ದುಬೈ ಶೇಖ್ ಜೊತೆ ಬ್ಯುಸಿನೆಸ್ ಮಾಡಲು ದುಬೈಗೆ ಹಾರಿದ ಬಿಗ್ ಬಾಸ್ ಪ್ರತಾಪ್

 | 
ಗಾಗಾಗ

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್‌ ರಿಯಾಲಿಟಿ ಶೋಗೆ ಹೋಗಿಬಂದ ಮೇಲೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹೊರದೇಶದಲ್ಲಿರುವ ಕನ್ನಡಿಗರ ಪ್ರೀತಿಯನ್ನು ಕೂಡ 'ಡ್ರೋನ್' ಪ್ರತಾಪ್ ಸಂಪಾದಿಸಿರುವುದು ವಿಶೇಷ. ಸದ್ಯ 'ಡ್ರೋನ್' ಪ್ರತಾಪ್ ದುಬೈಗೆ ಹಾರಿದ್ದಾರೆ. ಅಷ್ಟಕ್ಕೂ ಅವರು ದುಬೈಗೆ ಹೋಗಿದ್ದೇಕೆ? ಈ ಸ್ಟೋರಿ ಓದಲೇ ಬೇಕು.

ಬಿಗ್ ಬಾಸ್ ಕನ್ನಡ' ಸೀಸನ್ 10ರ ರಿಯಾಲಿಟಿ ಶೋನಿಂದ ಆಚೆ ಬಂದಮೇಲೆ 'ಡ್ರೋನ್' ಪ್ರತಾಪ್ ಅವರ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಕೆಲ ಸಮಯದಿಂದ ಪ್ರತಾಪ್ ಟ್ರೋಲ್ ಆಗಿದ್ದೇ ಹೆಚ್ಚು. ಆದರೆ ಈಗ ಅವರಿಗೆ ಫ್ಯಾನ್ಸ್ ಸಂಖ್ಯೆ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲೂ ತಮ್ಮ ಹವಾ ತೋರಿಸುತ್ತಿದ್ದಾರೆ ಅವರು. ಅಲ್ಲಿಯೂ ಕೂಡ ಅವರಿಗೆ ದೊಡ್ಡ ಸಂಖ್ಯೆಯ ಫಾಲೋವರ್ಸ್ ಹುಟ್ಟಿಕೊಳ್ಳುತ್ತಿದ್ದಾರೆ ಮತ್ತು ಪ್ರೀತಿ ತೋರುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ಮಧ್ಯೆ ದುಬೈಗೆ 'ಡ್ರೋನ್' ಪ್ರತಾಪ್ ಹೋಗಿದ್ದು, ಅದು ಕೂಡ ಸುದ್ದಿಯಾಗಿದೆ.

ಸೋಶಿಯಲ್ ಮೀಡಿಯಾ ಖಾತೆಯಲ್ಲಿ 'ಡ್ರೋನ್' ಪ್ರತಾಪ್ ಅವರು ತಮ್ಮ ದುಬೈ ಭೇಟಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ದುಬೈ ವಿಮಾನ ನಿಲ್ದಾಣದಲ್ಲಿ ಡ್ರೋನ್ ಪ್ರತಾಪ್‌ಗೆ ಅಲ್ಲಿನ ಕನ್ನಡಿಗರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಪ್ರತಾಪ್‌ಗೆ ಕನ್ನಡ ಶಾಲನ್ನು ಹೊದಿಸಿ, ದುಬೈಗೆ ಬರಮಾಡಿಕೊಂಡಿದ್ದಾರೆ. ದುಬೈ ಅಭಿಮಾನಿಗಳ ಕರೆಗೆ ಓಗೊಟ್ಟು ಪ್ರತಾಪ್ ಹೋಗಿದ್ದಾರೆ ಎನ್ನಲಾಗಿದ್ದು, ಅಲ್ಲಿರುವ ಕನ್ನಡಿಗರನ್ನು ಭೇಟಿ ಮಾಡಿ, ಕೆಲ ದಿವಸ ಅವರು ಅಲ್ಲಿಯೇ ಅವರು ಇರಲಿದ್ದಾರೆ ಎಂಬ ಮಾಹಿತಿ ಇದೆ.

ಡ್ರೋನ್ ಪ್ರತಾಪ್‌ ಅವರು ಏರ್‌ಪೋರ್ಟ್‌ನಲ್ಲಿ ಇರುವ ವಿಡಿಯೋ ವೈರಲ್ ಆಗಿದೆ. ಅಲ್ಲಿನ ಕನ್ನಡಿಗರು ಡ್ರೋನ್ ಪ್ರತಾಪ್‌ ಅವರ ಜೊತೆಗೆ ಫೋಟೋ ತೆಗೆಸಿಕೊಂಡು, ಅವರನ್ನು ಮಾತನಾಡಿಸಿ ಖುಷಿಪಟ್ಟಿದ್ದಾರೆ. ಈ ನಡುವೆ 'ಡ್ರೋನ್' ಪ್ರತಾಪ್ ಅವರು ಸಾಕಷ್ಟು ಜನರಿಗೆ ಆರ್ಥಿಕ ಸಹಾಯ ಮಾಡುವ ಮೂಲಕವೂ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್'ನಲ್ಲಿ ರನ್ನರ್ ಅಪ್ ಆಗಿದ್ದ ಅವರಿಗೆ ಒಂದಷ್ಟು ನಗದು ಬಹುಮಾನ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಗಿಫ್ಟ್ ಆಗಿ ಸಿಕ್ಕಿತ್ತು. 

ಈ ಬಹುಮಾನಗಳನ್ನು ನಾನು ಬಳಸುವುದಿಲ್ಲ. ಅಗತ್ಯವಿರುವವರಿಗೆ ನೀಡುತ್ತೇನೆ ಎಂದು ಬಿಗ್ ಬಾಸ್ ವೇದಿಕೆ ಮೇಲೆಯೇ ಪ್ರತಾಪ್ ಘೋಷಣೆ ಮಾಡಿದ್ದರು. ಈಗ ಅವರು ನುಡಿದಂತೆ ನಡೆದುಕೊಳ್ಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.