ಮೈಸೂರು ಮಹಾರಾಜರಿಗಿಂತ ಶ್ರೀಮಂತೆ ಬಿಜೆಪಿಯ ಶೋಭಕ್ಕ; ಇಷ್ಟು ದುಡ್ಡು ಎಲ್ಲಿಂದ್ದ
ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಹೀಗೆ ಎಲ್ಲ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ತಮ್ಮ ಆಸ್ತಿ ವಿವರಗಳನ್ನು ಬಹಿರಂಗ ಪಡಿಸಿದ್ದಾರೆ. ಹೌದು ಒಬ್ಬೊಬ್ಬರ ಅಸ್ತಿಯ ವಿವರ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ. ಹೌದು ಇತ್ತೀಚಿಗಷ್ಟೇ ನಾಮಪತ್ರ ಸಲ್ಲಿಕೆ ಮಾಡಿರುವ ಶೋಭಾ ಕರಂದ್ಲಾಜೆ ಮಹಾರಾಜ ಯದುವೀರ್ ಒಡೆಯರ್ ಗಿಂತ ಶ್ರೀಮಂತೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ತಮ್ಮ ಬಳಿ 16.02 ಕೋಟಿ ರೂ. ಮೌಲ್ಯದ ಆಸ್ತಿ ಇರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ. ಇದು ಇತ್ತೀಚಿಗಷ್ಟೇ ಪ್ರತಾಪ್ ಸಿಂಹ ಅವರ ಬದಲಾಗಿ ಟಿಕೇಟ್ ಪಡೆದ ಯದುವೀರ್ ಅವರು ಇವರಿಗಿಂತ ಕಡಿಮೆ ಆಸ್ತಿ ಹೊಂದಿದ್ದಾರೆ.
ಶೋಭಾ ಕರಂದ್ಲಾಜೆ ಆಸ್ತಿಯಲ್ಲಿ ಒಟ್ಟು ಚರಾಸ್ತಿ 9,23,66,909 ರೂ. ಹಾಗೂ ಒಟ್ಟು ಸ್ಥಿರಾಸ್ತಿ ಮೌಲ್ಯ 6,78,97,000 ರೂ. ಇದೆ. ಒಟ್ಟು 16.02 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.ಶೋಭಾ ಕರಂದ್ಲಾಜೆ ಅವರ ಬಳಿ ಬರೋಬ್ಬರಿ 1 ಕಿಲೋನ ಚಿನ್ನದ ಬಿಸ್ಕೆಟ್ ಇದೆ. ಇದರ ಮೌಲ್ಯ 68.40 ಲಕ್ಷ ರೂ. ಇನ್ನೂ, 650 ಗ್ರಾಂ ಚಿನ್ನದ ಆಭರಣಗಳಿವೆ.
1620 ಗ್ರಾಂ ಬೆಳ್ಳಿ ಆಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಹೊಂದಿದ್ದಾರೆ. ಅದು ದೇವರ ಮೂರ್ತಿ. ದೇವರ ಪಾತ್ರೆ ಸಾಮಾನುಗಳು ಕೂಡ ಇದರಲ್ಲಿ ಸೇರಿವೆ ಎಂದಿದ್ದಾರೆ. ಇನ್ನು ಶೋಭಾ ಕರಂದ್ಲಾಜೆ ಅವರು 4 ಕೋಟಿ ರೂ. ಸಾಲ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ 4.06 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಸದ್ಯ ಅವರ ಬಳಿ 1,71,000 ರೂ. ನಗದು ಇದೆ ಎಂದು ಹೇಳಿ ಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.