'ಇದ್ದ ಹಣವನ್ನು ದಾನ ಮಾಡಿ' ಆಟೋ ರಿಕ್ಷಾದಲ್ಲಿ ಬಾಡಿಗೆ ಮಾಡುತ್ತಿರುವ ಬಿಗ್ ಬಾಸ್ ಪ್ರತಾಪ್

 | 
Hjj

ಬಿಗ್ ಬಾಸ್‌' ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ, 113 ದಿನಗಳ ಕಾಲ 'ಬಿಗ್ ಬಾಸ್' ಮನೆಯೊಳಗೆ ಇದ್ದು, ಕೊನೆಗೆ ಫಿನಾಲೆಯಲ್ಲಿ ರನ್ನರ್ ಅಪ್ ಪಟ್ಟವನ್ನು ಕೂಡ ಪಡೆದುಕೊಂಡವರು 'ಡ್ರೋನ್' ಪ್ರತಾಪ್. 'ಬಿಗ್ ಬಾಸ್' ಶೋನಲ್ಲಿ ಡ್ರೋನ್ ಪ್ರತಾಪ್ ಇಂಥದ್ದೊಂದು ಸಾಧನೆ ಮಾಡುತ್ತಾರೆ ಎಂದು ಯಾರೂ ಊಹೆ ಕೂಡ ಮಾಡಿರಲಿಲ್ಲ. ಸ್ವತಃ ಅವರಿಗೂ ಆ ನಂಬಿಕೆ ಇರಲಿಲ್ಲ. ಸದ್ಯ 'ಡ್ರೋನ್' ಪ್ರತಾಪ್ ಟೆಂಪಲ್ ರನ್‌ ಮಾಡುತ್ತಿದ್ದಾರೆ. ಈಚೆಗೆ ಅವರು ಮಲೆ ಮಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಬಿಗ್ ಬಾಸ್‌' ಶೋಗೆ ಕಾಲಿಡುವುದಕ್ಕೂ ಮುನ್ನ 'ಡ್ರೋನ್' ಪ್ರತಾಪ್‌ ಸಾಕಷ್ಟು ನೆಗೆಟಿವ್ ಕಾರಣಗಳಿಗೆ ಸುದ್ದಿಯಾಗಿದ್ದರು. ಸದ್ಯ ಬಿಗ್ ಬಾಸ್‌ ಮನೆಯಿಂದ ಆಚೆ ಬಂದಿರುವ ಡ್ರೋನ್ ಪ್ರತಾಪ್‌ಗೆ ಬೇಡಿಕೆ ಹೆಚ್ಚಾಗಿದೆ. ಅವರು ಕಂಡಲೆಲ್ಲ ಜನರು ಮುತ್ತಿಕೊಳ್ಳುತ್ತಿದ್ದಾರೆ. ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನಾ ಮುಂದು ತಾ ಮುಂದು ಅಂತ ಮುಗಿಬೀಳುತ್ತಿದ್ದಾರೆ. ಒಂದೇ ಒಂದು 'ಬಿಗ್ ಬಾಸ್' ಶೋ ಪ್ರತಾಪ್ ಅವರ ಬದುಕಿನ ದಿಕ್ಕನ್ನೇ ಬದಲಿಸಿದೆ ಎಂದು ಹೇಳಬಹುದು.

ಅಭಿಮಾನಿಯೊಬ್ಬರ ಆಟೋ ಓಡಿಸಿ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಡ್ರೋನ್' ಪ್ರತಾಪ್ ಅವರು ತಮ್ಮ ತಂದೆ-ತಾಯಿಯಿಂದ ದೂರವಿದ್ದರು. ಕಾರಣಾಂತರಗಳಿಂದ ಅವರು ಪೋಷಕರ ಜೊತೆಗೆ ಮಾತುಬಿಟ್ಟಿದ್ದರು. ಆದರೆ 'ಬಿಗ್ ಬಾಸ್' ಶೋ ಪೋಷಕರ ಜೊತೆಗೆ ಪ್ರತಾಪ್ ಸೇರುವಂತೆ ಮಾಡಿದೆ. ಮಂಡ್ಯ ಜಿಲ್ಲೆಯಲ್ಲಿರುವ ತಮ್ಮ ಹುಟ್ಟೂರಿಗೆ ಪ್ರತಾಪ್‌ ಅನೇಕ ವರ್ಷಗಳ ಬಳಿಕ ವಾಪಸ್ ಆಗಿದ್ದಾರೆ. ಅಪ್ಪ ಕಟ್ಟಿಸಿದ ಹೊಸ ಮನೆಯನ್ನು ನೋಡಿ ಖುಷಿಯಾಗಿದ್ದಾರೆ. ತಾನು ಓಡಾಡಿದ ತನ್ನೂರಿನ ಬೀದಿಗಳಲ್ಲಿ ಇನ್ನೊಮ್ಮೆ ಓಡಾಡಿ ಸಂತಸಪಟ್ಟಿದ್ದಾರೆ.

ಡ್ರೋನ್ ಪ್ರತಾಪ್ ಮೂಲತಃ ಕಲಾವಿದ ಅಲ್ಲ. ನಟನೆ ಬಗ್ಗೆ ಅಷ್ಟಾಗಿ ಅವರಿಗೆ ಪರಿಚಯ ಇಲ್ಲ. ಆದರೂ ಅವರನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಚ್ಚಿ ಗಿಲಿ ಗಿಲಿ ಸೀಸನ್ 3ರ ಕಾಮಿಡಿ ಶೋಗೆ ಸ್ಪರ್ಧಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲಿ ಯಾವ ರೀತಿ ವೀಕ್ಷಕರನ್ನು ಡ್ರೋನ್ ಪ್ರತಾಪ್ ರಂಜಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.