ಬಿಗ್ ಬಾಸ್ ರೂಲ್ಸ್ ಸರಿಯಿಲ್ಲ, ನಾನು ಈ ಮನೆಯಲ್ಲಿ ಇರಲ್ಲ ಎಂದ ಭವ್ಯಾ ಗೌಡ
Jan 16, 2025, 09:02 IST
|

ಈ ವಾರದ ಆರಂಭದಲ್ಲೇ ನಟ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಿಗೆ ಒಂದು ಶಾಕ್ ನೀಡಿದ್ದರು. ಈ ವಾರ ಮಿಡ್ ವೀಕ್ ಎಲಿಮಿನೇಷನ್ ಇರಲಿದೆ ಎಂದು ಹೇಳಿದ್ದರು. ಬುಧವಾರ ಬೆಳಗ್ಗೆ ರಿಲೀಸ್ ಆದ ಪ್ರೋಮೋದಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯುವುದು ಇಂದೇ ಅಂತ ಹೇಳಲಾಗಿತ್ತು. ವೀಕ್ಷಕರಲ್ಲೂ ಸಾಕಷ್ಟು ಕುತೂಹಲವಿತ್ತು. ಆದರೆ ಬುಧವಾರದ ಸಂಚಿಕೆಯಲ್ಲಿ ಹೈಡ್ರಾಮಾವೇ ನಡೆದಿದೆ.
ಯೆಸ್, ಈ ವಾರವನ್ನು ಬಿಗ್ ಬಾಸ್ ಮನೆಯ ನಿರ್ಣಾಯಕ ವಾರ ಅಂತಲೇ ಹೇಳಬಹುದು. ಒಟ್ಟು ಎಂಟು ಮಂದಿ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ. ಅದರಲ್ಲಿ ಅಲ್ಟಿಮೇಟ್ ಕ್ಯಾಪ್ಟನ್ ಆಗಿ ಆಯ್ಕೆ ಆಗಿರುವ ಮತ್ತು ಫಿನಾಲೆ ಟಿಕೆಟ್ ಪಡೆದಿರುವ ಹನುಮಂತು ಮತ್ತು ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಗೆದ್ದಿದ್ದ ಧನರಾಜ್ ಅವರನ್ನು ಬಿಟ್ಟು ಮಿಕ್ಕ ಆರು ಮಂದಿಯಲ್ಲಿ ಯಾರಾದರೂ ಒಬ್ಬರು ಎಲಿಮಿನೇಟ್ ಅಗಬೇಕಿತ್ತು.
ನಾಮಿನೇಟ್ ಆಗಿದ್ದ ಆರು ಮಂದಿ ಗಾರ್ಡನ್ ಏರಿಯಾದಲ್ಲಿ ಸಾಲಾಗಿ ನಿಂತರು. ಆಗ ಬಿಗ್ ಬಾಸ್ ಮನೆಯ ಮುಖ್ಯದ್ವಾರ ತೆರೆಯಿತು. ಸ್ಪರ್ಧಿಗಳ ಎದೆಬಡಿತ ಇನ್ನಷ್ಟು ಹೆಚ್ಚಾಯಿತು. ಒಬ್ಬೊಬ್ಬರೇ ಮುಖ್ಯದ್ವಾರದ ಕಡೆಗೆ ಬಂದು ನಿಂತುಕೊಳ್ಳಿ ಎಂದು ಬಿಗ್ ಬಾಸ್ ಹೇಳಿದರು. ಮೊದಲು ತ್ರಿವಿಕ್ರಮ್‌ಗೆ ಬರಲು ಹೇಳಾಲಾಯಿತು. ಆಗ ಅವರಿಗೆ, "ತ್ರಿವಿಕ್ರಮ್, ಇಂದು ಈ ಮುಖ್ಯದ್ವಾರ ತೆರೆದಿರುವುದು ನಿಮಗಾಗಿ ಅಲ್ಲ.." ಎಂದು ಹೇಳಿ ವಾಪಸ್ ಕಳುಹಿಸಲಾಯಿತು. ಹೀಗೆ ಒಬ್ಬೊಬ್ಬರನ್ನು ಕರೆದು ಇದೇ ಥರ ಹೇಳಲಾಯಿತು. ಆದರೆ ಭವ್ಯಾಗೆ ಮಾತ್ರ ಈ ರೀತಿ ಹೇಳಲಿಲ್ಲ!
ಅಂತಿಮವಾಗಿ ಗೌತಮಿ ಮತ್ತು ಭವ್ಯಾ ಅವರನ್ನು ಒಟ್ಟಿಗೆ ಕರೆಯಲಾಯಿತು. ಇಬ್ಬರ ಕಣ್ಣಲ್ಲೂ ನೀರು ತುಂಬಿತ್ತು. ಯಾರು ಹೊರಗೆ ಹೋಗಬಹುದು ಎಂಬ ಕುತೂಹಲ ಉಳಿದ ಸ್ಪರ್ಧಿಗಳಲ್ಲಿ ಇತ್ತು. ಕೊನೆಗೆ ಗೌತಮಿ ಹೊರಗೆ ಹೋಗುತ್ತಿಲ್ಲ ಎಂದು ಬಿಗ್ ಬಾಸ್ ಹೇಳಿದರು. ಆಗ ಭವ್ಯಾ ಕಣ್ಣೀರು ಇನ್ನಷ್ಟು ಜಾಸ್ತಿ ಆಯ್ತು. ಈ ವಾರ ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಹೊರಗೆ ಹೋಗುವುದು ಭವ್ಯಾ ಅಂತ ಎಲ್ಲರೂ ಫಿಕ್ಸ್ ಆಗಿದ್ದರು.
ಆಗ ಬಿಗ್ ಬಾಸ್,"ಭವ್ಯಾ ನೀವು ಈ ಕೂಡಲೇ ಮನೆಯಿಂದ ಹೊರಬರುವಂತಿಲ್ಲ" ಎಂದು ಹೇಳಿದರು. ಅಲ್ಲಿಗೆ ಈ ನಡು ವಾರದ ಎಲಿಮಿನೇಷನ್‌ನಲ್ಲಿ ಬುಧವಾರದ ಸಂಚಿಕೆಯಲ್ಲಿ ಯಾರೂ ಕೂಡ ಎಲಿಮಿನೇಟ್ ಆಗಲಿಲ್ಲ.ಬಿಗ್ ಬಾಸ್, ನನಗೇ ಯಾಕೆ ಈ ಥರ ಮಾಡ್ತೀರಾ" ಅಂತ ಗೊಣಗಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ