ಬಿಗ್ ಬಾಸ್ ಸೀಸನ್ 11ಗೆ ಅಜಿತ್ ಹನುಮಕ್ಕನವರ್ ಫಿಕ್ಸ್, ಉಳಿದ ಸ್ಫಧಿ೯ಗಳಿಗೆ ನಡುಕ ಶುರು
Sep 22, 2024, 08:57 IST
|
ಈಗ ಎಲ್ಲೆಲ್ಲೂ ಬಿಗ್ಬಾಸ್ ಮನೆಗೆ ಹೋಗುವವರದೆ ಸುದ್ದಿ. ಹೌದು ಕಳೆದ ಕೆಲ ದಿನಗಳಿಂದ ಸುವರ್ಣ ನ್ಯೂಸ್ ಮುಖ್ಯಸ್ಥ ಅಜಿತ್ ಹನಮಕ್ಕನವರ್ ಬಿಗ್‌ಬಾಸ್ ಮನೆಗೆ ಹೋಗುತ್ತಾರೆಂದು ಸುದ್ದಿ ಮಾಡಿದ್ದು, ಇದಕ್ಕೆ ಖುದ್ದು ಅಜಿತ್ ತಮ್ಮ ಸೋಷಿಯಲ್ ಮೀಡಿಯಾದಲ್ಲೊಂದು ಪೋಲ್ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಹಲವರು ಇದು ಫೇಕ್ ನ್ಯೂಸ್ ಎಂದರೆ, ಮತ್ತೆ ಕೆಲವರು ನಿಮ್ಮನ್ನು ಬಿಗ್ ಬಾಸ್ ಮನೆಯಲ್ಲಿ ನಿರೀಕ್ಷಿಸುತ್ತಿದ್ದೇವೆ, ಎಂದೂ ಹೇಳಿದ್ದಾರೆ.
ಒಟ್ಟಿನಲ್ಲಿ ಅಜಿತ್ ಬಿಗ್‌ಬಾಸ್ ರಿಯಾಲಿಟಿ ಶೋಗೆ ಕಾಲಿಡುತ್ತಾರೋ ಸೆಕೆಂಡರಿ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ದೊಡ್ಡ ಮಟ್ಟದ ಪರ ವಿರೋಧ ಚರ್ಚೆಗಳಾಗುತ್ತಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಪ್ರೋಮೋ ಶೂಟಿಂಗ್ ಕೂಡ ನಡೆದಿದ್ದು, ಎಡಿಟಿಂಗ್ ಕೆಲಸ ನಡೆಯುತ್ತಿದೆ. ಈ ನಡುವೆ ಕಳೆದವಾರ ಪ್ರೋಮೋ ಶೂಟಿಂಗ್‌ನಲ್ಲಿ ಭಾಗವಹಿಸಿದ ಶೋ ನಿರೂಪಕ ಕಿಚ್ಚನ 2 ಫೋಟೋಗಳೂ ಲೀಕ್ ಆಗಿದ್ದು, ಈ ಬಾರಿಯೂ ಬಿಗ್‌ಬಾಸ್‌ಗೂ ಕಿಚ್ಚನೇ ಬಾಸ್ ಎಂಬುವುದು ಸ್ಪಷ್ಟವಾಗಿದೆ.
ಈ ಮುಂಚೆ ಈ ಶೋಗೆ ಕಿಚ್ಚ ಗುಡ್ ಬೈ ಹೇಳಲಿದ್ದು, ರಿಷಭ್ ಶೆಟ್ಟಿ ಅಥವಾ ಅರವಿಂದ್ ರಮೇಶ್ ಎಂಬ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಇದೀಗ ಸುದೀಪ್ ಅವರೇ ಬರುತ್ತಾರೆ ಎಂದು ಫೈನಲ್ ಆಗಿದೆ.ಇದೀಗ ಅಜಿತ್ ಬಿಗ್‌ಬಾಸ್ ಮನೆಗೆ ಹೋಗುವ ಬಗ್ಗೆ ಆನೇಕ ಗಾಳಿ ಸುದ್ದಿಗಳು ಹರಡುತ್ತಿವೆ.ಇದರ ಬೆನ್ನಲ್ಲೇ ಅವರು ಬರಬಹುದು ಇವರು ಬರಬಹುದು, ಬರ್ತಾರಂತೆ ಎಂಬ ಗಾಸಿಪ್ಸ್ ಸಹಜವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ವಿಶೇಷವೆಂದರೆ ಏಷ್ಯಾನೆಟ್ ಸುವರ್ಣನ್ಯೂಸ್ ಎಡಿಟರ್ ಅಜಿತ್ ಹನಮಕ್ಕನವರ್ ಹೆಸರೂ ಸೇರಿ ಕೊಂಡಿರುವುದು ಸಾಮಾಜಿಕ ಮಾಧ್ಯಮ ಲೋಕದಲ್ಲಿ ಚರ್ಚೆ ಹುಟ್ಟು ಹಾಕಿದೆ. ಕೆಲ ದಿನಗಳ ಹಿಂದಷ್ಟೇ ಇವರು ಎನ್ನಲಾದ ವಿಡಿಯೋ ಒಂದು ವೈರಲ್ ಆಗಿತ್ತು.ಅದರಲ್ಲಿ ಕುಡಿದು ತೂರಾಡುತ್ತಾ ಕಾರ್ ಹತ್ತಿರುವ ವಿಷಯ ತಿಳಿದು ಬಂದಿದೆ. ಇದೀಗ ಅದರ ಬೆನ್ನಲ್ಲೇ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಾಗಿದ್ದುಕೊಂಡು ಬಿಗ್ ಬಾಸ್ ಮನೆಗೆ ಹೋದರೆ ಅವರ ಸ್ಥಾನವನ್ನು ಯಾರು ತುಂಬಬಹುದು ಎಂಬುದೇ ಈಗಿರುವ ದೊಡ್ಡ ಪ್ರಶ್ನೆಯಾಗಿ ನೆಟ್ಟಿಗರನ್ನು ಕಾಡುತ್ತಿರುವಂತೆ ಕಾಣುತ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.