ಬಿಗ್ಬಾಸ್ ಮನೆಯಲ್ಲಿ ದೆವ್ವದ ಕಾಟ, ಹೆದರಿ ಓಡಿಹೋದ ಸ್ಫಧಿ೯ಗಳು

 | 
Ji
 ಬಿಗ್‌ಬಾಸ್‌ ಕನ್ನಡ 11 ರ ಎರಡನೇ ವಾರದ ಮೂರನೇ ದಿನ ಮನೆಯಲ್ಲಿ  ಸ್ಪರ್ಧಿಗಳಿಗೆ ದೆವ್ವದ ಕಾಟವಿದೆ ಎಂಬ ಭಯ  ಆರಂಭವಾಗಿದೆ. ಕಾರಣ ಮನೆಯಲ್ಲಿ ತನ್ನಷ್ಟಕ್ಕೆ ಎರಡು ಊಟದ ತಟ್ಟೆಗಳು ಒಡೆದು ಹೋಗಿದೆ. ಮಧ್ಯಾಹ್ನ ಎಲ್ಲರೂ ಮಾತನಾಡುತ್ತಾ ಬೆಡ್‌ ರೂಂ ನಲ್ಲಿ ಕುಳಿತಿರುವಾಗ ಅಡುಗೆ ಮನೆಯಲ್ಲಿ ತನ್ನಷ್ಟಕ್ಕೆ  ತಟ್ಟೆ ಬಿದ್ದು ಒಡೆಯಿತು.  ಹೀಗಾಗಿ ಎಲ್ಲರೂ ಹೇಗೆ ಒಡೆದು ಹೋಗುತ್ತಿದೆ ಎಂದು ತಲೆ ಕೆಡಿಸಿಕೊಂಡರು. 
ಭವ್ಯಾ ಗೌಡ ಮತ್ತು ಐಶ್ವರ್ಯಾ ದೆವ್ವ ಗಿವ್ವ ಇದೆಯಾ? ಭಯವಾಗುತ್ತಿದೆ ಅಂತ ಮಾತನಾಡಿಕೊಂಡರು.ಐಶ್ವರ್ಯಾ ಅವರು ನನಗೆ ದೆವ್ವ ಇದೆ ಅಂತ ಅನ್ನಿಸುತ್ತಿದೆ ನಾನು ಈಗ ಹಾಗೇ ನೆನೆಸಿಕೊಂಡೆ ಎಂದರು. 
ಈ ವೇಳೆ ಮಂಜು, ಗೌತಮಿ ಅಲ್ಲೇ  ಇದ್ದು ಏನೂ ಇಲ್ಲ ನೆಗೆಟಿವ್‌ ಹೋಗಿದೆ. ದೆವ್ವ ಗಿವ್ವ ಏನೂ ಇಲ್ಲ ಎಂದರು. ಕುಕ್ಕರ್ ವಿಶಲ್ ಬಂದು ಹೋಗಬೇಕಾದ್ರು ಹಾಗೇ ಆಗಿದೆ. ಕೋಟ್ಯಂತರ ಜನ ಶೋ ನೋಡುತ್ತಾರೆ. ದೃಷ್ಟಿಯಾಗಿದೆ  ಎಂದು ಮಂಜು ಹೇಳಿದ್ದಾರೆ.
ಇದಕ್ಕೆ ಉಗ್ರಂ ಮಂಜು ಹಾಗೂ ಇತರರು ಇಲ್ಲ ಹಾಗೇನಿಲ್ಲ. ದೆವ್ವ- ಗಿವ್ವಾ ಏನೂ ಇರಲ್ಲ ಎಂದಿದ್ದಾರೆ.  ಮತ್ತೊಬ್ಬರು ನೆಗೆಟಿವ್‌ ಎನರ್ಜಿ ಎಲ್ಲ ಹೋಯಿತು ಅನ್ಕೊಳ್ಳಿ ಎಂದು ಐಶ್ವರ್ಯಾ ಅವರಿಗೆ ಧೈರ್ಯ ತುಂಬಿದ್ದಾರೆ. ಹೀಗೆ ಮಾತನಾಡುವಾಗಲೇ ಸ್ಪರ್ಧಿಗಳ ಮುಂದೆಯೇ ಮತ್ತೊಂದು ತಟ್ಟೆ ಒಡೆದು ಹೋಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಇನ್ನೊಂದು ಕಡೆ ಧರ್ಮ ಕೀರ್ತಿರಾಜ್ ಅವರು ಪೊಟೇಟೋ ಪೀಲ್‌ ಮಾಡುವಾಗ ಕೈಗೆ ಗಾಯ ಮಾಡಿಕೊಂಡರು. ಇದಕ್ಕೆ ಐಶ್ವರ್ಯಾ ಸಿಂಧೋಗಿ ಶಾಕ್ ಆದರು. ಹೀಗಾಗಿ ಧರ್ಮ ಅವರು ಮಾಡುತ್ತಿದ್ದ ಕೆಲಸವನ್ನು ಐಶ್ವರ್ಯಾ ಅವರು ಮಾಡಲು ಮುಂದಾಗಿ ಐಶ್ವರ್ಯಾ ಕೂಡ ಕೈಗೆ ಗಾಯ ಮಾಡಿಕೊಂಡರು. ಇದಕ್ಕೆ ಮನೆಯವರೆಲ್ಲ ಸೇರಿ ಅವನು ಕೈ ಕುಯ್ಯಕೊಂಡಿದ್ದಕ್ಕೆ ಇವಳು ಕುಯ್ಯಕೊಂಡಳು ಇಬ್ಬರಿಗೂ ಒಳ್ಳೆ ಅಂಡರ್‌ ಸ್ಟಾಂಡಿಂಗ್ ಇದೆ ಎಂದು ಎಲ್ಲರೂ ಕಾಲೆಳೆದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.