ಬಿಗ್ ಬಾಸ್ ಮೈಕಲ್ ಐಶಾರಾಮಿ ಜೀವನ, ದಿನಕೊಂದು ಚೆಲುವೆಯರ ಜೊತೆ ಒಡನಾಟ

 | 
Ns

ಬಿಗ್ ಬಾಸ್ ಕನ್ನಡ ಸೀಸನ್ 10 ಶುಭಾರಂಭಗೊಂಡು  70 ದಿನಗಳನ್ನು ಮುಗಿಸಿದೆ. ಸಾಮಾನ್ಯವಾಗಿ ಬಿಗ್ ಬಾಸ್ ಓಪನಿಂಗ್ ಎರಡು ದಿನ ನಡೆಯುತ್ತಿತ್ತು. ಆದರೆ, ಈ ಬಾರಿ ಕೇವಲ ಒಂದೇ ದಿನಕ್ಕೆ ಮೀಸಲಾಗಿದೆ. ಒಂದು ದಿನದೊಳಗೆ ಒಟ್ಟು 17 ಮಂದಿ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಾಗಿತ್ತು.

ಈ ಬಾರಿ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬೇರೆಯೇ ಇತ್ತು. ವೀಕ್ಷಕರನ್ನು ಮುಂದಿಟ್ಟುಕೊಂಡು ಆಯ್ಕೆ ಪ್ರಕ್ರಿಯೆ ಮಾಡಲಾಗಿತ್ತು. ಹೀಗಾಗಿ ಕೆಲವರು ರಿಜೆಕ್ಟ್ ಆದರು. ಮತ್ತೆ ಕೆಲವರು ಸೆಲೆಕ್ಟ್ ಆದರು. ಇವರಲ್ಲಿ ಕೆಲವರು ವಿಭಿನ್ನ ವ್ಯಕ್ತಿತ್ವದ, ವಿಭಿನ್ನ ಕ್ಷೇತ್ರದ ವ್ಯಕ್ತಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲಿ ನೈಜೀರಿಯನ್ ಕನ್ನಡಿಗ ಮೈಕಲ್ ಅಜಯ್ ಕೂಡ ಒಬ್ಬರು.

ಮೈಕಲ್ ಅಜಯ್ ಅವರು ಮಾಡಲ್, ಬಾಸ್ಕೆಟ್ ಬಾಲ್, ಫಿಟ್ನೆಸ್ ಬಗ್ಗೆ ಹೆಚ್ಚು ಒಲವಿದೆ. ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ಅಜಯ್ ಈಗ ಬರ್ಗರ್ ಶಾಪ್ ಕೂಡ ನಡೆಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಹೇರ್ ಸ್ಟೈಲ್ ಬೆಳೆಸುತ್ತಿದ್ದಾರೆ. ಇವರ ಕನ್ನಡಕ್ಕೆ ನಟಿ ಶ್ರುತಿನೇ ಫಿದಾ ಆಗಿದ್ದಾರೆ.

ನೈಜರಿಯಾದಲ್ಲಿ ಹುಟ್ಟಿ ಬೆಳೆದು ಬೆಂಗಳೂರು ಸೇರಿದ ಇವರ ತಾಯಿ ಕನ್ನಡದವರು. ಈಗಾಗಲೇ ರೋಡಿಸ್ ಶೋ ಅಲ್ಲಿ ಮಿಂಚಿದ್ದ ಇವರು ಬಿಗ್ಬಾಸ್ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನು ಇವರು 15 ಕೋಟಿಯ ಒಡೆಯ ಹಾಗೂ ಪಕ್ಕಾ ಪ್ರಾಕ್ಟಿಕಲ್ ಮನುಷ್ಯ. ಆಕ್ಸಿಡೆಂಟ್ ಒಂದರಲ್ಲಿ ಪೆಟ್ಟು ಮಾಡಿಕೊಂಡಿದ್ದ ಇವರಿಗೆ ಬ್ಯಾಸ್ಕೆಟ್ ಬಾಲ್ ಆಡಲು ಸಾಧ್ಯವಿಲ್ಲಾ ಎನ್ನುವುದೇ ಬೇಸರ ಮೂಡಿಸಿದ ಸಂಗತಿಯಂತೆ.