ಬಿಗ್ ಬಾಸ್ ಮನೆಯಲ್ಲಿ ಹೊ ಡೆದಾಟ, ಜಗದೀಶ್ ಹಾಗೂ ರಂಜಿತ್ ನನ್ನು ಒದ್ದು ಓಡಿಸಿದ ಬಿಗ್ಬಾಸ್
Oct 17, 2024, 10:27 IST
|

ಬಿಗ್‌ಬಾಸ್ ಮನೆ ಈಗ ರಣರಂಗವಾಗಿದೆ ಅನ್ನೋ ಅಪ್‌ಡೇಟ್ ಬರ್ತಿದೆ. ಇಬ್ಬರು ಸ್ಫರ್ಧಿಗಳು ಮನೆಯಿಂದ ಹೊರಬಂದಿದ್ದಾರೆ ಅಂತ ಹೇಳಲಾಗ್ತಿದೆ. ಯಾರವರು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.ಲಾಯರ್ ಜಗದೀಶ್ ಹಾಗೂ ರಂಜಿತ್ ಬಿಗ್‌ಬಾಸ್ ಮನೆಯಿಂದ ಅಚ್ಚರಿ ರೀತಿಯಲ್ಲಿ ಹೊರಬಿದ್ದಿದ್ದಾರೆ. ಇವರಿಬ್ಬರ ನಡುವಿನ ಗಲಾಟೆನೆ ಇದಕ್ಕೆ ಕಾರಣ ಎನ್ನಲಾಗ್ತಿದೆ.
ಮೊದಲಿನಿಂದಲೂ ಜಗದೀಶ್ ಬಿಗ್‌ಬಾಸ್ ಕಾರ್ಯಕ್ರಮವನ್ನೇ ನಿಂದಿಸಿಕೊಂಡು ಬಂದಿದ್ದರು. ಇದಕ್ಕೆ ಇಡೀ ಮನೆಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಇಬ್ಬರು ನಡುವೆ ಗಲಾಟೆಯಾಗಿದೆ. ಈ ಸಮಯದಲ್ಲಿ ರಂಜಿತ್-ಜಗದೀಶ್ ಕೈ ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ.ಜಗದೀಶ್ ಬಿಗ್‌ಬಾಸ್ ಮನೆಗೆ ಬಂದಾಗಿನಿಂದಲೂ ಬೇರೆಯವರನ್ನು ಕೆಣಕುವ ರೀತಿಯಲ್ಲೇ ಮಾತನಾಡುತ್ತಿದ್ದರು. ಎಲ್ಲರಿಗೂ ಏಕವಚದಲ್ಲೇ ಮಾತನಾಡಿಸುತ್ತಿದ್ದರು.
ಹೆಣ್ಣು ಮಕ್ಕಳಿಗೂ ಗೌರವ ಕೋಡೋದಿಲ್ಲ ಅಂತ ಎಲ್ಲಾ ಸ್ಪರ್ಧಿಗಳು ಕೂಡ ಕಿಚ್ಚ ಸುದೀಪ್ ಬಳಿ ಹೇಳಿಕೊಂಡಿದ್ದರು.ಬಿಗ್ ಬಾಸ್ ಶೋ ಬಗ್ಗೆ ಜಗದೀಶ್ ಅವಹೇಳನ ಮಾಡಿದ್ದಕ್ಕೆ ಉಗ್ರಂ ಮಂಜು ಅಕ್ಷರಶಃ ಉಗ್ರ ರೂಪ ತಾಳಿದರು. ಸಿಟ್ಟಿನಲ್ಲಿ ಮಂಜು ಚಪ್ಪಲಿಯನ್ನ ಎಸೆದರು. ಇದರ ಬೆನ್ನಲ್ಲೇ ಮತ್ತೆ ಜಗದೀಶ್ ಗಲಾಟೆ ಮಾಡಿದ್ದಾರೆ.ರಿಯಲ್ ಲೈಫ್‌ನಲ್ಲಿ ನಾನು ಹೀರೋ.ಬಿಗ್ ಬಾಸ್’ ಮನೆಯಲ್ಲಿ ನಾನು ಹೀರೋ ಆಗಬೇಕಿಲ್ಲ.
ನಮಗೆ ವಿನ್ನರ್ ಆಗೋದು ಬೇಡ. 50 ಲಕ್ಷ ಅವರೇ ತೆಗೆದುಕೊಳ್ಳಲಿ. 50 ಲಕ್ಷ ಆಸೆ ಇಲ್ಲ. ಆ ಕಪ್ ತಗೊಂಡು ಮಾಡಬೇಕಾಗಿದ್ದು ಏನೂ ಇಲ್ಲ ಎಂದು ಹಿಂದಿನ ಸೀಸನ್‌ನಲ್ಲಿ ಜಗದೀಶ್ ಅಬ್ಬರಿಸಿದ್ದರು.ಇನ್ನು ಜಗದೀಶ್ ಅವರ ಮಾತಿಗೆ ಉಗ್ರಂ ಮಂಜು ಚಪ್ಪಾಳೆ ತಟ್ಟಿದರು.
ಈ ವೇಳೆ, ಇದಕ್ಕೆ ಸರಿ ನೀನು, ಇನ್ನೇನಕ್ಕೂ ಲಾಯಕ್ ಇಲ್ಲ ಎಂದು ಜಗದೀಶ್ ಹೇಳಿದಾಗ, ಉಗ್ರಂ ಮಂಜು ತಮ್ಮ ಕೈಯಿಂದ ಚಪ್ಪಲಿ ಎಸೆದರು.ಜಗದೀಶ್ ಹಾಗೂ ರಂಜಿತ್ ಮಧ್ಯೆ ತೀವ್ರ ಹೊಡೆದಾಟ ನಡೆದ ಪರಿಣಾಮ, ಇಬ್ಬರನ್ನೂ ‘ಬಿಗ್ ಬಾಸ್’ ಹೊರದಬ್ಬಿದ್ದಾರಂತೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.