ಮುಟ್ಟಾದ ಹೆ.ಣ್ಣುಮಕ್ಕಳು ಆ ಕೆಲಸ ಮಾಡಬೇಡಿ ಎಂದ ಬಿಗ್ ಬಾಸ್ ಸಾನ್ಯಾ ಅಯ್ಯರ್ ಹೇ.ಳಿದ್ಯಾಕೆ;

 | 
Huu

ಸಾನ್ಯಾ ಅಯ್ಯರ್‌, ಎಂದರೆ ನೆನಪಾಗುವುದು 'ಪುಟ್ಟ ಗೌರಿ ಮದುವೆ' ಧಾರಾವಾಹಿ. ಆ ಸೀರಿಯಲ್‌ನಲ್ಲಿ ಆಕೆ ಮಾಡಿದ ಪಾತ್ರವನ್ನು ಕಿರುತೆರೆಪ್ರಿಯರು ಮರೆಯಲು ಸಾಧ್ಯವೇ ಇಲ್ಲ. ಈ ಧಾರಾವಾಹಿ ನಂತರ ಬಹಳ ದಿನಗಳವರೆಗೂ ನಟನೆಯಿಂದ ದೂರ ಉಳಿದಿದ್ದ ಈ ಚೆಲುವೆ, ನಂತರ ಒಂದು ಕಿರುಚಿತ್ರದ ಮೂಲಕ ಮತ್ತೆ ಕಾಣಿಸಿಕೊಂಡರು.

ಒಟಿಟಿಯಲ್ಲಿ ಪ್ರಸಾರವಾಗಿದ್ದ ಬಿಗ್‌ಬಾಸ್‌ ಸೀಸನ್‌ನಲ್ಲಿ ಭಾಗವಹಿಸಿ, ಟಾಪ್‌ 4 ಸ್ಪರ್ಧಿಗಳ ಲಿಸ್ಟ್‌ನಲ್ಲಿದ್ದ ಸಾನಿಯಾ, ಸದ್ಯಕ್ಕೆ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಸೀಸನ್‌ 9 ರಲ್ಲಿ ಕೂಡಾ ಸ್ಪರ್ಧಿಯಾಗಿದ್ದರು. ಇತ್ತೀಚೆಗೆ ಎಲಿಮಿನೇಟ್‌ ಆಗಿ ಹೊರಬಂದಿರುವ ಸಾನ್ಯಾ ಅಯ್ಯರ್‌ ಮತ್ತೆ ಸುದ್ದಿಯಲ್ಲಿದ್ದಾರೆ. ಸಾನ್ಯಾ ಅಯ್ಯರ್‌ ಹಾಗೂ ಕುಟುಂಬ ಕಾಮಾಕ್ಯ ದೇವಿಯ ಆರಾಧಕರಾಗಿದ್ದು, ಸಾನ್ಯಾ ಮೇಲೆ ಕೂಡಾ ದೇವಿ ಆವಾಹನೆಯಾಗುತ್ತಾಳೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಳೆದ 2 ದಿನಗಳಿಂದ ಇದೇ ವಿಚಾರ ಸುದ್ದಿಯಲ್ಲಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಸಾನ್ಯ ವಿಡಿಯೋವೊಂದು ಹರಿದಾಡುತ್ತಿದೆ. ಸಾನ್ಯಾ ಅಯ್ಯರ್‌, ಬಿಗ್‌ ಬಾಸ್‌ಗೆ ಬರುವ ಮುನ್ನ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್‌ ಚಾಂಪಿಯನ್‌ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದರು. ಆ ವೇಳೆ ಅವರು ಮಹಿಷಾಸುರ ಮರ್ದಿನಿ ರೂಪಕದಲ್ಲಿ ದೇವಿ ವೇಷ ಧರಿಸಿ ನೃತ್ಯ ಮಾಡಿದ್ದರು. 

ವೇದಿಕೆ ಮೇಲೆ ಬರುವ ಮುನ್ನ ಸಾನ್ಯಾಗೆ ದೇವಿ ಆವಾಹನೆಯಾಗಿತ್ತಂತೆ.ಆಗ ಅವರು ಮುಟ್ಟಾದ ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸುವಂತಿಲ್ಲ ಎಂದು ಹೇಳಿದ್ದಾರೆ. ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿರುವ ನಂಬಿಕೆಗಳ ಹಿಂದೆ ಖಂಡಿತವಾಗಿಯೂ ಕೆಲವು ವೈಜ್ಞಾನಿಕ ಸತ್ಯವಿದೆ. ಮುಟ್ಟಿನ ಸಮಯದಲ್ಲಿ ಪೂಜೆ ಮಾಡದಿರಲು ಕಾರಣವೆಂದರೆ ಆ ಸಮಯದಲ್ಲಿ ಆರಾಧನಾ ವ್ಯವಸ್ಥೆಯು ಜಪವಿಲ್ಲದೆ ಸಂಪೂರ್ಣವೆಂದು ಪರಿಗಣಿಸಲ್ಪಡುವುದಿಲ್ಲ. 

ಅದೇ ವೇಳೆ, ಪೂಜೆಯ ಸಮಯದಲ್ಲಿ ದೊಡ್ಡ ಆಚರಣೆಗಳನ್ನು ನಡೆಸಲಾಗುತ್ತಿತ್ತು, ಇದು ಸಾಕಷ್ಟು ಸಮಯ ಮತ್ತು ಶಕ್ತಿಯನ್ನು ತೆಗೆದುಕೊಳ್ಳುತ್ತದೆ. ಮಂತ್ರಗಳನ್ನು ಅತ್ಯಂತ ಪರಿಶುದ್ಧತೆಯಿಂದ ಪಠಿಸಬೇಕಾಗುತ್ತದೆ. ಮುಟ್ಟಿನ ಸಮಯದಲ್ಲಿ, ಮಹಿಳೆಯರು ಹಾರ್ಮೋನ್ ಬದಲಾವಣೆಗಳಿಂದಾಗಿ ಸಾಕಷ್ಟು ನೋವು ಮತ್ತು ಆಯಾಸವನ್ನು ಅನುಭವಿಸುತ್ತಾರೆ. 

ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಹೆಚ್ಚು ಹೊತ್ತು ಕೂರುವುದು, ಜಪ ಮಾಡುವುದಾಗಲಿ, ವಿಧಿವಿಧಾನಗಳನ್ನು ಮಾಡುವುದಾಗಲಿ ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿಯೇ ಅವರು ಪೂಜೆಯಲ್ಲಿ ಕುಳಿತುಕೊಳ್ಳಲು ನಿಷೇಧಿಸಲಾಗಿದೆ.
ಮುಟ್ಟಿನ ಸಮಯದಲ್ಲಿ ಮಹಿಳೆಯರು ಆಯಾಸ ಮತ್ತು ನೋವಿನಲ್ಲಿರುತ್ತಾರೆ ಎನ್ನುವ ಕಾರಣದಿಂದ ಅವರಿಗೆ ಆ ಅವಧಿಯಲ್ಲಿ ಪೂಜೆ, ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಅವಕಾಶವನ್ನು ನೀಡಲಾಗಿಲ್ಲ. ಎಂದಿದ್ದಾರೆ. ಹಾಗಾಗಿ ವೈಜ್ಞಾನಿಕ ಕಾರಣಗಳನ್ನು ಅರಿತು ಮುಟ್ಟಾದ ದಿನಗಳಲ್ಲಿ ದೇವಸ್ಥಾನಕ್ಕೆ ಭೇಟಿ ನೀಡದಿರುವುದು ಒಳ್ಳೆಯದು ಎಂದಿದ್ದಾರೆ