ಆದಷ್ಟು ಬೇಗ OTT ಯಲ್ಲಿ ಮತ್ತೊಮ್ಮೆ ಬಿಗ್ ಬಾಸ್ ಆರಂಭ, ಕಿಚ್ಚ ಸುದೀಪ್ ಇನ್ನುಮುಂದೆ ಇರಲ್ಲ

 | 
H

ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಮುಗಿದು ಕೆಲವು ದಿನಗಳಾಗಿವೆಯಷ್ಟೇ. ಇದೀಗ ಬಿಬಿಕೆ ಒಟಿಟಿ ಆವೃತ್ತಿ ಆರಂಭವಾಗಲಿದೆ ಎಂಬ ಗುಸುಗುಸು ಹಬ್ಬಿದೆ. ಬಿಗ್‌ಬಾಸ್‌ಗೆ ಭರ್ಜರಿ ಟಿಆರ್‌ಪಿ ದೊರಕಿರುವುದರಿಂದ ಒಟಿಟಿ ಆವೃತ್ತಿ ಆರಂಭಿಸುವ ಕುರಿತು ಚಿಂತಿಸಲಾಗಿದೆ ಎನ್ನಲಾಗಿದೆ.

ಬಿಗ್‌ಬಾಸ್‌ ಕನ್ನಡ ಒಟಿಟಿ ಆವೃತ್ತಿಯು ಮುಂದಿನ ದಿನಗಳಲ್ಲಿ ಆರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ. ಬಿಗ್‌ಬಾಸ್‌ ಮನೆಗೆ ಮತ್ತೆ ಸುಣ್ಣಬಣ್ಣ ಬಳಿಯಲಾಗುತ್ತಿದ್ದು, ಇದು ಒಟಿಟಿ ಆವೃತ್ತಿ ಆರಂಭವಾಗುವ ಸೂಚನೆ ಎನ್ನಲಾಗಿದೆ. ಆದರೆ, ಕಿಚ್ಚ ಸುದೀಪ್‌ ಅವರು ಮ್ಯಾಕ್ಸ್‌ ಚಿತ್ರೀಕರಣದಲ್ಲಿ ಬಿಝಿ ಇದ್ದಾರೆ. 

ಕೆಸಿಸಿ 10 ಕ್ರಿಕೆಟ್‌ ಪಂದ್ಯಾಟವೂ ಇರುವುದರಿಂದ ಸುದೀಪ್‌ ಸದ್ಯಕ್ಕೆ ಬಿಗ್‌ಬಾಸ್‌ ವೀಕೆಂಡ್‌ ಪಂಚಾಯಿತಿಗೆ ಲಭ್ಯ ಇರುವ ಸಾಧ್ಯತೆ ಇಲ್ಲ. ಬಿಗ್‌ಬಾಸ್‌ ಕನ್ನಡ ಸೀಸನ್‌ 10ಕ್ಕೆ ಭರ್ಜರಿ ಟಿಆರ್‌ಪಿ ದೊರಕಿರುವುದರಿಂದ ಒಟಿಟಿ ಆವೃತ್ತಿ ಆರಂಭಿಸುವ ಸಾಧ್ಯತೆ ಇದೆ ಎಂದು ಟಿವಿ9 ವರದಿ ತಿಳಿಸಿದೆ. 2022ರಲ್ಲಿ ಕನ್ನಡದ ಮೊದಲ ಬಿಗ್‌ಬಾಸ್‌ ಒಟಿಟಿ ಆವೃತ್ತಿಯು ವೂಟ್‌ ಸೆಲೆಕ್ಟ್‌ನಲ್ಲಿ ಪ್ರಸಾರವಾಗಿತ್ತು. ಬಿಗ್‌ಬಾಸ್‌ ಮಿನಿ ಆವೃತ್ತಿಯಲ್ಲಿ ಹದಿನಾರು ಸ್ಪರ್ಧಿಗಳು ಭಾಗವಹಿಸಿದ್ದರು. ಇವರಲ್ಲಿ ಟಾಪ್‌ 4 ಸ್ಥಾನ ಪಡೆದವರು ನೇರವಾಗಿ ಬಿಗ್‌ಬಾಸ್‌ ಕನ್ನಡ ಸೀಸನ್‌9ಕ್ಕೆ ಎಂಟ್ರಿ ಪಡೆದಿದ್ದರು. 

ಬಿಗ್‌ಬಾಸ್‌ ಕನ್ನಡ ಒಟಿಟಿ ಸೀಸನ್‌ನಲ್ಲಿ ರೂಪೇಶ್‌ ಶೆಟ್ಟಿ ಗೆಲುವು ಪಡೆದಿದ್ದರು. ಬಿಗ್‌ಬಾಸ್‌ ಕನ್ನಡ ಸೀಸನ್‌ 9 ಟೀವಿ ರಿಯಾಲಿಟಿ ಶೋನಲ್ಲೂ ರೂಪೇಶ್‌ ಶೆಟ್ಟಿ ಗೆಲುವು ಪಡೆದಿದ್ದರು. ಬಿಗ್‌ಬಾಸ್‌ ಕನ್ನಡ ಒಟಿಟಿ ಆವೃತ್ತಿ ಆರಂಭವಾಗುವ ಕುರಿತು ಜಿಯೋ ಸಿನಿಮಾ ಕಡೆಯಿಂದ ಯಾವುದೇ ಅಪ್‌ಡೇಟ್‌ ಬಂದಿಲ್ಲ. ಜಿಯೋ ಸಿನಿಮಾ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲೂ ಯಾವುದೇ ಸಣ್ಣ ಹಿಂಟ್‌ ದೊರಕಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಸ್ಪಷ್ಟತೆ ದೊರಕಲಿದೆ. ಈ ಬಾರಿಯ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸಂಚಿಕೆಗಳು ಹಲವು ಕಾರಣಗಳಿಂದ ಸುದ್ದಿಯಲ್ಲಿತ್ತು. 

ಸ್ಪರ್ಧಿಗಳ ಜಗಳ, ಆಟದ ರೀತಿಯು ಚರ್ಚೆಗೆ ಕಾರಣವಾಗಿತ್ತು. ಆದರೆ, ಇದೇ ಸಮಯದಲ್ಲಿ ಬಿಗ್‌ಬಾಸ್‌ಗೆ ಭರ್ಜರಿ ಟಿಆರ್‌ಪಿ ದೊರಕಿತ್ತು. ಹಾಗಾಗಿ ಓಟಿಟಿ ಅಲ್ಲಿ ಹೊಸ ಸೀಸನ್ ಶುರು ಮಾಡುವ ಕುರಿತು ಮಾಹಿತಿ ನೀಡಿದ್ದಾರೆ. ಆದರೆ ಸುದೀಪ್ ಅವರು ಹೋಸ್ಟ್ ಮಾಡೋದು ಡೌಟ್ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.