ಬಿಗ್ ಬಾಸ್ ಶಿಶಿರ್ ಮದುವೆ ವಿಷ್ಯ ಹೆತ್ತ ತಂದೆ ತಾಯಿಗೂ ಗೊತ್ತಿಲ್ಲ, ದೊಡ್ಮನೆಯಲ್ಲಿ ಗುಟ್ಟು ರಟ್ಟು
Oct 7, 2024, 13:18 IST
|
ಒಂದು ವಾರದ ಹಿಂದಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಆಗಿ ಶುರುವಾಗಿದ್ದೇನೋ ನಿಜ. ಆದರೆ, ಆರಂಭದಲ್ಲೇ ಬಿಗ್‌ಬಾಸ್ ಮನೆಯೊಳಗೆ ಗದ್ದಲ ಶುರುವಾಗಿದೆ. ಸ್ವರ್ಗ ಹಾಗೂ ನರಕ ಅಂತ ನೋಡದೇನೆ ಸ್ಪರ್ಧಿಗಳು ಕಿತ್ತಾಡುವುದಕ್ಕೆ ಶುರು ಮಾಡಿದ್ದಾರೆ. ಒಂದ್ಕಡೆ ಸ್ವರ್ಗದಲ್ಲಿ 10 ಮಂದಿ ಸ್ಪರ್ಧಿಗಳು ಹಾಗೂ ನರಕದಲ್ಲಿ 7 ಮಂದಿಗಳು ಇದ್ದಾರೆ. ಇವರ ನಡುವೆ ಈಗಾಗಲೇ ಮಾತಿನ ಚಕಮಕಿ ಶುರುವಾಗಿದೆ.
ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿರುವ ಒಬ್ಬೊಬ್ಬ ಸ್ಪರ್ಧಿಯೂ ಪವರ್‌ಫುಲ್ ಆಗಿಯೇ ಇದ್ದಾರೆ. ಗೌತಮಿ, ಮೋಕ್ಷಿತಾ ಪೈ ಹಾಗೂ ಐಶ್ವರ್ಯಾ ಸಿಂಧೋಗಿ, ಧನರಾಜ್ ಆಚಾರ್ ಸ್ವಲ್ಪ ಸೈಲೆಂಟ್ ಅನ್ನೋದು ಬಿಟ್ಟರೆ, ಉಳಿದ ಸ್ಪರ್ಧಿಗಳು ಈಗಾಗಲೇ ತಮ್ಮ ತಾಕತ್ತು ತೋರಿಸುವುದಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಕಿರುತೆರೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕೆಲವು ಕಿತ್ತಾಟ ಆಯ್ತು ಅಂತ ಹೇಳುತ್ತಿದ್ದರೆ, ಮತ್ತೆ ಕೆಲವರು ಸ್ಪರ್ಧಿಗಳ ಬಗ್ಗೆ ಪಾಸಿಟಿವ್ ಆಗಿ ಮಾತಾಡುತ್ತಿದ್ದಾರೆ. ಈ ಮಧ್ಯೆ ಮಾಧ್ಯಮಗಳಲ್ಲಿ ಸುದ್ದಿಯೊಂದು ಓಡಾಡುತ್ತಿದೆ. ಬಿಗ್‌ಬಾಸ್ ಕನ್ನಡ 11ರ ಸ್ಪರ್ಧಿ ಶಿಶಿರ್ ಶಾಸ್ತ್ರಿ ಮದುವೆ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ನಟಿ ಕೋಳಿ ರಮ್ಯಾ ಅವರೊಂದಿಗೆ ಮದುವೆ ಆಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಶಿಶಿರ್ ಶಾಸ್ತ್ರಿ ಬಿಗ್ ಬಾಸ್ ಮನೆಯೊಳಗೆ ಹೋಗುವಾಗ ತನಗೆ ಮದುವೆ ಆಗಿಲ್ಲ ಅಂತ ಹೇಳಿದ್ದರು. ಅಸಲಿಗೆ ಶಿಶಿರ್ ಶಾಸ್ತ್ರಿ, ಕೋಳಿ ರಮ್ಯಾ ಮದುವೆ ಆಗಿದ್ದಾರೆ ಅನ್ನಲಾಗುತ್ತಿತ್ತು. ಆದ್ರೆ ನಿಜವಾ ಸುಳ್ಳ ಗೊತ್ತಿಲ್ಲ.
ಈಗ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಗಮನ ಸೆಳೆಯುತ್ತಿರುವ ಶಿಶಿರ್ ಶಾಸ್ತ್ರಿ ವೈಯಕ್ತಿಕ ಬದುಕಿನ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಬಿಗ್ ಬಾಸ್ ಮನೆಯೊಳಗೆ ಹೋಗುವಾಗ ಕಿಚ್ಚ ಸುದೀಪ್ ಮುಂದೆ ನೀಡಿದ ಹೇಳಿಕೆ. ಅದನ್ನೇ ಇಟ್ಟುಕೊಂಡು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ. ಬಿಗ್ ಬಾಸ್ ಮನೆಯೊಳಗೆ ಹೋಗುವಾಗ ಶಿಶಿರ್ ನನಗೀಗ 33 ವರ್ಷ ಆಗಿದೆ. ನನಗಿನ್ನೂ ಮದುವೆ ಆಗಿಲ್ಲ.
ಮನೆಯೊಳಗೆ ಮಸ್ತ್ ಆಗಿ ಮಜಾ ಮಾಡೋಣ ಅಂತ ಹೋಗುತ್ತಿದ್ದೇನೆ. ಇಲ್ಲಿ ಏನಾದರೂ ಸಾಧಿಸಬೇಕು ಅಂತ ಬಂದಿದ್ದೇನೆ ಎಂದು ಹೇಳಿದ್ದರು.ಕೋಳಿ ರಮ್ಯಾ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರಿಗೆ ಸಿಕ್ಕಿದ್ದ ಕೋಳಿ ಹಿಡಿಯುವ ಟಾಸ್ಕ್‌ನಲ್ಲಿ ಕಾಣಿಸಿಕೊಂಡಿದ್ದರಿಂದ ಕೋಳಿ ರಮ್ಯಾ ಅಂತಲೇ ಜನಪ್ರಿಯರಾಗಿದ್ದಾರೆ. ಇನ್ನು ಬಿಗ್ ಮನೆಯಲ್ಲಿ ಚೈತ್ರಾ ಕುಂದಾಪುರ ಹಸ್ತ ನೋಡಿ ಭವಿಷ್ಯ ಹೇಳುವ ಹೊತ್ತಲ್ಲೂ ಈ ಮದುವೆ ಬಗ್ಗೆ ಮಾತಾಡಿಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.