ಮುಸ್ಲಿಂ ಹುಡುಗನ ಕೈಹಿಡಿದ ಬಾಲಿವುಡ್ ನ ಟಿ ಸೋನಾಕ್ಷಿ ಸಿನ್ಹಾ; ಹನಿಮೂನ್ ಯಾವ ದೇಶದಲ್ಲಿ ಆಯ್ತು ಗೊ ತ್ತಾ

 | 
Uu
ಬಾಲಿವುಡ್‌ನ ಹಿರಿಯ ನಟ ಶತ್ರುಘ್ನ ಸಿನ್ಹಾ ಪುತ್ರಿ, ನಟಿ ಸೋನಾಕ್ಷಿ ಸಿನ್ಹಾ ಅವರು ನಟ ಜಹೀರ್ ಇಕ್ಬಾಲ್ ಜೊತೆಗೆ ಜೂನ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತುಂಬ ಸರಳವಾಗಿ ನಡೆದ ಈ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಅಂದಹಾಗೆ, ಈ ವಿವಾಹ ಸಮಾರಂಭದಲ್ಲಿ ಯಾವುದೇ ಧರ್ಮದ ಶಾಸ್ತ್ರಗಳ ಆಚರಣೆ ಮಾಡುವ ಬದಲು ರಿಜಿಸ್ಟರ್ ಮದುವೆ ಮೂಲಕ ದಾಂಪತ್ಯ ಜೀವನಕ್ಕೆ ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ಕಾಲಿಟ್ಟಿದ್ದಾರೆ.
ಜಹೀರ್ ಇಕ್ಬಾಲ್ ಜೊತೆಗೆ ಮದುವೆಯಾದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿಕೊಂಡಿದ್ದಾರೆ.ಏಳು ವರ್ಷದ ಹಿಂದೆ ಈ ದಿನ ನಾವು ಪರಿಶುದ್ಧ ಪ್ರೀತಿ ನಮ್ಮಿಬ್ಬರ ಕಣ್ಣಲ್ಲಿ ಕಂಡಿತ್ತು ಮತ್ತು ಅಂದೇ ನಿರ್ಧರಿಸಿದೆವು, ಆ ಪ್ರೀತಿ ಹಾಗೇ ಇರಬೇಕೆಂದು. ಎಲ್ಲಾ ಸವಾಲುಗಳು ಮತ್ತು ಗೆಲುವಿಗೂ ಆ ಪ್ರೀತಿ ಮಾರ್ಗದರ್ಶನ ಮಾಡಿತು. ಅದು ಈ ಕ್ಷಣಕ್ಕೆ ಕಾರಣವಾಯಿತು. 
https://youtube.com/shorts/yluwkT5hdA0?si=ntxnrZ_X62iYcA4U
ಅಲ್ಲಿ ನಮ್ಮ ಎರಡೂ ಕುಟುಂಬಗಳು ಮತ್ತು ನಮ್ಮ ಎರಡೂ ದೇವರುಗಳ ಆಶೀರ್ವಾದದೊಂದಿಗೆ ನಾವು ಈಗ ದಂಪತಿಗಳಾಗಿದ್ದೇವೆ ಎಂದು ಸೋನಾಕ್ಷಿ ಸಿನ್ಹಾ ಹೇಳಿಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಮಂದಿ ಲೈಕ್ ಒತ್ತಿದ್ದಾರೆ. ಆರಂಭದಲ್ಲಿ ಜಹೀರ್ ಇಕ್ಬಾಲ್‌ ಜೊತೆಗೆ ಸೋನಾಕ್ಷಿ ಸಿನ್ಹಾ ಮದುವೆ ಆಗುತ್ತಿರುವುದು ಶತ್ರುಘ್ನ ಸಿನ್ಹಾ ಅವರ ಕುಟುಂಬಕ್ಕೆ ಇಷ್ಟವಿರಲಿಲ್ಲ ಎಂಬ ಮಾತುಗಳು ಹರಿದಾಡಿದ್ದವು.
ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಶತ್ರುಘ್ನ ಸಿನ್ಹಾ,ಎಲ್ಲಾ ಮದುವೆಗಳಲ್ಲೂ ಮದುವೆ ಕುರಿತು ಕೆಲ ಒತ್ತಡಗಳಿರುವುದು ಸಹಜ. ಹಾಗೆಯೇ ನಮ್ಮಲ್ಲೂ ಇತ್ತು. ಸದ್ಯ ಅವೆಲ್ಲವೂ ತಿಳಿಯಾಗಿವೆ. ಮಗಳ ಮದುವೆ ಬಗ್ಗೆ ನಾನೇನೂ ಹೇಳಿರಲಿಲ್ಲ. ಆದರೆ ಕೆಲ ಮಾಧ್ಯಮಗಳೇ ಊಹೆ ಮಾಡಿಕೊಂಡು ಸದ್ದು ಮಾಡಿವೆ ಎಂದು ಹೇಳಿದ್ದರು. ಅಂದಹಾಗೆ, ಮಗಳ ಮದುವೆಯಲ್ಲಿ ಶತ್ರುಘ್ನ ಸಿನ್ಹಾ ಕುಟುಂಬ ಭಾಗಿಯಾಗಿ, ಮಗಳಿಗೆ ಆಶೀರ್ವಾದ ಮಾಡಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.