ಬಿಗ್ ಬಾಸ್ ವಿನಯ್ ಗೌಡ ಪತ್ನಿ ಕೆಂ ಡಮಂಡಲ; ಸೋನ್ ಗೌಡ ಚಳಿಬಿಡಿಸಿದ ಅಕ್ಷತಾ

 | 
Uuu

ಅಪ್ರಾಪ್ತ ಬಾಲಕಿಯನ್ನ ಸೋನುಗೌಡ ಆಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಮತ್ತಷ್ಟು ಬೆಳವಣಿಗೆ ಕಂಡುಬರುತ್ತಿವೆ. ಪೊಲೀಸರು ನಟಿ ಸೋನು ಗೌಡ ಅವರನ್ನು ಬಾಲಕಿಯ ಚಿಕ್ಕಪ್ಪನ ಮನೆಗೆ ಕರೆತಂದಿದ್ದಾರೆ. ಸ್ಥಳ ಮಹಜರುಗಾಗಿ ಸೋನು ಗೌಡ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಕರೆತಂದಿದ್ದಾರೆ. ಬಾಲಕಿಯ ಚಿಕ್ಕಪ್ಪ ಅಮರೇಗೌಡ ಎಂಬವರ ಮನೆಯಲ್ಲಿ ಸ್ಥಳ ಮಹಜರು ನಡೆಸಲು ಪೊಲೀಸರು ಆಗಮಿಸಿದ್ದರು. 

ಅಮರೇಗೌಡನ ಮನೆಯಿಂದಲೇ ಸೋನು ಗೌಡ ಬಾಲಕಿಯನ್ನ ಕರೆದೊಯ್ದಿದ್ದರು ಎನ್ನಲಾಗಿದೆ. ಮನೆಯಲ್ಲಿ ವಿಡಿಯೋ ಚಿತ್ರೀಕರಣ ಸೇರಿದಂತೆ ಹೇಳಿಕೆ ದಾಖಲು ನಡೆಯಲಿದೆ. ಸೋನುಗೌಡ ಬರುತ್ತಿದ್ದಂತೆ ರೊಚ್ಚಿಗೆದ್ದ ಕಾಚಾಪುರು ಗ್ರಾಮಸ್ಥರು ಕಾರನ್ನ ಅಡ್ಡಗಟ್ಟಿ ರೊಚ್ಚಿಗೆದ್ದಿದ್ದಾರೆ. ಕಾರಿನಿಂದ ಸೋನುಗೌಡ ಕೆಳಗೆ ಇಳಿಯಂತೆ ಪಟ್ಟು ಹಿಡಿದಿದ್ದಾರೆ. ಟಿನ್ ಶೆಡ್ ಮನೆಯಲ್ಲಿ ವಾಸವಿರೋ ಬಾಲಕಿಯ ಕುಟುಂಬದವರಿಂದಲೇ ಸೋನು ಗೌಡ ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಬ್ಯಾಡರಳ್ಳಿ‌ ಪೊಲೀಸರ ಬುಲಾವ್ ಮೇರೆಗೆ ಬಾಲಕಿಯ ತಂದೆ ತಾಯಿ ಬೆಂಗಳೂರಿಗೆ ತೆರಳಿದ್ದು ಅತ್ತ ತಂದೆ ತಾಯಿಯನ್ನು ಬೆಂಗಳೂರಿಗೆ ಕರೆಸಿಕೊಂಡು, ಇತ್ತ ಸೋನು ಗೌಡರನ್ನು ಬಾಲಕಿಯ ಗ್ರಾಮಕ್ಕೆ ಕರೆತಂದಿದ್ದಾರೆ ಪೊಲೀಸರು. ಬಾಲಕಿಯನ್ನು ಓದಿಸ್ತೇನೆ ಎಂದು ಸೋನು ಗೌಡ ಮಗುವನ್ನು ಕರೆದೊಯ್ದಿದ್ದಾಳೆ ಎಂದು ಬಾಲಕಿ ಚಿಕ್ಕಮ್ಮ ಹೇಳಿಕೆ ಕೊಟ್ಟಿದ್ದಾರೆ. ಅವಳು ಅಂದುಕೊಂಡಷ್ಟು ಇನ್ನೋಸೆಂಟ್ ಅಲ್ಲ ಎಂದಿದ್ದಾರೆ.

ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಹಿನ್ನೆಲೆ ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 10 ರ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅರೆಸ್ಟ್ ಆಗಿದ್ದಾರೆ. ಹೆಣ್ಣು ಮಗುವನ್ನು ಅಕ್ರಮವಾಗಿ ದತ್ತು ಪಡೆದಿದ್ದ ಹಿನ್ನೆಲೆ ಸೋನು ಗೌಡರನ್ನು ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ನಟಿಯನ್ನು ಬಂಧಿಸಿ ಕೋರ್ಟ್​ಗೆ ಹಾಜರು ಪಡಿಸಿದ್ರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಸೋನು ಗೌಡ ಅವರನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.

ಮಗುವನ್ನು ದತ್ತು ಪಡೆಯಲು ಹಲವು ನಿಯಮಗಳಿವೆ. ಈ ಯಾವ ನಿಯಮವನ್ನು ಸಹ ನಟಿ ಸೋನು ಗೌಡ ಪಾಲಿಸಿಲ್ಲ ಎಂದು ದೂರು ದಾಖಲಾಗಿತ್ತು. ಈ ಹಿನ್ನೆಲೆ ಸೋನು ಬಂಧಿಸಿದ ಪೊಲೀಸರು ಕೋರ್ಟ್​ಗೆ ಹಾಜರು ಪಡಿಸಿದ್ರು. ಇಂದಿನಿಂದ ನಾಲ್ಕು ದಿನಗಳ ಕಾಲ ಸೋನು ಗೌಡ ಅವರನ್ನು ಕಸ್ಟಡಿಗೆ ನೀಡಲಾಗಿದೆ. ಸೋಮವಾರ ಮತ್ತೆ ಕೋರ್ಟ್​ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.