ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ, ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಕತೆ ಏನು

 | 
Vhh

 ಲೋಕಸಭಾ ಚುನಾವಣೆಗೆ ಈಗಾಗಲೇ ಒಳಒಪ್ಪಂದಗಳ ಚರ್ಚೆಗಳು ಆರಂಭವಾಗಿದ್ದು, ಕರ್ನಾಟಕ ಪ್ರಮುಖ ಕ್ಷೇತ್ರ ಮಂಡ್ಯದಲ್ಲಿ ಈಗ ಬಿಜೆಪಿ ಜೆಡಿಎಸ್‌ ಒಪ್ಪಂದ ಮಾಡಿಕೊಳ್ಳಲಿದ್ದು, ಇದರಿಂದ ಹಾಲಿ ಸಂಸದೆ ಸುಮಲತಾಗೆ ಸಂಕಷ್ಟ ಎದುರಾಗಲಿದೆ ಎಂದು ತಿಳಿದು ಬಂದಿದೆ.

ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲಿದ್ದು, ಎರಡು ಪಕ್ಷಗಳ ನಡುವೆ ಕೊಡು ಕೊಳ್ಳುವಿಕೆಯ ಅಗತ್ಯವನ್ನು ಪರಿಗಣಿಸಿ ಕೇಸರಿ ಪಕ್ಷ ಬಿಜೆಪಿ ತನ್ನ ಮಿತ್ರ ಪಕ್ಷವನ್ನು ತೃಪ್ತಿಪಡಿಸಲು ಹುಡುಕಬೇಕಾಗಿದೆ. ಇದರಿಂದ ಮಂಡ್ಯದಿಂದ ಸ್ವತಂತ್ರವಾಗಿ ಗೆದ್ದು ಈ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆಗೆ ಬಿಜೆಪಿಯನ್ನು ಬೆಂಬಲಿಸಿದ ಸುಮಲತಾ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಕನಸುಗಳನ್ನು ತ್ಯಜಿಸಬೇಕಾಗಬಹುದು.

ಇನ್ನು ಕೆಲದಿನಗಳ ಹಿಂದೆ ಕುಮಾರಸ್ವಾಮಿ ಅವರು ಮಾತನಾಡಿದ್ದು ನೋಡಿದರೆ ಎಲ್ಲಿ ಮಂಡ್ಯ ಕ್ಷೇತ್ರಕ್ಕೆ ತಮ್ಮ ಮಗನನ್ನು ಅಂದರೆ ನಟ ನಿಖಿಲ್ ಗೌಡ ಅವರನ್ನು ಕಣಕ್ಕಿಳಿಸಲು ಭಾರಿ ಪ್ರಯತ್ನ ಮಾಡಿದಂತಿತ್ತು.ಒಂದು ವೇಳೆ ಅದು ನಿಜವಾದರೆ ಸುಮಲತಾ ಅಂಬರೀಶ್ ಅವರಿಗೆ ಸಂಕಷ್ಟ ಎದುರಾಗುತ್ತದೆ.

ಈಗ ಎರಡು ಪಕ್ಷಗಳ ನಡುವೆ ಸಂಸತ್ ಚುನಾವಣೆಗೆ ಸೀಟು ಹಂಚಿಕೆ ನಡೆಯುತ್ತಿದ್ದು, ಜೆಡಿಎಸ್ ಕನಿಷ್ಠ ಆರು ಸ್ಥಾನಗಳಿಗೆ ಬೇಡಿಕೆ ಇಡುವ ಸಾಧ್ಯತೆಯಿದೆ. ಆದರೆ ವಾಸ್ತವಿಕವಾಗಿ ನಾಲ್ಕು ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು. ಆದರೆ ಜೆಡಿಎಸ್‌ ಬಿಟ್ಟಕೊಡಲು ಸಿದ್ದರಿಲ್ಲದ ಕ್ಷೇತ್ರವೆಂದರೆ ಅದು ಮಂಡ್ಯವಾಗಿದೆ.

ಈಗ ಸುಮಲತಾ ಏನಾ ಮಾಡಬಹುದು ಎಂದು ಕಾದುನೋಡಬೇಕಿದೆ. ಒಮದು ವೇಳೆ ಅವರನ್ನು ಸುಮ್ಮನಾಗಿಸಲು ಬಿಜೆಪಿ ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡಬಹುದು. ಗಣ್ಯ ವ್ಯಕ್ತಿಗಳ ಕೋಟಾದಲ್ಲಿ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳಬಹುದು.
ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.