ಬಿಗ್ ಬಾಸ್ ಕಾರ್ತಿಕ್ ಮದುವೆ ಫಿಕ್ಸ್, ಇದೇ ತಿಂಗಳು ಮೈಸೂರಿನಲ್ಲಿ ಅದ್ದೂರಿಯಾಗಿ ಸಂಭ್ರಮ

 | 
Jd

ಕನ್ನಡದ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಮದ್ವೆ ಆಗೋ ಹುಡುಗಿ ಹೇಗಿರಬೇಕು? ಸದ್ಯ ಮಾಧ್ಯಮಗಳಿಂದ ಕೇಳಲ್ಪಡ್ತಿರೊ ಪ್ರಶ್ನೆ ಇದೇ ಆಗಿದೆ. ಬಿಗ್ ಬಾಸ್ ವಿನ್ನರ್ ಆದ್ಮೇಲೆ ಕಾರ್ತಿಕ್  ಹಲವು ಚಾನೆಲ್‌ಗಳಿಗೆ ಸಂದರ್ಶನ ಕೊಟ್ಟಿದ್ದಾರೆ. ಇನ್ನು ಕೆಲವು ಯುಟ್ಯೂಬ್ ಚಾನೆಲ್‌ಗಳಲ್ಲಿ ಇಂಟರ್‌ವ್ಯೂ ಕೊಟ್ಟಿದ್ದಾರೆ. 

ಎಲ್ಲ ಕಡೆಗೂ ಈ ಒಂದು ಪ್ರಶ್ನೆ ಕಾಮನ್ ಆಗಿದೆ. ಈ ಪ್ರಶ್ನೆ ಏಳಲು ಕಾರಣವೂ ಇದೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ರೀತಿ ಸೈಡ್‌ ಎ ಟೈಮ್‌ನಲ್ಲಿ ಸಂಗೀತಾ ಶೃಂಗೇರಿ  ಜೊತೆಗೆ ಕಾರ್ತಿಕ್ ಮಹೇಶ್ ತುಂಬಾನೆ ಕ್ಲೋಸ್ ಆಗಿದ್ದರು. ಸೈಡ್ ಬಿ ಅನ್ನೋ ಹಾಗೆ ನಮ್ರತಾ ಗೌಡ ಜೊತೆಗೂ ಕ್ಲೋಸ್ ಆಗಿದ್ದರು. ಇದನ್ನೆಲ್ಲ ನೋಡಿದವ್ರಿಗೆ ಯಾರನ್ನ ಕಾರ್ತಿಕ್ ಮದ್ವೆ ಆಗ್ತಾರೆ ಅನ್ನೋ ಪ್ರಶ್ನೆ ಇತ್ತು. ಆದರೆ ಕೊನೆ ಕೊನೆಗೆ ಏನೇನೋ ಆಯಿತು. ಇದೀಗ ಹೊಸ ಪ್ರಶ್ನೆ ಹುಟ್ಟಿಕೊಂಡಿದೆ.

 ಕಾರ್ತಿಕ್ ಮಹೇಶ್ ಮದುವೆ ಆಗೋ ಹುಡ್ಗಿ ಹೇಗಿರಬೇಕು ಅನ್ನೋದೇ ಆಗಿದೆ. ಬಿಗ್‌ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಮದ್ವೆ ಆಗೋ ಹುಡ್ಗಿ ಹೇಗಿರಬೇಕು? ಈ ಪ್ರಶ್ನೆಯನ್ನ ಎಲ್ಲರೂ ಕೇಳ್ತಿದ್ದಾರೆ. ಸಂಗೀತಾ ಶೃಂಗೇರಿ ಜೊತೆಗೆ ತುಂಬಾನೆ ಕ್ಲೋಸ್ ಆಗಿದ್ದ ಕಾರ್ತಿಕ್, ಕೊನೆಗೆ ಆ ಸ್ನೇಹವನ್ನೂ ಕಳೆದುಕೊಂಡರು. ಅದಕ್ಕೆ ಕಾರಣ ಏನು ಅನ್ನೋದು ಅವರಿಗೇನೆ ಚೆನ್ನಾಗಿ ಗೊತ್ತಿದೆ.

ಆದರೂ ಇಲ್ಲಿ ಸಂಗೀತಾ ಶೃಂಗೇರಿ ಅವಕಾಶವಾದಿ ಅನ್ನೋ ಮಾತು ಕೇಳಿ ಬರುತ್ತಿದೆ. ಇದಾದ್ಮೇಲೆ ನಮ್ರತಾ ಗೌಡ ಜೊತೆಗೂ ಕಾರ್ತಿಕ್ ಚೆನ್ನಾಗಿಯೇ ಇದ್ದಾರೆ. ಹೊರ ಬಂದ್ಮೇಲೂ ಆ ಸ್ನೇಹ ಉಳಿಯುವಂತೆ ಕಾಣಿಸುತ್ತದೆ. ಅದು ಬಿಟ್ರೆ, ಮದುವೆ ಮಟ್ಟಕ್ಕೆ ಹೋಗಲಿಕ್ಕಿಲ್ಲ ಅನಿಸುತ್ತದೆ. ಕಾರ್ತಿಕ್ ಮಹೇಶ್ ಈಗಲೇ ಮದ್ವೆ ಆಗೋ ಪ್ಲಾನ್‌ನಲ್ಲಿ ಇಲ್ವೇ ಇಲ್ಲ. ಮೊದಲು ಒಂದು ಮನೆ ಕಟ್ಟಿಸಬೇಕು ಅನ್ನೋದೇ ಆಗಿದೆ. ಅಮ್ಮನಿಗೆ ಒಂದು ಮನೆ ಕಟ್ಟಬೇಕು ಅಂತಲೇ ಪ್ಲಾನ್ ಮಾಡಿದ್ದಾರೆ. ಮನೆ ಕಟ್ಟಿದ್ಮೇಲೆ ಮದ್ವೆ ಆಗ್ತಾರೆ ಎಂದು ಅವರ ತಾಯಿ ಹೇಳಿದ್ದಾರೆ.