮಾಡಿದ್ದಾರೆ ಎನ್ನೋದು ಗೊತ್ತಿದೆ. ಸಿರಿ ಹಾಗೂ ವಿನಯ್ ಮಧ್ಯೆ ಸ್ನೇಹಿತ್ ಅವರು ವಿನಯ್‌ರನ್ನು ಬಚಾವ್ ಮಾಡಿದ್ದಾರೆ.

ತನಿಷಾ, ಕಾರ್ತಿಕ್ ಅವರು ಮನೆಯ ಎಲ್ಲ ಕೆಲಸಗಳಲ್ಲಿ ಭಾಗಿಯಾಗಿ ಟಾಸ್ಕ್‌ಗಳಲ್ಲಿ ಚೆನ್ನಾಗಿ ಆಡಿದ್ದರು. ವರ್ತೂರು ಸಂತೋಷ್ ಅವರು ಕೆಲ ದಿನ  ಹುಲಿ ಉಗುರು ಧರಿಸಿರುವ ಆರೋಪದಡಿ ಮನೆಯಿಂದ ಆಚೆ ಇದ್ದಿದ್ದರು. ವರ್ತೂರು ಅಷ್ಟಾಗಿ ಟಾಸ್ಕ್ ಆಡಿಲ್ಲ, ದನಿಯೂ ಎತ್ತಿಲ್ಲ, ಒಮ್ಮೊಮ್ಮೆ ಅವರು ಮನೆಯಲ್ಲಿ ಇರೋದು ಮರೆತು ಹೋಗತ್ತೆ. ಹೀಗಿರುವಾಗ ಕಾರ್ತಿಕ್, ತನಿಷಾರನ್ನು ಬಿಟ್ಟು ವರ್ತೂರು ಸಂತೋಷ್‌ರನ್ನು ಆಯ್ಕೆ ಮಾಡಲಾಯ್ತು.

ಡ್ರೋನ್ ಪ್ರತಾಪ್ ಹಾಗೂ ನಮ್ರತಾ ಗೌಡ ಮಧ್ಯೆ ನಮ್ರತಾ ಅವರನ್ನು ಆಯ್ಕೆ ಮಾಡಲಾಗುತ್ತದೆ ಎಂದು ವೀಕ್ಷಕರಿಗೆ ಗೊತ್ತಿತ್ತು. ಕಳೆದ ವಾರ ಡ್ರೋನ್ ಪ್ರತಾಪ್ ಅವರು ಕ್ಯಾಪ್ಟನ್ಸಿ ಟಾಸ್ಕ್ ವಿಚಾರದಲ್ಲಿ ಕಾರ್ತಿಕ್, ನಮ್ರತಾರನ್ನು ಹೊರಗಡೆ ಇಟ್ಟಿದ್ದನ್ನೇ ದೊಡ್ಡ ಕಾರಣವನ್ನಾಗಿ ಮಾಡಿಕೊಂಡು ನಮ್ರತಾರನ್ನು ಸೇವ್ ಮಾಡಿದರು. ನಮ್ರತಾ ಅವರು ಕಳೆದ ವಾರ ಚೆನ್ನಾಗಿ ಆಡಿದ್ದರು, ಅಲ್ಲಿಯವರೆಗೆ ಅವರು ಏನೂ ಮಾಡಿಲ್ಲ.

ನಮ್ರತಾ ಗೌಡ, ವಿನಯ್ ಗೌಡ ಅವರು ಸ್ನೇಹಿತ್‌ರ ಆತ್ಮೀಯ ಗೆಳೆಯರು ಎನ್ನೋದು ಎಲ್ಲರಿಗೂ ಗೊತ್ತಿದೆ. ಇನ್ನು ತುಕಾಲಿ ಸ್ಟಾರ್, ವರ್ತೂರು ಸಂತೋಷ್ ಅವರನ್ನು ಕೂಡ ಸ್ನೇಹಿತ್ ಈ ಬಾರಿ ಪರಿಗಣಿಸಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಕಾರ್ತಿಕ್, ತನಿಷಾ, ಸಂಗೀತಾ, ಡ್ರೋನ್ ಪ್ರತಾಪ್ ಕಂಡರೆ ಸ್ನೇಹಿತ್‌ಗೆ ಮೊದಲಿನಿಂದಲೂ ಆಗೋದಿಲ್ಲ. ಇವರನ್ನು ಸೇವ್ ಮಾಡಿದ್ದಾರೆ ಅಂದರೆ ಏನೋ ಮಸಲತ್ತು ಮಾಡುತ್ತಿದ್ದಾರೆ ಅನ್ನೋದಂತು ಪಕ್ಕಾ.

ವಿನಯ್ ಅವರಲ್ಲಿ ಈ ಆಟವನ್ನ ಗೆಲ್ಲಲೇಬೇಕು ಅಂತ ಕಿಚ್ಚಿದೆ. ವಿನಯ್ ಅವರ ಸ್ವೀಟ್‌ ಸೈಡ್‌ನ ನಾನು ನೋಡಿದ್ದೀನಿ. ಟಾಸ್ಕ್‌ನಲ್ಲಿ ರಕ್ತ, ಬೆವರು ಸುರಿಸಿ ಆಡುತ್ತಾರೆ. ಅದು ನನಗೆ ಇಷ್ಟ. ಆ ತರಹದ ಪ್ಲೇಯರ್‌ ಇದ್ದರೆ, ನಮಗೂ ಒಂದು ಮೋಟಿವೇಷನ್. ನಾನು ವಿನಯ್ ಅವರಿಗೆ ಏನು ಮಾಡಿದ್ಧೀನಿ ಅಂತ ಒಂದಷ್ಟು ಜನ ನೋಡಿರಬಹುದು. ಅದಕ್ಕೆ ನಾನು ಚೇಲಾ ಅನಿಸಿರಬಹುದು. ಆದರೆ, ವಿನಯ್ ಅವರು ನನಗೇನು ಮಾಡಿದ್ದಾರೆ ಅಂತ ನನಗೆ ಮಾತ್ರ ಗೊತ್ತು ಎಂದು ಸ್ನೇಹಿತ್‌ ಹೇಳಿ ಸಮರ್ಥಿಸಿ ಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.