ಹೆಣ್ಣುಮಕ್ಕಳ ಎ.ದೆ ಮುಟ್ಟುತ್ತಿದ್ದ ಬಿಜೆಪಿ ಸಂಸದ, ಇದೀಗ ಕುಸ್ತಿ ಪೆಡರೇಶನ್ ಅಮಾನತು ಮಾಡಿದ ಸರ್ಕಾರ

 | 
Jnb

ಭಾರತೀಯ ಕುಸ್ತಿ ಫೆಡರೇಶನ್‌ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಆಪ್ತ ಸಂಜಯ್‌ ಸಿಂಗ್‌ ನೂತನ ಅಧ್ಯಕ್ಷನಾಗಿ ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ಮನನೊಂದ ಒಲಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ತಾವು ಕುಸ್ತಿಯನ್ನೇ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದಾರೆ.

ಸಾಕ್ಷಿ ಮಲಿಕ್ ಗುರುವಾರ ಕುಸ್ತಿಯಿಂದ ನಿವೃತ್ತಿ ಘೋಷಿಸಿದ್ದಾರೆ. ಲೈಗಿಂಕ ಕಿರುಕುಳ ಆರೋಪಿ, ಫೆಡರೇಶನ್ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರು ಗೆದ್ದಿದ್ದರಿಂದ ವ್ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಚುನಾವಣೆಯ ನಂತರ ಸಾಕ್ಷಿ ಅವರು ಈ ನಿರ್ಧಾರ ಘೋಷಿಸಿದ್ದಾರೆ.

ಬ್ರಿಜ್ ಭೂಷಣ್ ಸಿಂಗ್ ಅವರ ನಿಷ್ಠಾವಂತರ ಅಧ್ಯಕ್ಷತೆಯಲ್ಲಿ ಸ್ಪರ್ಧಿಸಲು ತಾನು ಇಚ್ಛಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ. ಮಾಜಿ ಮುಖ್ಯಸ್ಥ ಭೂಷಣ್ ಶರಣ್ ಸಿಂಗ್ ಅವರು ಕುಸ್ತಿ ಸಂಸ್ಥೆಯ ಮೇಲೆ ಪರೋಕ್ಷ ಹಿಡಿತ ಸಾಧಿಸಿ ನಂತರ ನೆಡೆದ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅವರ ಸಮಿತಿಯು ಹೆಚ್ಚಿನ ಅಧಿಕಾರವನ್ನು ಪಡೆದುಕೊಂಡಿತು.

ಯುಪಿ ವ್ರೆಸ್ಲಿಂಗ್ ಅಸೋಸಿಯೇಷನ್ ​​ಉಪಾಧ್ಯಕ್ಷ ಸ್ಥಾನವನ್ನು ಹೊಂದಿರುವ ಸಂಜಯ್ ಅವರು ತಮ್ಮ ಪ್ರತಿಸ್ಪರ್ಧಿ ಅನಿತಾ ಶೆಯೊರನ್ ಅವರು ಏಳು ಮತಗಳನ್ನು ಪಡೆದರೆ ಸಂಜಯ್‌ 40 ಮತಗಳನ್ನು ಪಡೆದರು. ಸಿಡಬ್ಲ್ಯೂಜಿ ಪದಕ ವಿಜೇತ ಪಟುಗಳು ಮಹಿಳಾ ಅಧ್ಯಕ್ಷರ ನೇಮಕವಾಗಬೇಕೆಂದು ಬಯಸಿದ್ದರು, ಆದರೆ ಅದು ಆಗಲಿಲ್ಲ. 

ಆದ್ದರಿಂದ ಕ್ರೀಡೆ ತ್ಯಜಿಸಲು ನಿರ್ಧರಿಸಿದರು ಎಂದು ಹೇಳಿದರು. ಕಣ್ಣೀರಿಡುತ್ತಾ ಶೂ ಬಿಚ್ಚಿಟ್ಟು ವಿದಾಯ ಘೋಷಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.