ಬಿಗ್ ಬಾಸ್ ಸಿರಿ ಇನ್ನೊಂದು ಮುಖ ಹೊರಹಾಕಿದ ಗೆಳೆಯ ಪ್ರಕಾಶ್, ಇನ್ನು ಯಾಕೆ ಮದುವೆ ಆಗಿಲ್ಲ

 | 
Bd

ನಟಿ ಸಿರಿ ಅವರು ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳ ಕಾಲ ನಟಿಯಾಗಿ ಕಾಣಿಸಿಕೊಂಡಿರುವ ಸಿರಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ನಾನು ನಾನಾಗಿರಬೇಕು ಅಂತ ಹೇಳಿಕೊಂಡು ಮನೆಯೊಳಗಡೆ ಕಾಲಿಟ್ಟಿದ್ದಾರೆ. ಅದರಂತೆ ಆಡುತ್ತಿದ್ದಾರೆ ಕೂಡ.

ಉಷಾ ಕಿರಣ್ ಬ್ಯಾನರ್‌ನಡಿ ಜ್ಯೂನಿಯರ್ ಎನ್‌ಟಿಆರ್‌ ಅವರ ನಿನ್ನು ಚೂಡಾಲನಿ ಸಿನಿಮಾದಲ್ಲಿ ತಂಗಿ ಪಾತ್ರದಲ್ಲಿ ನಟಿಸಿದ ನಂತರ ತೆಲುಗಿನಲ್ಲಿಯೇ 4 ಸಿನಿಮಾಗಳಲ್ಲಿ ನಟಿಸಿದ್ದರು. ಆನಂತರ ಅವರು ಕನ್ನಡದಲ್ಲಿ ವಿಷ್ಣುವರ್ಧನ್ ನಟನೆಯ ಸಿಂಹಾದ್ರಿಯ ಸಿಂಹ, ಕಿಚ್ಚ ಸುದೀಪ್ ನಟನೆಯ ಚಂದು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು.

ಸಿರಿ ಅವರು 3oಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು. ಆ ಧಾರಾವಾಹಿಗಳೆಲ್ಲವೂ ಮೆಗಾ ಸೀರಿಯಲ್‌ಗಳು. ಅವರು ಮಾಡಿರುವ ಪ್ರತಿಯೊಂದು ಧಾರಾವಾಹಿ 1000 ಎಪಿಸೋಡ್ ದಾಟಿತ್ತು ಎನ್ನೋದು ನಿಜಕ್ಕೂ ಹೆಮ್ಮೆಯ ವಿಷಯ. ಒಮ್ಮೊಮ್ಮೆ ಅವರು ಏಕಕಾಲಕ್ಕೆ 3-4 ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಒಂದೊಂದು ಧಾರಾವಾಹಿಯಲ್ಲಿ ಅವರು 3-4 ವರ್ಷಗಳಲ್ಲಿ ನಟಿಸಿದ್ದರು.

ಇದೀಗ ಅವರೊಂದಿಗೆ ಒಟ್ಟಿಗೆ ನಟಿಸಿದ್ದ ಪ್ರಕಾಶ ಅವರು ಒಂದಿಷ್ಟು ಮಾತನಾಡಿದ್ದಾರೆ. ಸಿರಿ ಅತ್ಯುತ್ತಮ ನಟಿ ಹಾಗೂ ಒಳ್ಳೆಯ ಮಹಿಳೆ. ಅವರು ಈಗಾಗಲೇ ಬಿಗ್ಬಾಸ್ ಮನೆಯಲ್ಲಿ ಚೆನ್ನಾಗಿ ಆಟವಾಡುತ್ತಿದ್ದಾರೆ. ಅವರಿಗೆ ನಿಮ್ಮ ಸಪೋರ್ಟ್ ಅಗತ್ಯವಿದೆ ಹಾಗಾಗಿ ಅವರಿಗೆ ವೋಟ್ ಮಾಡುವ ಮೂಲಕ ನೀವೂ ಕೂಡ ಸಪೋರ್ಟ್ ಮಾಡಿ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.