ಹೂವಿನ ಬಾಣದಂತೆ ವೈರಲ್ ಹುಡುಗಿ ನಿತ್ಯಾಶ್ರೀ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ ಸಾಧ್ಯತೆ

 | 
Nithya

ಸೋಷಿಯಲ್ ಮೀಡಿಯಾ ಯುಗದಲ್ಲಿ ಪ್ರತಿಭೆ ತೋರಿಸಲು ವೇದಿಕೆಯ ಕೊರತೆ ಇಲ್ಲ. ಇತ್ತೀಚಿಗೆ ಕನ್ನಡ ಹಾಡು ‘ಹೂವಿನ ಬಾಣದಂತೆ’ ತನ್ನದೇ ಶೈಲಿಯಲ್ಲಿ ಹಾಡಿ ವೈರಲ್ ಆದ ಮಂಡ್ಯ ಮೂಲದ ಯುವತಿ ನಿತ್ಯಶ್ರೀ, ದುಃಖಕರ ಅಪಘಾತಕ್ಕೊಳಗಾಗಿದ್ದಾರೆ. ಮೈಸೂರಿನಲ್ಲಿ ಓದುತ್ತಿರುವ ಕಾಲೇಜು ವಿದ್ಯಾರ್ಥಿನಿ ನಿತ್ಯಶ್ರೀ ಅವರ ಹಾಡು ರಾತ್ರೋರಾತ್ರಿ ಟ್ರೆಂಡ್ ಆಗಿ, ಕನ್ನಡಿಗರ ಮನ ಗೆದ್ದಿತ್ತು. 

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಎನ್ನುವ ಆ ಮೆಲೋಡಿಯ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ಕಿವಿಗಳಿಗೆ ತಲುಪಿದ್ದವು.ಆದರೆ, ಈ ಯಶಸ್ಸಿನ ಮಧ್ಯೆ ನಿತ್ಯಶ್ರೀ ಅವರ ಜೀವನದಲ್ಲಿ ಅಪ್ರತೀಕ್ಷಿತ ಘಟನೆ ನಡೆಯಿತು. ವರದಿಗಳ ಪ್ರಕಾರ, ಅವರು ಭೀಕರ ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ವೈದ್ಯರು ಅವರ ಪ್ರಾಣಕ್ಕೆ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದರೂ, ಅವರ ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿ ಅಭಿಮಾನಿಗಳನ್ನು ಕಳವಳಗೊಳಿಸಿವೆ.ಸೋಷಿಯಲ್ ಮೀಡಿಯಾದಲ್ಲಿ ನಿತ್ಯಶ್ರೀಗೆ ಶೀಘ್ರ ಗುಣಮುಖತೆ ಕೋರಿ ಸಾವಿರಾರು ಸಂದೇಶಗಳು ಹರಿದುಬಂದಿವೆ. ಕೆಲ ಅಭಿಮಾನಿಗಳು ಅವರ ಹೆಸರಿನಲ್ಲಿ ವಿಶೇಷ ಪ್ರಾರ್ಥನೆಗಳನ್ನೂ ಆರಂಭಿಸಿದ್ದಾರೆ.

 ಅವಳು ಮತ್ತೆ ವೇದಿಕೆಯ ಮೇಲೆ ಹಾಡಲಿ, ನಗು ಮುಖದಿಂದ ಹಿಂತಿರುಗಲಿ ಎಂಬ ಕಾಮೆಂಟುಗಳು ಎಲ್ಲೆಡೆ ಓದಬಹುದು.ಇಂದಿನ ಯುಗದಲ್ಲಿ ಸೋಷಿಯಲ್ ಮೀಡಿಯಾ ಯುವ ಪ್ರತಿಭೆಗಳಿಗೆ ವೇದಿಕೆ ಆಗಿದ್ದರೂ, ನಿತ್ಯಶ್ರೀ ಅವರ ಘಟನೆ ಎಲ್ಲರಿಗೂ ಜಾಗೃತಿಯ ಸಂದೇಶ ನೀಡುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ನಿತ್ಯಶ್ರೀ ಚಿತ್ರ ವಿಚಿತ್ರವಾಗಿ ಹಾಡಿ ಜನ ಮೆಚ್ಚುಗೆ ಪಡೆದಿದ್ದಾರೆ ಎಂದರೆ ತಪ್ಪಿಲ್ಲ ಬಿಡಿ.