ಊಹೆಗೂ ಮೀರಿದ ಸ್ಪರ್ಧಿಗಳನ್ನು ಹೊರಹಾಕಿದ ಬಿಗ್ ಬಾಸ್, ಮೋಕ್ಷಿತಾ ಹಾಗೂ ಧನರಾಜ್ ಔಟ್

 | 
Js
ನೋಡ ನೊಡ್ತಿದ್ದ ಹಾಗೆ ಬಿಗ್‌ಬಾಸ್ ಕನ್ನಡ ಸೀಸನ್ 11 ಫಿನಾಲೆ ಕಡೆಗೆ ದಾಪುಗಾಲು ಇಟ್ಟಿದೆ. ಈ ಬಾರಿ 17 ಜನ ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದರು. ಅದರಲ್ಲಿ ಇಬ್ಬರು ಶಿಕ್ಷೆ ಅನುಭವಿಸಿ ಹೊರಬಂದರು. 3 ಜನ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ಅದರಲ್ಲಿ ಇಬ್ಬರು ಆಟ ಅರ್ಧಕ್ಕೆ ಬಿಟ್ಟು ಕ್ವಿಟ್ ಮಾಡಿ ಬಂದಿದ್ದರು. ಇದೀಗ ಕೊನೆಯಲ್ಲಿ 9 ಜನ ಉಳಿದಿರೋ ಮನೆಯಲ್ಲಿ ಯಾರು ಫೈನಲ್ಸ್ ಗೆ ಹೋಗ್ತಾರೆ. ಯಾರು ಮನೆಗೆ ಹೋಗ್ತಾರೆ ಅನ್ನೋದು ಕೂತೂಹಲ ಕೆರಳಿಸಿದೆ.
ಸ್ನೇಹಿತರೇ...ಗ್ರ್ಯಾಂಗ್ ಫಿನಾಲೆ ಇನ್ನೆರಡು ವಾರ ಮಾತ್ರ ಬಾಕಿಯಿದೆ. ಅಸಲಿ ಆಟ ಈಗ ಶುರುವಾಗಿದೆ. ಸದ್ಯ ಮನೆಯೊಳಗೆ 9 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ವೀಕೆಂಡ್ ಇಬ್ಬರು ಎಲಿಮಿನೇಟ್ ಆಗುವ ಸಾಧ್ಯತೆಯಿದೆ. ಇನ್ನು ಈಗಾಗಲೇ ಒಬ್ಬರು ಫಿನಾಲೆಗೆ ಟಿಕೆಟ್ ಪಡೆದಿದ್ದಾರೆ. ವಾರದ ಕೊನೆಗೆ ಹೊಸ ಟ್ವಿಸ್ಟ್ ಸಿಕ್ಕಿದೆ.ವಾರದ ಹಿಂದೆ 'ಟಿಕೆಟ್ ಟು ಫಿನಾಲೆ' ಎಂದು ಹೇಳಿ ಬಿಗ್‌ಬಾಸ್ ಕುತೂಹಲ ಹುಟ್ಟುಹಾಕಿದ್ದರು. ವಿಭಿನ್ನ ಟಾಕ್ಸ್‌ಗಳನ್ನು ಕೊಡಲಾಗುತ್ತಿತ್ತು. ಅದರಲ್ಲಿ ಉತ್ತಮ ಪ್ರದರ್ಶನ ತೋರಿದವರು ಫಿನಾಲೆ ಕಡೆ ನಿಧಾನವಾಗಿ ಹೆಜ್ಜೆ ಹಾಕಿದ್ದಾರೆ. ಆದರೆ ಈಗ 9 ಜನರಲ್ಲಿ ಒಬ್ಬರಿಗೆ ಫಿನಾಲೆ ಟಿಕೆಟ್ ಸಿಕ್ಕಿದೆ. ನಟ ಶರಣ್ ಹಾಗೂ ನಟಿ ಅದಿತಿ ಪ್ರಭುದೇವ ಟಿಕೆಟ್ ನೀಡಿದ್ದಾರೆ.
 ಹೌದು ಸ್ನೇಹಿತರೇ...ಗಾಯಕ ಹನುಮಂತ ಬಿಗ್‌ಬಾಸ್ ಕನ್ನಡ 11 ಫಿನಾಲೆ ಪ್ರವೇಶಿಸಿದ್ದಾರೆ. ಹೌದು ಶುಕ್ರವಾರ ನೀಡಿದ ಟಾಸ್ಕ್‌ವೊಂದರಲ್ಲಿ ಗೆದ್ದು ಹನುಮಂತ ಗಮನ ಸೆಳೆದಿದ್ದಾರೆ. ಜೀ ಕನ್ನಡದ ಸರಿಗಮಪ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಬಂದು ಹನುಮಂತ ಗಮನ ಸೆಳೆದಿದ್ದ. ಈ ಬಾರಿ ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ರಂಜಿತ್ ಹಾಗೂ ಲಾಯರ್ ಜಗದೀಶ್ ಮನೆಯಿಂದ ಹೊರಬಂದಾಗಿ ಒಳಗೆ ಹೋಗಿದ್ದವರು ಹನುಮಂತ. ತಮ್ಮ ಗಾಯನದಿಂದ ಮಾತ್ರವಲ್ಲದೇ ಬಹಳ ಬೇಗ ಬಿಗ್‌ಬಾಸ್ ಮನೆ ಆಟಕ್ಕೆ ಹನುಮಂತ ಹೊಂದಿಕೊಂಡಿದ್ದರು. ಲುಂಗಿ, ಶರ್ಟ್ ಲುಕ್‌ನಲ್ಲೇ ಮನೆಯೊಳಗೆ ಕಾಣಿಸಿಕೊಂಡು ಮೋಡಿ ಮಾಡಿದರು. ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡಿ ವೀಕ್ಷಕರನ್ನು ರಂಜಿಸಿದರು. ಉತ್ತಮ, ಕಳಪೆ, ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್ ಹೀಗೆ ಎಲ್ಲಾ ಪಟ್ಟವೂ ಸಿಕ್ಕಿತ್ತು. ಈ ವಾರ ಕೂಡ ಮನೆಯ ಕ್ಯಾಪ್ಟನ್ ಆಗಿ ಹನುಮಂತ ಆಯ್ಕೆ ಆಗಿದ್ದಾರೆ.
ಸ್ನೇಹಿತರೇ...ಸದ್ಯ ಮಂಜು, ರಜತ್, ಚೈತ್ರಾ, ಗೌತಮಿ, ಮೋಕ್ಷಿತಾ, ಭವ್ಯಾ, ಧನರಾಜ್, ತ್ರಿವಿಕ್ರಮ್ ಜೊತೆ ಹನುಮಂತ ಸೇರಿ 9 ಜನ ಸ್ಪರ್ಧಿಗಳಿದ್ದಾರೆ. ಬಿಗ್ಬಾಸ್ ಕೂಡ ಕಠಿಣವಾದ ಟಾಸ್ಕ್ ಅನ್ನೇ ನೀಡ್ತಿದ್ರು ಗೆಲ್ಲುವ ಆಸೆಯಿಂದ ಮೈ ಚಳಿ ಬಿಟ್ಟು ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.ಮಂಜು ಅಗ್ರೆಸ್ಸಿವ್ ಅನಿಸಿದ್ರೆ ತ್ರಿವಿಕ್ರಮ್ ಬಹಳ ಕ್ಲೇವರ್ ಆಗಿ ಆಡ್ತಿದ್ದಾರೆ.ಇನ್ನು ಭವ್ಯಾ ಮೋಕ್ಷಿತಾ ಕೂಡಾ ತಾವೇನು ಕಡಿಮೆ ಇಲ್ಲ ಅನ್ನೊ ರೀತಿಯಲ್ಲಿ ಮುನ್ನುಗುತ್ತಿದ್ದಾರೆ.ಹನುಮಂತನ ಹೊರತುಪಡಿಸಿ ಇನ್ನುಳಿದ 8 ಜನರಲ್ಲಿ 5 ಜನರಿಗೆ ಫಿನಾಲೆ ಟಿಕೆಟ್ ಸಿಗುವ ನಿರೀಕ್ಷೆಯಿದೆ.
ಸ್ನೇಹಿತರೇ ವಿವಿಧ ಕಡೆಗಳಿಂದ  ಸಮೀಕ್ಷೆಯನ್ನು ನಡೆಸಿ ಬಿಗ್‌ ಬಾಸ್‌ ಮನೆಯಲ್ಲಿ ಯಾರು ಇರಬೇಕೆಂದು ತೀರ್ಮಾನಿಸಲಾಗುತ್ತಂತೆ. ಆ ಪ್ರಕಾರ ಉಗ್ರಂ ಮಂಜು, ಗೌತಮಿ ಅಥವಾ ಮೋಕ್ಷಿತಾ  ಇವರುಗಳು ಹೆಸರು ಟಾಪ್‌ ನಲ್ಲಿಲ್ಲ.  ಐವರಲ್ಲಿ ಗ್ರ್ಯಾಂಡ್‌ ಫಿನಾಲೆ ಲಿಸ್ಟ್‌ನಲ್ಲಿ  ಪಕ್ಕಾ ಯಾರು ಇರುತ್ತಾರೆ ಎಂದರೆ ಮೊದಲಿಗೆ ಬರುವ ಹೆಸರು ಸಿಂಗರ್ ಹನುಮಂತ ಲಮಾಣಿ. ಅದರಂತೆ ಅವರು ಈಗಾಗಲೆ ಸೆಲೆಕ್ಟ್ ಆಗಿದ್ದಾರೆ.ಉಳಿದಂತೆ, ತ್ರಿವಿಕ್ರಮ್‌  ಹೆಸರು ಎರಡನೇ ಸ್ಥಾನದಲ್ಲಿದೆಯಂತೆ, 3ನೇ ಹೆಸರು ಉಗ್ರ ಮಂಜು ಮತ್ತು 4ನೇ ಹೆಸರು ರಜತ್‌ ಹಾಗೂ ಐದನೇ ಹೆಸರು ಭವ್ಯಾ ಗೌಡ ಎನ್ನಲಾಗುತ್ತಿದೆ.
ಸ್ನೇಹಿತರೇ...ಈ ಬಾರಿ ಬಿಗ್‌ಬಾಸ್‌ ಕನ್ನಡ 11ನೇ ಸೀಸನ್ 17 ವಾರಗಳ ಕಾಲ ನಡೆಸಬೇಕು ಎಂದು ಬಿಗ್‌ಬಾಸ್‌ ತಂಡ ಪ್ಲ್ಯಾನ್‌ ಮಾಡಿದೆಯಂತೆ. ಶೋ ಟಿಆರ್‌ಪಿ ಕೂಡ ಟಾಪ್‌ನಲ್ಲಿದ್ದು, ಜನವರಿ 26ನೇ ತಾರೀಕು ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ದಿನ ಭಾನುವಾರ ಹಾಗೂ ಗಣರಾಜ್ಯೋತ್ಸವ ಕೂಡ ಇದೆ. ಒಂದು ವೇಳೆ  112 ದಿನಕ್ಕೆ ಕೊನೆಗೊಂಡರೆ ಜನವರಿ 19ಕ್ಕೆ ಬಿಗ್‌ಬಾಸ್ ಕನ್ನಡ 11ರ ಫಿನಾಲೆ ನಡೆಯಲಿದೆ. ಒಟ್ಟಿನಲ್ಲಿ ಜನವರಿ ಮೂರನೇ ವಾರ ಅಥವಾ 4ನೇ ವಾರ ಬಿಗ್‌ಬಾಸ್‌ ಶೋ ಮುಗಿಯೋದಂತು ಪಕ್ಕಾ. ವಿನ್ನರ್ ಯಾರು, ರನ್ನರ್ ಅಪ್ ಯಾರು ಎಂಬುದು ಜಗತ್ತಿಗೇ ಗೊತ್ತಾಗಲಿದೆ.