ಅಪ್ಪು ಹಾಡಿಗೆ ಸಕ್ಕತ್ತಾಗಿ ಡ್ಯಾನ್ಸ್ ಮಾಡಿದ ಬಿಗ್ಬಾಸ್ ಕಾತಿ೯ಕ್ ಹಾಗೂ ಕಿಶಾನ್, ಫಿದಾ ಆದ ಕನ್ನಡಿಗರು

 | 
Gui

ನಿನ್ನೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 49ನೇ ಹುಟ್ಟುಹಬ್ಬವಿತ್ತು. ಮರೆಯಾದ ಜೀವ ಎಂದೆಂದಿಗೂ ಜೀವಂತ ಅಂತಿರೋ ಅವರ ಅಭಿಮಾನಿಗಳು ಬಹಳ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಅಪ್ಪು ಹುಟ್ಟುಹಬ್ಬಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಕನ್ನಡಿಗರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಈಗ ಬಿಗ್​ಬಾಸ್​ ಸೀಸನ್​ 10 ವಿನ್ನರ್ ಕಾರ್ತಿಕ್​ ಮಹೇಶ್​ ಹಾಗೂ ಸೀಸನ್ 7ರ ಕಿಶನ್ ಅಪ್ಪು ಬರ್ತ್​ ಡೇಗೆ ವಿಶೇಷವಾಗಿ ಶುಭಕೋರಿದ್ದಾರೆ.

ಹೌದು, ಜಾಕಿ ಸಿನಿಮಾದ ಹಾಡಿಗೆ ಸಖತ್​ ಆಗಿ ಹೆಜ್ಜೆ ಹಾಕಿ ಪ್ರೀತಿಯ ಅಪ್ಪು ಅವರ ಹುಟ್ಟು ಹಬ್ಬಕ್ಕೆ ಶುಭಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆ್ಯಕ್ಟೀವ್ ಆಗಿರೋ ಕಾರ್ತಿಕ್​ ಮಹೇಶ್​ ಹಾಗೂ ಕಿಶನ್ ಇಬ್ಬರು ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಈ ಇಬ್ಬರು ಸೂಪರ್ ಡ್ಯಾನ್ಸರ್ಸ್‌ ಆಗಿದ್ದರಿಂದ ಅಭಿಮಾನಿಗಳಿಗೆ ಇನ್ನಷ್ಟೂ ಇಷ್ಟ ಆಗಿದೆ. ಅದರಲ್ಲೂ ಜಾಕಿ ಹಾಡಿಗೆ ಸೂಟ್​ ಆಗುವಂತ ಬಟ್ಟೆಯನ್ನು ಧರಿಸಿ ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದಾರೆ.

ಇನ್ನೂ ಈ ವಿಡಿಯೋವನ್ನು ಕಾರ್ತಿಕ್​ ಮಹೇಶ್​ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಸರಳತೆಯ ಸಾಮ್ರಾಟ, ನಗುವಿನ ಒಡೆಯ, ಪ್ರೀತಿಗೆ ಪರಮಾತ್ಮ, ಬದುಕಿಗೆ ಸ್ಪೂರ್ತಿ ನಮ್ಮ ಪವರ್ ಸ್ಟಾರ್ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಈ ಮಸ್ತ್ ಡ್ಯಾನ್ಸ್ ನೋಡಿರೋ ಫ್ಯಾನ್ಸ್​ ಕಾಮೆಂಟ್​ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಸರಳತೆಯ ಸಾಮ್ರಾಟ, ನಗುವಿನ ಒಡೆಯ, ಪ್ರೀತಿಗೆ ಪರಮಾತ್ಮ, ಬದುಕಿಗೆ ಸ್ಪೂರ್ತಿ ನಮ್ಮ ಪವರ್ ಸ್ಟಾರ್. ಹುಟ್ಟುಹಬ್ಬದ ವಿಡಿಯೋ ಶೇರ್ ಮಾಡುವಾಗ ಕಾರ್ತಿಕ್ ಅಡಿಬರಹ ನೀಡಿದ್ದಾರೆ.ಇನ್ನೂ ಬಿಗ್ ಬಾಸ್ ನಮ್ರತಾ ಗೌಡ ಅಪ್ಪು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಇನ್ಮುಂದೆ ಪ್ರತಿ ವರ್ಷ ಈ ಕಾರ್ಯ ಮಾಡುವುದಾಗಿ ನಟಿ ಪ್ರಕಟಿಸಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.