ಬ್ರೇಕಿಂಗ್ ನ್ಯೂಸ್,ಜಮೀರ್ ಖಾನ್ ಮಗನ ಹಣೆಗೆ ಕುಂಕುಮ ಇಟ್ಟ ರಚಿತಾ ರಾಮ್

 | 
ಪಗದ
 ಬನಾರಸ್ ಚಿತ್ರದ ಮೂಲಕ ಮಿಂಚಿದ್ದ ಝೈದ್‌ ಖಾನ್‌ ನಾಯಕರಾಗಿ ನಟಿಸುತ್ತಿರುವ ಕಲ್ಟ್ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಅನಿಲ್‌ ಕುಮಾರ್‌ ಅವರ ಶ್ರೀಮತಿ ಆರಂಭ ಫ‌ಲಕ ತೋರಿದರು. ಝೈದ್‌ ಖಾನ್‌ ಅವರ ಅಜ್ಜಿ ಕ್ಯಾಮೆರಾ ಚಾಲನೆ ಮಾಡಿದರು. ಈ ಚಿತ್ರಕ್ಕೆ ಝೈದ್ ಖಾನ್ ಜೊತೆ ರಚಿತಾ ರಾಮ್ ನಟಿಯಾಗಿ ಮಿಂಚಲಿದ್ದಾರೆ.
ಅನಿಲ್‌ ಕುಮಾರ್‌ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಲೋಕಿ ಸಿನಿಮಾಸ್‌ ನಿರ್ಮಿಸುತ್ತಿದೆ. ಚಿತ್ರದಲ್ಲಿ ನಾಯಕಿಯರಾಗಿ ರಚಿತಾ ರಾಮ್‌ ಹಾಗೂ ಮಲೈಕಾ ನಟಿಸುತ್ತಿದ್ದಾರೆ ಅಲ್ಲಿಗೆ ಇಬ್ಬರು ನಟಿಯರು ಫಿಕ್ಸ್. ಉಳಿದಂತೆ ರಂಗಾಯಣ ರಘು, ಅಚ್ಯುತ ಕುಮಾರ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಮೂಹೂರ್ತ ಕಾರ್ಯಕ್ರಮದಲ್ಲಿ ನಟಿ ಮಲೈಕಾ ಹಾಗೂ ರಚಿತಾ ರಾಮ್ ಕಾಣಿಸಿಕೊಂಡಿದ್ದರು.
ಝೈದ್ ಖಾನ್, ರಚಿತಾ, ಮಲೈಕಾರ ಹೊಸ ಸಿನಿಮಾದ ಮುಹೂರ್ತ ಗಣೇಶ ಹಬ್ಬದಂದು ಅದ್ಧೂರಿಯಾಗಿ ಗಣೇಶ ದೇವಾಲಯದಲ್ಲಿ ನೆರವೇರಿದೆ. ಆಗ ರಚಿತಾ ರಾಮ್ ಝೈದ್ ಖಾನ್ ಹಣೆಗೆ ಕುಂಕುಮವನ್ನು ಇಟ್ಟು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಝೈದ್ ಖಾನ್-ರಚಿತಾರ ಸಿನಿಮಾವನ್ನು ಮಾರ್ಚ್ ತಿಂಗಳಲ್ಲೇ ಘೋಷಿಸಲಾಗಿತ್ತು. ಆದರೆ ನಟಿಯರು, ತಂತ್ರಜ್ಞರ ಆಯ್ಕೆ ಅಂತಿಮಗೊಳಿಸಲು ಹೆಚ್ಚು ಸಮಯ ಹಿಡಿದಿದೆ.
ಇನ್ನು ರಚಿತಾ ರಾಮ್, ಈ ಸಿನಿಮಾದಲ್ಲಿ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಪೋಸ್ಟರ್​ನಲ್ಲಿ ಯುವತಿಯೊಬ್ಬಾಕೆ ಕಾಲಿನಿಂದ ಝೈದ್ ಖಾನ್​ಗೆ ಸಿಗರೇಟು ಸೇದಿಸುತ್ತಿರುವ ದೃಶ್ಯವಿದೆ. ಅದು ಯಾರು ಎಂದು ಕಾಣುತ್ತಿಲ್ಲ.ಝೈದ್ ಖಾನ್ ಈ ಹಿಂದೆ ‘ಬನಾರಸ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಜಯತೀರ್ಥ ನಿರ್ದೇಶನ ಮಾಡಿದ್ದರು. ಸಿನಿಮಾಕ್ಕೆ ಉತ್ತಮ ವಿಮರ್ಶೆ ಕೂಡಾ ದೊರೆತಿತ್ತು. ಇನ್ನು ಈ ಚಿತ್ರ ಹೇಗಿದೆ ಎಂದು ಕಾದುನೋಡಬೇಕಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.