ಸಿದ್ದರಾಮಯ್ಯನ ಪರ ಮತ ಕೇಳಿದ ಬಿಗ್ ಬಾಸ್ ಪ್ರಥಮ್; ಚಳಿಬಿಡಿಸಿದ ಜನ ಸಾಮಾನ್ಯರು

 | 
Huu
ನಟ, ನಿರ್ದೇಶಕ, ಬಿಗ್​ ಬಾಸ್​ ಖ್ಯಾತಿಯ ಪ್ರಥಮ್​ ಅವರು ಮತ್ತೆ ಆಕ್ಟಿವ್ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಲೊಕಸಭಾ ಚುನಾವಣಾ ಅಂಗವಾಗಿ ಎಲ್ಲೆಡೆ ಪ್ರಚಾರದಲ್ಲಿ ಮತ್ತು ಜನರ ಅಭಿಪ್ರಾಯಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದಾರೆ. ಹೌದು ನಟ ಭಯಂಕರ ಈಗ ಜನರ ಮನೆಮನೆಗೆ ಹೋಗಿ ಕಾಂಗ್ರೇಸ್ಗೆ ವೋಟ್ ಹಾಕುವಂತೆ ಕೇಳಿ ಎಲ್ಲರಿಂದ ಬೈಸಿಕೊಳ್ಳುತ್ತಿದ್ದಾರೆ.
ಸಿನೆಮಾ ಮುಗಿದಮೇಲೆ ಇಂತಹ ಕೆಲಸ ಮಾಡು ಅದು ಬಿಟ್ಟು ನಿಮಗೇಕೆ ಈ ಕೆಲಸ ಎಂದು ಜನ ತರಾಟೆಗೆ ತೆಗೆದುಕೊಂಡರು. ಮಾತಿನ ಭರದಲ್ಲಿ ಏಕವಚನದಲ್ಲಿ ಮಾತಾಡುತ್ತ. ಜನರ ಕಾಲೆಳೆಯುತ್ತಾ ಇರುವ ಕಾರಣ ಜನ ಇವರನ್ನು ಬೈದಿದ್ದಾರೆ. ಸುಮ್ಮನೆ ಸಿನೆಮಾ ಮಾಡು ಪ್ರಚಾರ ಬೇಡ ಎಂದಿದ್ದಾರೆ.
ಇನ್ನು ಇವರು ಫಸ್ಟ್​ ನೈಟ್​ ವಿತ್​ ದೆವ್ವ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್​ ಲಾಂಚ್​ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಟೀಸರ್​ನ ಆರಂಭದಲ್ಲೇ ಫೇಕ್​ ಪ್ರಮೋಷನ್​ ಬಗ್ಗೆ ಚಿತ್ರತಂಡದವರು ಸೂಚನೆ ನೀಡಿದ್ದಾರೆ. ಯಾವುದೇ ಸುಳ್ಳು ಪ್ರಚಾರದ ಮೂಲಕ ನಾವು ಜನರನ್ನು ಯಾಮಾರಿಸುವ ಕೆಲಸ ಮಾಡಲ್ಲ. ಕನ್ನಡ ಚಿತ್ರರಂಗವನ್ನು ಫೇಕ್​ ರಾಕ್ಷಸರಿಂದ ಕಾಪಾಡಿ ಎಂದು ಸಂದೇಶವನ್ನು ಬಿತ್ತರಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಥಮ್​ ಮಾತನಾಡಿದ್ದಾರೆ. 
ಮೊದಲೆಲ್ಲ 1 ದಿನಕ್ಕೆ 1 ಲಕ್ಷ ವೀವ್ಸ್​ ಅಂತ ಹಾಕಲಾಗುತ್ತಿತ್ತು. ಈಗ ಒಂದು ಗಂಟೆಗೆ 10 ಲಕ್ಷ ವೀವ್ಸ್​ ಅಂತ ಹಾಕುತ್ತಿದ್ದಾರೆ. ಕೆಲವರು ಅರ್ಧ ಗಂಟೆಗೆ 5 ಮಿಲಿಯನ್​ ಅಂತ ಹಾಕಿಕೊಳ್ತಾರೆ. ಇಂಥ ಫೇಕ್​ ರಾಕ್ಷಸರಿಂದ ಚಿತ್ರರಂಗವನ್ನು ಕಾಪಾಡಬೇಕು. ಇತ್ತೀಚೆಗೆ ಪೇಯ್ಡ್​ ಪ್ರಮೋಷನ್​, ಫೇಕ್​ ಪ್ರಮೋಷನ್​ ಆಗುತ್ತಿದೆ ಎಂದು ಪ್ರಥಮ್​ ಹೇಳಿದ್ದಾರೆ. ಈ ಸಿನಿಮಾಗೆ ಪಿವಿಆರ್​ ಸ್ವಾಮಿ ನಿರ್ದೇಶನ ಮಾಡಿದ್ದಾರೆ. ನವೀನ್ ಬೀರಪ್ಪ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ರಥಮ್​ ಜೊತೆ ನಿಖಿತಾ, ಜೀವಿತಾ, ಸುಷ್ಮಿತಾ ಅವರು ನಾಯಕಿಯರಾಗಿ ಅಭಿನಯಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.