ಬಾಯ್ ಫ್ರೆಂಡ್ ಜೊತೆ ಗೋವಾದಲ್ಲಿ ಎಂಜಾಯ್ ಮಾಡುತ್ತಿರುವ ಬಿಗ್ ಬಾಸ್ ಪವಿ

 | 
Uu

ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ, ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಪವಿ ಪೂವಪ್ಪ ಮೊನ್ನೆಯಷ್ಟೇ ಆರು ತಿಂಗಳ ನಂತರ ಬಾಯ್ ಫ್ರೆಂಡ್ ಮೀಟ್ ಮಾಡಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಾಯ್ ಫ್ರೆಂಡ್ ಡಿಜೆ ಮ್ಯಾಡಿ  ಅನ್ನು ಸ್ವತಃ ಪವಿ ಅವರೇ ಸ್ವಾಗತಿಸಿ, ಕಾರಿನಲ್ಲಿ ಕರೆದೊಯ್ದಿದ್ದಾರೆ. 

ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಆರು ತಿಂಗಳ ಮಟ್ಟಿಗೆ ಮ್ಯಾಡಿ ವಿದೇಶದಲ್ಲಿ ಕೆಲಸಕ್ಕೆ ಹೋಗಿದ್ದರು. ಈ ವಿಷಯವನ್ನು ಪವಿ ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದರು. ಹಲವು ವರ್ಷಗಳಿಂದ ಒಟ್ಟಿಗೆ ಇರುವ ವಿಚಾರವನ್ನೂ ಅವರು ಹೇಳಿಕೊಂಡಿದ್ದರು. ಆರು ತಿಂಗಳು ಕಳೆದ ನಂತರ ಮ್ಯಾಡಿ ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಪವಿ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

ಬೆಂಗಳೂರಿಗೆ ಬಾಯ್ ಫ್ರೆಂಡ್ ಬರುತ್ತಿದ್ದಂತೆಯೇ ಆತನೊಂದಿಗೆ ಗೋವಾಗೆ  ಹಾರಿದ್ದಾರೆ. ಗೋವಾದ ಕಡಲ ಕಿನಾರೆಯಲ್ಲಿ ಬಿಕಿನಿ  ಹಾಕಿಕೊಂಡು ಪವಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಬಾಯ್ ಫ್ರೆಂಡ್ ಜೊತೆ ಪಬ್ ನಲ್ಲಿ ಎಂಜಾಯ್ ಮಾಡ್ತಿರೋ ಫೋಟೋಗಳನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂದಿ ಮೂಲಕ ಪವಿ ಪೂವಪ್ಪ  ಬಂದಾಗ, ಅವರು ಹೆಸರು ಕೇಳುತ್ತಿದ್ದಂತೆಯೇ ಅನೇಕ ನೆಟ್ಟಿಗರು ಆ ಹೆಸರಿಗಾಗಿ ಹುಡುಕಾಡಿದ್ದರು. ಹುಡುಕಿದವರಿಗೆಲ್ಲ ಸಿಕ್ಕಿದ್ದು, ರಾಶಿ ರಾಶಿ ಹಾಟ್ ಫೋಟೋಗಳು. ಬಿಕಿನಿ ಶೂಟ್ ಗಳು. ಹೌದು, ಪವಿ ಪೂವಪ್ಪ ಹತ್ತು ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾವಿರಾರು ಶೋಗಳಿಗೆ ಹೆಜ್ಜೆ ಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.