ಸುಡು ಸುಡು ಬೆಂಕಿ ಉಂಡೆಯಲ್ಲಿ ನಡೆದ ಬಿಗ್ ಬಾಸ್ ಅನುಷಾ ರೈ, ಫಿದಾ ಆದ ಕನ್ನಡಿಗರು

 | 
Nbn
ನೋಡೋಕು ಸುಂದರಿ, ವಿವಾದಗಳಿಂದ ದೂರವಿರುವ ಚಂದನವನದ ಬೆಡಗಿ ಅನುಷಾ ರೈ,  ಬಿಗ್ ಬಾಸ್ ಸೀಸನ್ 11ರಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ನರಕದ ಮೂಲಕ ಇವರು ಪ್ರಯಾಣ ಆರಂಭಿಸಿದ್ದರು. ಕೊನೆಗೆ  50ನೇ ದಿನಕ್ಕೆ ಬಿಗ್ ಬಾಸ್ ಪಯಣ ಮುಗಿಸಿ ನಟಿ ಅನುಷಾ ರೈ ಹೊರಬಂದರು. ಈಚೆಗಷ್ಟೇ  ಪ್ರಯಾಗ್ ರಾಜ್​ನ ಮಹಾಕುಂಭ ಮೇಳದಲ್ಲಿ  ಪುಣ್ಯಸ್ನಾನ ಮಾಡಿ ಸದ್ದು ಮಾಡಿದ್ದರು. 
ಈ ಸಂದರ್ಭದಲ್ಲಿ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದ ಅವರು,  ಪ್ರಯಾಗ್ ರಾಜ್​ನ ಮಹಾ ಕುಂಭಮೇಳ ನೋಡುತ್ತಲೇ ಹಾಕಿತ್ತು ಹೃದಯ ತಾಳ,  ಗಂಗಾ ಯಮುನಾ ಸರಸ್ವತಿಯ ತ್ರಿವೇಣಿ ಸಂಗಮ, ಒಮ್ಮೆ ಮುಳುಗೆದ್ದರೆ ಮನದಲ್ಲಿ ಮಹಾ ಸಂಭ್ರಮ, ಜೊತೆಯಲ್ಲಿ ಕೋಟ್ಯಂತರ ಭಕ್ತರ ಸಮಾಗಮ, ಬೆಳಗಲಿ ನಮ್ಮ ಹಿಂದೂ ಧರ್ಮ, ಕಳೆಯಲಿ ಎಲ್ಲ ಪಾಪ ಕರ್ಮ, ಕಡೆಗೂ ಆಯ್ತು ಪುಣ್ಯ ಸ್ನಾನ, ಎದೆಯಲ್ಲಿ ಸದಾ ಶಿವನದ್ದೇ ಧ್ಯಾನ  ಎಂದು ಬರೆದುಕೊಂಡಿದ್ದರು.
ತದನಂತರದಲ್ಲಿ ನಟಿ, ರಾಮ ಜನ್ಮ ಭೂಮಿ ಅಯೋಧ್ಯೆಗೆ ತೆರಳಿ, ರಾಮಲಲ್ಲಾ ದರ್ಶನ ಪಡೆದು ಬಂದಿದ್ದರು. ಈ ಪುಣ್ಯ ದರ್ಶನದ ಕುರಿತು ವಿಡಿಯೋ ಮಾಡಿದ್ದ ಅವರು,  ಶ್ರೀರಾಮನ ದರ್ಶನ ಪದೆದ ನಾನೇ ಧನ್ಯಳು ಎಂದು ಸಹ ನಟಿ ಹೇಳಿಕೊಂಡಿದ್ದರು. ಇದೀಗ ಅವರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಊರ ಹಬ್ಬದಲ್ಲಿ ನಿಗಿನಿಗಿ ಕೆಂಡವನ್ನು ತುಳಿಯುವ ಮೂಲಕ ಹರಕೆ ತೀರಿಸಿದ್ದಾರೆ.
ಸಾಮಾನ್ಯವಾಗಿ ಯಾರೇ ಆಗಲಿ ಹರಕೆ ಹೊತ್ತುಕೊಂಡಿದ್ದರೆ, ಈ ರೀತಿ ಮಾಡುವುದು ಸಂಪ್ರದಾಯ. ಅನುಷಾ ಅವರು ಏನು ಹರಕೆ ಹೊತ್ತುಕೊಂಡಿದ್ದರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ ಸದ್ಯ ಅವರ ಈ ವಿಡಿಯೋ ವೈರಲ್​ ಆಗಿದ್ದು, ಕೆಂಡದ ಮೇಲಿನ ನಡಿಗೆಗೆ ಅಭಿಮಾನಿಗಳು ಶಾಕ್​ ಆಗಿದ್ದಾರೆ. 
ಊರ ಹಬ್ಬದಲ್ಲಿ ನಟಿ ಅನುಷಾ ರೈ ಚಂದವಾಗಿ ಸಿಂಗಾರಗೊಂಡು ಜಾತ್ರೆಯಲ್ಲಿ ಮಿಂಚಿದ್ದಾರೆ. ಕೆಂಡದಲ್ಲಿ ನಡೆದುಕೊಂಡು ಹೋಗಿರೋ ವಿಡಿಯೋವನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.