ಬಿಗ್ಬಾಸ್ ತುಕಾಲಿ ಕಾರು ಅಪ,ಘಾತ, ವತೂ೯ರ್ ಸಂತೋಷ್ ಫಸ್ಟ್ ರಿಯಾಕ್ಷನ್

 | 
Jjj

ಬಿಗ್ ಬಾಸ್ ಖ್ಯಾತಿಯ ಹಾಸ್ಯ ನಟ ತುಕಾಲಿ ಸಂತೋಷ್ ಮತ್ತು ಅವರ ಪತ್ನಿ ಮಾನಸಾ ಪ್ರಯಾಣಿಸುತ್ತಿದ್ದ ಕಾರು ಕುಣಿಗಲ್ ತಾಲ್ಲೂಕಿನ ಹೊನ್ನೇನಹಳ್ಳಿ ಬಳಿ ಅಪಘಾತಕ್ಕೀಡಾಗಿತ್ತು. 'ತುಕಾಲಿ' ಸಂತೋಷ್ ಕಾರು ಓಡಿಸುತ್ತಿದ್ದರು ಜೋರಾಗಿ ಬಂದ ಆಟೋ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಆಟೋ ಚಾಲಕ ಜಗದೀಶ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಅವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಟೋ ಚಾಲಕ ಜಗದೀಶ್ ಸಾವನ್ನಪ್ಪಿದ್ದಾರೆ.

ಜಗದೀಶ್ ಅವರ ಆಟೋ ಅಪಘಾತದಲ್ಲಿ ಜಖಂಗೊಂಡಿತ್ತು. ಇನ್ನು ಗಾಯಗೊಂಡಿದ್ದ ಜಗದೀಶ್‌ರನ್ನು ಕುಣಿಗಲ್ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು  ಬೆಳಗಿನಜಾವ ಜಗದೀಶ್ ಕೊನೆಯುಸಿರೆಳೆದಿದ್ದಾರೆ. ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದುರ್ದೈವಿ ಜಗದೀಶ್ ಅವರನ್ನು ಕುಣಿಗಲ್ ತಾಲ್ಲೂಕಿನ ಕೋಡಿಹಳ್ಳಿಪಾಳ್ಯ ನಿವಾಸಿ ಎಂದು ಗುರುತಿಸಲಾಗಿದೆ.

ಇನ್ನು ವಿಷಯ ತಿಳಿಯುತ್ತಿದ್ದ ಹಾಗೆ ವರ್ತೂರ್ ಸಂತೋಷ್ ಆಗಮಿಸಿ ಗೆಳೆಯನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.ನಾನು ಬಡವ ಅಲ್ಲ, ಶ್ರಮಜೀವಿ. ನಾನು ಬಡವ ಅಂತ ಎಲ್ಲಿಯೂ ಹೇಳಿಲ್ಲ. ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ನಾನು ಕಾರು ಖರೀದಿ ಮಾಡುವ ಶಕ್ತಿ ಕೊಡು ಅಂತ ಬಹಳ ಹಿಂದೆ ಬೇಡಿಕೊಂಡಿದ್ದೆ. ನನ್ನ ಬಳಿ ಪುಟ್ಟ ಕಾರೊಂದಿತ್ತು. ಈಗ ದೊಡ್ಡ ಕಾರು ಖರೀದಿಸಿದ್ದೇನೆ. ನನಗೆ ಕಾರಿನ ಅವಶ್ಯಕತೆ ಇತ್ತು. 'ಬಿಗ್ ಬಾಸ್' ಶೋನಿಂದ ನನಗೆ ಸಿಕ್ಕ ಹಣದ ಜೊತೆಗೆ ನಾನು ಕೂಡ ಸ್ವಲ್ಪ ಹಣ ಸೇರಿಸಿ ಈ ಕಾರು ತೆಗೆದುಕೊಂಡೆ. ಇಎಂಐ ಕೂಡ ಕಟ್ಟಬೇಕು. ಇಎಂಐ ಇದ್ದರೆ ಸ್ವಲ್ಪ ಜವಾಬ್ದಾರಿ ಬರುತ್ತದೆ ಎಂದಿದ್ದರು.

ತುಕಾಲಿ ಸಂತೋಷ್ ಅವರು ಹಲವು ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆಗಿದ್ದಾರೆ. ‘ಗಿಚ್ಚಿ ಗಿಲಿ ಗಿಲಿ ಸೀಸನ್ 3’, ‘ಜೋಡಿ ನಂಬರ್ 1’, ‘ಕಾಮಿಡಿ ಕಿಲಾಡಿಗಳು 3’ ರಿಯಾಲಿಟಿ ಶೋಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 10’ಗೆ ಕಾಲಿಟ್ಟು ಮತ್ತಷ್ಟು ಖ್ಯಾತಿ ಪಡೆದರು. ವರ್ತೂರು ಸಂತೋಷ್ ಜೊತೆಗಿನ ಗೆಳೆತನದ ಕಾರಣದಿಂದಲೂ ತುಕಾಲಿ ಸಂತೋಷ್ ಸುದ್ದಿ ಆದರು. ಈಗ ಕಾರು ಅಪಘಾತದ ಮೂಲಕ ಸುದ್ದಿ ಆಗಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.