ಬಾಲಿವುಡ್ ಖ್ಯಾ ತ ನಿರೂಪಕಿ ಆಸ್ಪತ್ರೆಗೆ ದಾಖಲು; ಬೆಚ್ಚಿಬಿದ್ದ ಕನ್ನಡಿಗರು

 | 
Huu

ಪ್ರಸಿದ್ಧ ಹಾಸ್ಯನಟ ಭಾರತಿ ಸಿಂಗ್ ಅವರು ತಮ್ಮ ಇತ್ತೀಚಿನ ವಿಡಿಯೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ. ಭಾರತಿ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತಿ ಸಿಂಗ್ ಹಾಸ್ಯ ಪ್ರಜ್ಞೆಯಿಂದ ಪ್ರೇಕ್ಷಕರ ಮುಖದಲ್ಲಿ ನಗು ಮೂಡಿಸುತ್ತ ಇದ್ದವರು ಸಡನ್ ಆಗಿ ಆಸ್ಪತ್ರೆ ಸೇರಿದ್ದೇಕೆ ಎನ್ನುವ ಪ್ರಶ್ನೆ ಮೂಡಿದೆ.

ಭಾರತಿ ಸಿಂಗ್ ಇತ್ತೀಚೆಗೆ ಇದ್ದಕ್ಕಿದ್ದಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಿಂದ ಹೊಸ ವ್ಲಾಗ್ ಅನ್ನು ಭಾರತಿ ಸಿಂಗ್ ಚಿತ್ರೀಕರಿಸಿದ್ದಾರೆ. ಈ ವಿಡಿಯೋದಲ್ಲಿ ತಾವು ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ನಂತರ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಭಾರತಿ ಸಿಂಗ್ ಹೇಳಿದ್ದಾರೆ.

ಮೊದಲಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಇದೆ ಎಂದು ಭಾವಿಸಿ ಆಸ್ಪತ್ರೆಗೆ ಹೋಗಲಿಲ್ಲವಂತೆ. ಆದರೆ ನೋವು ಕಡಿಮೆಯಾಗದಿದ್ದಾಗ ಆಸ್ಪತ್ರೆಗೆ ತೆರಳಬೇಕಾಯಿತು ಎಂದು ಹೇಳಿದ್ದಾರೆ. ಭಾರತಿ ಸಿಂಗ್ ಅವರು ಪಿತ್ತಕೋಶದ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವ್ಲಾಗ್‌ನಲ್ಲಿ ಭಾರತಿ ಭಾವುಕರಾಗಿರುವುದನ್ನು ಕಾಣಬಹುದು.

ಕಪಿಲ್ ಶರ್ಮಾ ಶೋ ತೊರೆದ ನಂತರ ಭಾರತಿ ಸಿಂಗ್ ತನ್ನ ಚಾಟ್ ಶೋ ಮತ್ತು ದೈನಂದಿನ ವ್ಲಾಗ್‌ಗಳಿಗಾಗಿ ಗಮನ ಸೆಳೆದಿದ್ದಾರೆ. ಇತ್ತೀಚೆಗಷ್ಟೇ ವಿಡಿಯೋವೊಂದರಲ್ಲಿ ಹಾಸ್ಯನಟ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಎಲ್ಲರನ್ನು ಬೆಚ್ಚಿ ಬೀಳಿಸಿದ್ದಂತೂ ಹೌದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು  ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.