ಬಿಗ್ ಬಾಸ್ ಮಹಾಮೋಸ? ದೊಡ್ಮನೆಯ ಬಗ್ಗೆ ಮೌನ ಮುರಿದ ಗೌತಮಿ
Jan 20, 2025, 18:46 IST
|

ಕನ್ನಡದ ಬಿಗ್ಬಾಸ್ ಸೀಸನ್ 112ನೇ ದಿನಕ್ಕೆ ಕಾಲಿಟ್ಟಿದೆ. ಇದೆ ಹೊತ್ತಲ್ಲಿ ಅಚ್ಚರಿಯ ರೀತಿಯಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಗೌತಮಿ ಜಾಧವ್.ಹೌದು, 111 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ಗೌತಮಿ ಸಖತ್ ಸ್ಟ್ರಾಂಗ್ ಆಗಿ ಟಾಸ್ಕ್ ಅನ್ನು ಆಡಿದರು. ಕನ್ನಡದ ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಬಿಗ್ಬಾಸ್ ಮನೆಯಲ್ಲಿ ಒಂದು ರೇಂಜ್ ಸೌಂಡ್ ಮಾಡಿದರು.
ಇನ್ನೇನು ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ಒಂದು ವಾರ ಬಾಕಿ ಉಳಿದ ಹೊತ್ತಲ್ಲೇ ಗೌತಮಿ ಆಚೆ ಬಂದಿದ್ದು ಎಲ್ಲರಿಗೂ ಶಾಕ್ ಉಂಟು ಮಾಡಿತ್ತು. ಆದರೆ, ಬಿಗ್ಬಾಸ್ನಿಂದ ಆಚೆ ಬಂದಿದ್ದ ಗೌತಮಿ ಅವರಿಗೆ ಕುಟುಂಬಸ್ಥರು ಗ್ರ್ಯಾಂಡ್ ಆಗಿ ಮನೆಗೆ ವೆಲ್ಕಮ್ ಮಾಡಿದ್ದಾರೆ.
ಹೌದು, 111 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡು ಚೆನ್ನಾಗಿ ಆಡಿಕೊಂಡು ಆಚೆ ಬಂದಿದ್ದ ಗೌತಮಿ ಅವರಿಗೆ ಪೋಷಕರು ಹಾಗೂ ಪತಿ ಅಭಿಷೇಕ್ ಕೇಕ್ ಮಾಡಿ ಸೆಲೆಬ್ರೆಟ್ ಮಾಡಿದ್ದಾರೆ, ಇದೇ ವಿಡಿಯೋವನ್ನು ಗೌತಮಿ ಅವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಜೊತೆಗೆ ಸತ್ಯ ಸೀರಿಯಲ್ ನಿರ್ದೇಶಕಿ ಸಪ್ನಾ ಕೃಷ್ಣ ಅವರು ಗೌತಮಿ ಅವರನ್ನು ವೆಲ್ ಕಮ್ ಮಾಡಿ ಖುಷಿ ಪಟ್ಟಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋ ಜೊತೆಗೆ ಗೆದ್ದಿದ್ದು ಒಂದೇ ಒಳ್ಳೆತನ ಅಂತ ಬರೆದುಕೊಂಡಿದ್ದಾರೆ. ಸದ್ಯ ಇದೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಂಜು ಅವರ ಜೊತೆಗಿನ ಗೆಳೆತನ ಮುಂದುವರೆಯಲಿದೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.