ಮತ್ತೆ ಆರಂಭವಾಯಿತು ಬಿಗ್ ಬಾಸ್; ಕನ್ನಡಿಗರಿಗೆ ಹಬ್ಬ
ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಅಂದರೆ ಬಿಗ್‌ಬಾಸ್. ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದರು. ಇದೀಗ ಬಿಗ್‌ಬಾಸ್ ಕನ್ನಡ ಸೀಸನ್ 11ರ ಆರಂಭಕ್ಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ಕಲರ್ಸ್ ಕನ್ನಡದಲ್ಲಿ ಕೆಲ ಕಾರ್ಯಕ್ರಮ, ಸೀರಿಯಲ್‌ಗಳು ಮಕ್ತಾಯದ ಹಂತ ತಲುಪಿವೆ. ಕಳೆದ ವರ್ಷದಂತೆ ಈ ವರ್ಷವೂ ಅಕ್ಟೋಬರ್ ತಿಂಗಳಲ್ಲಿ ಬಿಗ್‌ಬಾಸ್ ಆರಂಭವಾಗುವ ನಿರೀಕ್ಷೆಯಿದ್ದು, ಎಂದಿನಂತೆ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿಬರುತ್ತಿವೆ.
ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.ಮಜಾಭಾರತ ರಿಯಾಲಿಟಿ ಶೋ ಖ್ಯಾತಿಯ ಸುಶ್ಮಿತಾ ಹಾಗೂ ಜಗ್ಗಪ್ಪ ಕನ್ನಡ ಕಿರುತೆರೆಯಲ್ಲಿ ತಮ್ಮ ಕಾಮಿಡಿಯಿಂದಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಈ ಜೋಡಿ ಭಾಗವಹಿಸಬಹುದು ಎಂಬ ಮಾತು ಕೇಳಿಬರ್ತಿದೆ. ಸುಶ್ಮಿತಾ ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಮೀ ಸೀರಿಯಲ್‌ನಲ್ಲಿ ಫೋಷಕ ಪಾತ್ರ ಮಾಡ್ತಿದ್ದಾರೆ.
ಕಳೆದ ಬಿಗ್‌ಬಾಸ್‌ನ ಫ್ಯಾಮಿಲಿ ರೌಂಡ್‌ನಲ್ಲಿ ತುಕಾಲಿ ಸಂತೋಷ್ ಪತ್ನಿ ಮಾನಸ ಕಾಣಿಸಿಕೊಂಡಿದ್ದರು. ದೊಡ್ಮನೆಯಲ್ಲಿ ತುಕಾಲಿ ಸಂತು ಹಾಗೂ ಮಾನಸ ಜೋಡಿ ಕಂಡ ವೀಕ್ಷಕರು ಖುಷಿಪಟ್ಟಿದ್ದರು. ಜೊತೆಗೆ ಮುಂದಿನ ಸೀಸನ್‌ಗೆ ಮಾನಸ ಅವರನ್ನು ಕರೆಸಬೇಕು ಅಂತ ಬಯಸಿದ್ದರು. ಅದರಂತೆ ಮಾನಸ ಈ ಬಾರಿ ಬಿಗ್‌ಬಾಸ್‌ಗೆ ಎಂಟ್ರಿಕೊಡಲಿದ್ದಾರಾ?
ಟಿಕ್‌ಟಾಕ್ ವಿಡಿಯೋ ಮತ್ತು ರೀಲ್ಸ್‌ಗಳಿಂದ ಗುರುತಿಸಿಕೊಂಡಿದ್ದ ವರುಣ್ ಆರಾಧ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಬೃಂದಾವನ' ಸೀರಿಯಲ್‌ನಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಸದ್ಯ ಈ ಧಾರಾವಾಹಿ ಮುಕ್ತಾಯಗೊಂಡಿದ್ದರು, ವರುಣ್ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿದರೂ ಆಶ್ಚರ್ಯವಿಲ್ಲ.
35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಹುಚ್ಚ ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ ಸದ್ಯ ಚಿತ್ರರಂಗದಿಂದ ದೂರು ಉಳಿದಿದ್ದಾರೆ. ಈ ಹಿಂದೆ ಬೋಲ್ಡ್ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದರು. ಹೀಗಾಗಿ, ರೇಖಾ ಮತ್ತೆ ಸ್ಯಾಂಡಲ್‌ವುಡ್‌ಗೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗಿತ್ತು. ಬಿಗ್‌ಬಾಸ್ ಸೀಸನ್ 10ರಲ್ಲೂ ಇವರ ಹೆಸರು ಕೇಳಿಬಂದಿದ್ದು, ಈ ವರ್ಷ ಭಾಗವಹಿಸುತ್ತಾರಾ? ಎಂಬುದನ್ನು ಕಾದು ನೋಡಬೇಕು
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.