ಮನೆಯಲ್ಲಿ ಮಾತಾನಾಡಿದ್ದೇನೆ ಆದಷ್ಟು ಬೇಗ ತಮ್ಮಿಬ್ಬರ ಮದುವೆ ಎಂದ ಬಿಗ್ ಬಾಸ್ ರಂಜಿತ್

 | 
ಗಾ
 ಕನ್ನಡ ಬಿಗ್‌ಬಾಸ್‌ನ ಈ ಸೀಸನ್‌ನಲ್ಲಿ ಇಬ್ಬರು ಸ್ಪರ್ಧಿಗಳು ಗಲಾಟೆ ಮಾಡಿಕೊಂಡ ಕಾರಣ ಅವರನ್ನು ಮನೆಯಿಂದ ಹೊರಕಳಿಸಿ, ಪ್ರೇಕ್ಷಕರಿಗೆ ದೊಡ್ಡ ಶಾಕ್‌ ನೀಡಲಾಗಿತ್ತು. ಜಗದೀಶ್‌ ಹಾಗೂ ರಂಜಿತ್‌ ಅವರು ಇನ್ನೇನು ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದರು. ಪರಿಸ್ಥಿತಿ ಮಿತಿ ಮೀರುವ ಕಾರಣ ಅವರನ್ನು ಮನೆಯಿಂದ ಹೊರಗೆ ಕಳಿಸಲಾಗಿತ್ತು.
ಆದರೆ ಬಿಗ್‌ಬಾಸ್‌ನಲ್ಲಿ ಬದ್ಧವೈರಿಗಳಂತೆ ಕಾಣಿಸಿಕೊಂಡಿದ್ದ ಜಗದೀಶ್‌ ಹಾಗೂ ರಂಜಿತ್‌ ಇದೀಗ ದೋಸ್ತಿಗಳಂತೆ ಕಾಣಿಸಿಕೊಂಡು ಎಲ್ಲರಿಗೂ ಮತ್ತೆ ಶಾಕ್‌ ನೀಡಿದ್ದಾರೆ. ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನಕ್ಕೆ ತೆರಳಿದ್ದ ಜಗದೀಶ್‌ ಹಾಗೂ ರಂಜಿತ್‌ ನಗುನಗುತ್ತಾ ದೋಸ್ತಿಗಳಂತೆ ಕಾಣಿಸಿಕೊಂಡಿದ್ದಾರೆ.
ಇನ್ನು ಬಿಗ್‌ಬಾಸ್‌ ಶೋ ಸ್ಕ್ರಿಪ್ಟೆಡ್‌ ಅಂತಾರೆ. ನೂರಕ್ಕೆ ನೂರರಷ್ಟು ಹೇಳ್ತೀನಿ ಅದು ಸ್ಕ್ರಿಪ್ಟೆಡ್‌ ಅಲ್ಲ. ಅಲ್ಲಿ ನಾವು ಯಾವುದೇ ನಾಟಕ ಆಡಬೇಕಿಲ್ಲ. ಅಲ್ಲಿ ಯಾವ ಪವರ್‌ ಕೂಡ ನಡೆಯಲ್ಲ. ನನ್ನ ಪ್ರಕಾರ ಅಲ್ಲಿ ನ್ಯಾಯಕ್ಕೆ, ಧರ್ಮಕ್ಕೆ ಬೆಲೆ ಇದೆ. ಮೊದಲು ನನಗೂ ಬಿಗ್‌ಬಾಸ್‌ ಮೇಲೆ ಡೌಟ್‌ ಇತ್ತು. ಆದರೆ ಅಲ್ಲಿ ಎಲ್ಲವೂ ಪಾರದರ್ಶಕವಾಗಿದೆ ಎಂದು ಬಣ್ಣಿಸಿದ್ದಾರೆ.
ಇನ್ನು ರಂಜಿತ್ ಅಮ್ಮ ಹೇಳೋದು ಇದನ್ನೆ ನಿನ್ನ ಗೌರವಕ್ಕೆ ದಕ್ಕೆ ಬರುವ ಕಡೆ ಇರ್ಬೇಡ ಎಂದು.ಕನ್ನಡ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ ಧಾರಾವಾಹಿ ‘ಶನಿ’. ಈ ಸೀರಿಯಲ್‌ನಲ್ಲಿ ಸೂರ್ಯದೇವನ ಪಾತ್ರವನ್ನ ನಿರ್ವಹಿಸಿದ್ದವರು ರಂಜಿತ್‌. ಅಷ್ಟಕ್ಕೂ, ಮೊದಲು ಏರ್‌ಲೈನ್ಸ್ ಕಂಪನಿಯೊಂದರಲ್ಲಿ ರಂಜಿತ್ ಕೆಲಸ ಮಾಡುತ್ತಿದ್ದರು. ಆಕ್ಟಿಂಗ್‌ನಲ್ಲಿ ಒಲವಿದ್ದ ಕಾರಣ ನಟನೆಗಿಳಿದರು. ‘ಅಮೃತವರ್ಷಿಣಿ’, ‘ಮೀರಾ ಮಾಧವ’, ‘ಅವನು ಮತ್ತೆ ಶ್ರಾವಣಿ’, ‘ಚಿಟ್ಟೆ ಹೆಜ್ಜೆ’ ಮುಂತಾದ ಸೀರಿಯಲ್‌ಗಳಲ್ಲಿ ರಂಜಿತ್ ನಟಿಸಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.