ಕೋಟ್ಯಾಂತರ ರೂಪಾಯಿ ಬ್ಯುಸಿನೆಸ್, ಹುಡುಗಿಯರ ಜೊತೆ ಎಂಜಾಯ್, ನಾಯಿ ಮಾರಾಟ ಮಾರಾಟಗಾರ ಬಿಗ್ ಬಾಸ್ ಸತೀಶ್ ಜೀವನ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಒಟ್ಟೂ 19 ಸ್ಪರ್ಧಿಗಳು ಮನೆಗೆ ಕಾಲಿಟ್ಟಿದ್ದಾರೆ. ಇವರಲ್ಲಿ ಹೆಚ್ಚು ಗಮನ ಸೆಳೆದವರು ಬಿಸಿನೆಸ್‌ಮ್ಯಾನ್ ಡಾಗ್ ಸತೀಶ್. ದುಬಾರಿ ನಾಯಿಗಳ ಒಡೆಯರಾಗಿರುವ ಕಾರಣ ಅವರು ಈಗಾಗಲೇ ಸುದ್ದಿಗಳಲ್ಲಿ ಇರೋ ವ್ಯಕ್ತಿ. ಈ ಬಾರಿ ಅವರು ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿ ಎಂಟ್ರಿ ನೀಡಿದ್ದಾರೆ.
ಮನೆಯಲ್ಲಿ ಪ್ರವೇಶಿಸಿದ ಬಳಿಕ ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ ಸತೀಶ್, ನನಗೆ ಬಾಲ್ಯದಿಂದಲೇ ನಾಯಿಗಳ ಮೇಲೆ ಪ್ರೀತಿ. ಆರನೇ ತರಗತಿಯಲ್ಲಿ ಕ್ರಾಸ್ ಬ್ರೀಡ್ ನಾಯಿಯನ್ನು ತಂದಾಗಿನಿಂದಲೇ ಈ ಹವ್ಯಾಸ ಶುರುವಾಯಿತು. ನಂತರ ರೇರ್ ಬ್ರೀಡ್ ನಾಯಿಗಳನ್ನು ಭಾರತಕ್ಕೆ ತರಿಸಿಕೊಳ್ಳಲು ಆರಂಭಿಸಿದೆ. ಫಂಕ್ಷನ್‌ಗೆ ನಾನು ಒಬ್ಬನೇ ಹೋದರೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ನಾಯಿ ಜೊತೆಯಲ್ಲಿ ಹೋದರೆ ತಕ್ಷಣ ಎಲ್ಲರೂ ಗುರುತಿಸುತ್ತಾರೆ ಎಂದು ಹೇಳಿದ್ದಾರೆ.
ಇಷ್ಟೇ ಅಲ್ಲದೆ, ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ ಅವರು, ಪತ್ನಿಯ ಜೊತೆ ಸಣ್ಣ ಸಮಸ್ಯೆಯಿಂದ ನಾವು ದೂರವಿದ್ದೇವೆ. ನನಗೆ ಮಗನೇ ಜಗತ್ತು. ಅವನನ್ನು ನಾನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದೇನೆ. ಎರಡನೇ ಮದುವೆ ಮಾಡುವ ಯೋಚನೆ ನನಗಿಲ್ಲ. ಏಕೆಂದರೆ ಬರುವ ತಾಯಿ ಮಗನಿಗೆ ಹೇಗೆ ವರ್ತಿಸುತ್ತಾಳೋ ಎನ್ನುವ ಭಯ ಸದಾ ಇರುತ್ತದೆ ಎಂದು ಹೃದಯಂಗಮವಾಗಿ ಹೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸತೀಶ್ ಅವರ ಗುರಿ ಸ್ಪಷ್ಟ – ಹಿಂದಿನ ಎಲ್ಲಾ ಸೀಸನ್‌ಗಳಲ್ಲಿ ಸ್ಪರ್ಧಿಗಳು ಮಾಡಿದ ದಾಖಲೆಗಳನ್ನು ಮುರಿಯಬೇಕು ಎಂಬುದು. ಆದರೆ ಈ ಗುರಿ ಸಾಧನೆ ಎಷ್ಟರ ಮಟ್ಟಿಗೆ ಸಾಧ್ಯ ಎನ್ನುವುದನ್ನು ಸಮಯವೇ ತೋರಿಸಬೇಕು. ಬಿಗ್ ಬಾಸ್ ಮನೆಯಲ್ಲಿ ಪ್ರತಿಯೊಂದು ದಿನವೇ ಸವಾಲಿನದ್ದಾಗಿದ್ದು, ಉಳಿಯಲು ಆಟಗಾರರು ಬುದ್ದಿ, ಧೈರ್ಯ ಮತ್ತು ಹೊಂದಾಣಿಕೆ ತೋರಿಸಬೇಕು . ಮುಂದಿನ ದಿನಗಳಲ್ಲಿ ಹೇಗೆ ಆಡ್ತಾರೆ ಎಂಬುದನ್ನು ಕಾದುನೋಡಬೇಕಿದೆ.