ಬಿಗ್ ಬಾಸ್ ಮನೆಯ ಕರಿಬಸಪ್ಪ ಅವರು ಕರ್ನಾಟಕದ ಪೊಲೀಸರಿಗೂ ಜಿಮ್ ಟ್ರೈನ್ ಮಾಡುತ್ತಾರೆ, ಇವರ ಬಾಡಿ ನೋಡಿ ಸರ್ಕಾರ ಕೂಡ ಫಿದಾ ಆಗಿದೆ

 | 
ಕರಿಬಸಪ್ಪ

ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಹೊಸ ಸಂಚಲನ ತಂದಿದ್ದಾರೆ ದೇಹದಾಢ್ಯ ಚಾಂಪಿಯನ್ ಎಲ್.ಎಂ. ಕರಿಬಸಪ್ಪ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಈ ಬಾಡಿ ಬಿಲ್ಡರ್ ಈಗ ರಿಯಾಲಿಟಿ ಶೋನಲ್ಲಿ ತನ್ನ ವಿಭಿನ್ನ ಶೈಲಿಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ನಾನು ಬಾಡಿ ಬಿಲ್ಡಿಂಗೂ ಮಾಡ್ತೀನಿ, ಕಾಮಿಡಿನೂ ಮಾಡ್ತೀನಿ. ನಾನು ಸೀರಿಯಸ್ ಅಲ್ಲ, ನಿಮ್ಮನ್ನೆಲ್ಲ ರಂಜಿಸ್ತೀನಿ ಎಂದು ಕರಿಬಸಪ್ಪ ಹೇಳಿದ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ದಾವಣಗೆರೆ ಮೂಲದ ಕರಿಬಸಪ್ಪ ಅವರು ತಮ್ಮ ಜೀವನದಲ್ಲಿ ಬಹಳ ಕಷ್ಟದಿಂದ ಯಶಸ್ಸು ಗಳಿಸಿದ್ದಾರೆ. ಅವರ ತಂದೆ ಪೌರ ಕಾರ್ಮಿಕರಾಗಿದ್ದು, ಬಾಲ್ಯದಲ್ಲೇ ನಟ ಟೈಗರ್ ಪ್ರಭಾಕರ್ರಿಂದ ಪ್ರೇರಿತರಾಗಿ ಬಾಡಿ ಬಿಲ್ಡಿಂಗ್‌ಗೆ ಕಾಲಿಟ್ಟರು. 2004ರಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದರು. ನಂತರ ಮಿಸ್ಟರ್ ಇಂಡಿಯಾ, ಏಕಲವ್ಯ ಪ್ರಶಸ್ತಿ, ಹಾಗೂ ಭಾರತ್ ಶ್ರೇಷ್ಠ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ.

ಅವರಿಗೆ 54 ವರ್ಷವಾಗಿದ್ದು, ಪತ್ನಿ ವೇದಾವತಿ ಮತ್ತು ಇಬ್ಬರು ಅವಳಿ ಗಂಡು ಮಕ್ಕಳು ಅವರ ಬೆಂಬಲದ ಶಕ್ತಿ. ಬಿಗ್ ಬಾಸ್ ಮನೆಯಲ್ಲಿ ಅವರು ತಮ್ಮ ಹಾಸ್ಯ, ಸ್ಫೋಟಕ ವ್ಯಕ್ತಿತ್ವ ಮತ್ತು ನೇರ ಮಾತಿನಿಂದ ಎಲ್ಲರಿಗೂ ಮನರಂಜನೆ ನೀಡುತ್ತಿದ್ದಾರೆ. ಹಳೆಯ ಸ್ಟೇಜ್‌ ಶೋ ಮತ್ತು ಡಾನ್ಸ್‌ ವಿಡಿಯೋಗಳು ಮತ್ತೆ ವೈರಲ್ ಆಗಿ ಜನರ ಮನಸೆಳೆಯುತ್ತಿವೆ.

ಕರಿಬಸಪ್ಪ ಅವರ ಮಾತುಗಳಲ್ಲಿ ಆತ್ಮವಿಶ್ವಾಸ ಸ್ಪಷ್ಟ – ನಾನು ರಫ್ ಆಗಿ ಕಾಣಬಹುದು ಆದರೆ ರಫ್ ಅಲ್ಲ. ನಾನು ಗೆಲ್ಲಲು ಬಂದಿದ್ದೇನೆ. ಈ ಉತ್ಸಾಹ ಮತ್ತು ಎನರ್ಜಿ ಅವರನ್ನು ಈ ಸೀಸನ್‌ನ ಅತ್ಯಂತ ಮನರಂಜನಾ ಸ್ಪರ್ಧಿಯಾಗಿ ಮಾಡಿದೆ.ಬಿಗ್ ಬಾಸ್ ಮನೆಯಲ್ಲಿ ಅವರ ಮುಂದಿನ ಆಟ ಹೇಗಿರುತ್ತೆ ಎಂಬ ಕುತೂಹಲ ಈಗ ಎಲ್ಲರಿಗೂ ಇದೆ.