ಶೂಟಿಂಗ್ ಮುಗಿದ ಬಳಿಕ ಯೂಟ್ಯೂಬ್ ನಲ್ಲಿ ವಿಡಿಯೋ ಹಾಕಿ ಕೋಟಿ ಗಳಿಸುತ್ತಿರುವ ಬಾಲಿವುಡ್ ನ ಟಿಯರು
ಬಾಲಿವುಡ್ ನಟಿಯರು ತಮ್ಮ ಸಿನಿಮಾಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ನಟಿ ಮಣಿಯರಿಗೆ ಸೋಷಿಯಲ್ ಮೀಡಿಯಾದಲ್ಲೂ ಅಪಾರ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಕೆಲವು ಬಾಲಿವುಡ್ ನಟಿಯರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ಗಳನ್ನು ನಡೆಸುತ್ತಾರೆ ಮತ್ತು ಅದರಿಂದ ಉತ್ತಮ ಹಣವನ್ನು ಗಳಿಸುತ್ತಾರೆ. ಈ ನಟಿಯರು ಯಾರು ಗೊತ್ತಾ.
ಈ ಪಟ್ಟಿಯಲ್ಲಿ ಮೊದಲ ಹೆಸರು ನಟಿ ಶಿಲ್ಪಾ ಶೆಟ್ಟಿ. ಶಿಲ್ಪಾ ಶೆಟ್ಟಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹಲವು ವರ್ಷ ಹಿಂದೆಯೇ ಪ್ರಾರಂಭಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. 7 ಜೂನ್ 2016 ರಂದು ಶಿಲ್ಪಾ YouTube ಚಾನೆಲ್ ತೆರೆದ್ರು. ಇಂದು ಶಿಲ್ಪಾ ಶೆಟ್ಟಿ ಚಾನೆಲ್ 27.7 ಲಕ್ಷ ಚಂದಾದಾರರನ್ನು ಹೊಂದಿದೆ. ಶಿಲ್ಪಾ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಸಲಹೆಗಳು, ಅಡುಗೆ ರೆಸಿಪಿಗೆ ಸಂಬಂಧಿಸಿದ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ.
ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಯೂಟ್ಯೂಬ್ ಚಾನೆಲ್ ಹೊಂದಿದ್ದು, 7.37 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ. ಜಾಕ್ವೆಲಿನ್ 23 ಜುಲೈ 2019 ರಂದು ಚಾನಲ್ ಅನ್ನು ಪ್ರಾರಂಭಿಸಿದರು. ಅವರು ಹೆಚ್ಚು YouTube ಕಿರುಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ನಟಿ ಆಲಿಯಾ ಭಟ್ ಕೂಡ ಇದ್ದಾರೆ. ಆಲಿಯಾ ಭಟ್ ತನ್ನ ಯೂಟ್ಯೂಬ್ ಚಾನೆಲ್ ಅನ್ನು ಮಾರ್ಚ್ 7, 2019 ರಂದು ಪ್ರಾರಂಭಿಸಿದರು. ಆಲಿಯಾ ಭಟ್ ಇದುವರೆಗೆ 15.8 ಲಕ್ಷ ಚಂದಾದಾರರನ್ನು ಹೊಂದಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್ ಮೂಲಕ, ಆಲಿಯಾ ತನ್ನ ಮುಂಬರುವ ಚಲನಚಿತ್ರಗಳು ಮತ್ತು ಆರೋಗ್ಯ ಸಲಹೆಗಳ ಬಗ್ಗೆ ತನ್ನ ಅಭಿಮಾನಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಲಿಯಾ ಭಟ್, ಬಾಲಿವುಡ್ನ ಬಹುಬೇಡಿಕೆಯ ನಟಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಈ ನಟಿ ತನ್ನದೇ ಯೂಟ್ಯೂಬ್ ಚಾನೆಲ್ಗಾಗಿ ಸಮಯ ಮೀಸಲಿಡುತ್ತಾರೆ.
ವಿಡಿಯೋ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸಿನಿಮಾಗಳ ಜೊತೆ ಆಲಿಯಾ ಒಳ್ಳೆಯ ಬ್ಯುಸಿನೆಸ್ ವುಮೆನ್ ಆಗಿದ್ದಾರೆ. ಆಲಿಯಾ ಆದಾಯದ ಮೂಲ ಕೂಡ ಹೆಚ್ಚಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.