ಬಿಗ್ ಬಾಸ್ ವಿನ್ನರ್ ಫಿಕ್ಸ್, ಆರ್ಯವರ್ಧನ್ ಗುರೂಜಿ ಭವಿಷ್ಯ ವಾಣಿ

 | 
Nd

ಬಿಗ್ ಬಾಸ್ ಕನ್ನಡ 10 ಶೋನಲ್ಲಿ ಪದೇ ಪದೇ ಒಂದಲ್ಲ ಒಂದು ಸಮಸ್ಯೆಗಳು, ಕಾಂಟ್ರವರ್ಸಿಗಳು ಆಗುತ್ತಲೇ ಇವೆ. ಈ ಸೀಸನ್‌ನಲ್ಲಿ ಹೆಚ್ಚು ವಿವಾದ ಆಗುತ್ತಿವೆ. ಈ ಬಗ್ಗೆ ಆರ್ಯವರ್ಧನ್ ಗುರೂಜಿ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.ಇಲ್ಲಿ ವಾಸ್ತು ತುಂಬ ವರ್ಕ್ ಆಗತ್ತೆ. 8ನೇ ತಾರೀಖು 10ನೇ ಸೀಸನ್ ಆರಂಭಿಸಿದ್ದಾರೆ. ವಾಸ್ತು ನೆಗೆಟಿವ್ ಇರತ್ತೆ. ಇದು ತಪ್ಪು.

 ನಾನು ತುಂಬ ಸ್ಟಡಿ ಮಾಡಿದ್ದು ಬಿಗ್ ಬಾಸ್ ಶೋನಲ್ಲಿ ವಾಸ್ತು ಸರಿ ಇಲ್ಲ ಅಂತ ಈ ಹಿಂದೆಯೂ ಹೇಳಿದ್ದೆ. ಬಿಗ್ ಬಾಸ್ ಮನೆಯಲ್ಲಿ ವಿದ್ಯುತ್ ಕಂಬಗಳು, ನೀರು, ರಸ್ತೆ ಯಾವುದೂ ಸರಿ ಇಲ್ಲ. ಇದು ಅತಿ ಹೆಚ್ಚು ಮಾರ್ಕೆಟ್ ಆದರೂ ನೆಮ್ಮದಿ ಇಲ್ಲ. ಬಿಗ್ ಬಾಸ್ ಈ ಬಾರಿ ಸರಿ ಇಲ್ಲ, ಒಂದಲ್ಲ ಒಂದು ಸಮಸ್ಯೆ ಬರುತ್ತಿದೆ. ಒಂದು ವಯಸ್ಸಿನವರು ಬಿಗ್ ಬಾಸ್ ಶೋವನ್ನು ನೋಡುತ್ತಿಲ್ಲ. 

ಬಿಗ್ ಬಾಸ್ ಶೋನಲ್ಲಿ ಇನ್ನೂ ಕಷ್ಟ ಇದೆ. ಒಂದಲ್ಲ ಒಂದು ಕೇಸ್ ನಡೆಯುತ್ತಿದೆ ಎಂದು ಆರ್ಯವರ್ಧನ್ ಗುರೂಜಿ ಅವರು ಹೇಳಿದ್ದಾರೆ.ಬಿಗ್ ಬಾಸ್ ಮನೆಯಲ್ಲಿ ವಾಸ್ತು ಸರಿ ಇಲ್ಲ. 100ಕ್ಕೆ 100 ರಷ್ಟು ಸಮಸ್ಯೆ ಇರುತ್ತದೆ. ಬಿಗ್ ಬಾಸ್ ಟ್ರೋಫಿ ಗೆದ್ದಮೇಲೂ ಗಲಾಟೆ ನಡೆಯುತ್ತದೆ. ಹಿಂದಿ ಬಿಗ್ ಬಾಸ್, ಆಂಧ್ರದಲ್ಲಿಯೂ ತೆಲುಗು ಬಿಗ್ ಬಾಸ್ ಶೋ ವಿಚಾರವಾಗಿ ಗಲಾಟೆ ಆಗಿದೆ. ಆಂಧ್ರದಲ್ಲಿ ರನ್ನರ್ ಅಪ್ ಆದವರ ಕಾರ್‌ ಒಡೆಯಲಾಗುತ್ತದೆ.

 ಹಾಗೆಯೆ ಕನ್ನಡದಲ್ಲಿಯೂ ಆಗುತ್ತದೆ ಎಂದು ಆರ್ಯವರ್ಧನ್ ಗುರೂಜಿ ಅವರು ಹೇಳಿದ್ದಾರೆ.ಬಿಗ್ ಬಾಸ್ ಮನೆಗೆ ಎಲ್ಲರೂ ಈ ಬಾರಿ ಪ್ಲ್ಯಾನ್ ಮಾಡಿಕೊಂಡು ಹೋಗಿದ್ದಾರೆ. ಎಲ್ಲ ಸ್ಪರ್ಧಿಗಳು ಸಖತ್ ಆಗಿ ಹೊರಗಡೆ ಮಾರ್ಕೇಟಿಂಗ್ ಮಾಡಿಸ್ತಿದ್ದಾರೆ. ಈಗಲೇ ನಾವು ಫಿನಾಲೆಯಲ್ಲಿದ್ದೇವೆ ಅನ್ನೋ ತರ ಆಡ್ತಿದ್ದಾರೆ. ಈ ಹಿಂದಿನ ಸೀಸನ್‌ಗಳಲ್ಲಿ 10-12 ವಾರ ಕಳೆದರೂ ಕೂಡ ಯಾರು ವಿಜೇತರು ಅಂತ ಹೇಳೋದು ಕಷ್ಟ ಆಗುತ್ತಿತ್ತು.

ಆದರೆ ಈ ಬಾರಿ ನಾವು ಈಗಲೇ ಯಾರು ಗೆಲ್ತಾರೆ ಅಂತ ಭವಿಷ್ಯ ಹೇಳಬಹುದು. ಈ ಬಾರಿ ಮಹಿಳೆ ಬಿಗ್ ಬಾಸ್ ಗೆಲ್ಲಿಸುವ ಸಾಧ್ಯತೆ ಇದೆ. ವರ್ತೂರು ಸಂತೋಷ್ ಅವರು ಬಿಗ್ ಬಾಸ್ ಟ್ರೋಫಿ ಗೆದ್ದರೂ ಆಶ್ಚರ್ಯ ಇಲ್ಲ. ಮೀನ ರಾಶಿ ಅವರು ಟ್ರೋಫಿ ಪಡೆಯಬಹುದು. ವರ್ತೂತು ಅವರದ್ದು ಮೀನ ರಾಶಿ ಅಂತ ಆರ್ಯವರ್ಧನ್ ಗುರೂಜಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.