ಬೃಂದಾವನ ಸೀರಿಯಲ್ ಮುಕ್ತಾಯ; ನಟನನ್ನು ಗಟ್ಟಿಯಾಗಿ ಅಪ್ಪಿಕೊಂಡು ಕಣ್ಣೀರಿ ಟ್ಟ ಪುಷ್ಪ

ಕಲರ್ಸ್ ಕನ್ನಡದಲ್ಲಿ ಅದ್ಧೂರಿಯಾಗಿ ಆರಂಭವಾದ 32 ಜನರನ್ನು ಒಳಗೊಂದ ದೊಡ್ಡ ಕೂಡು ಕುಟುಂಬದ ಕಥೆಯನ್ನು ಹೊಂದಿರುವ ಬೃಂದಾವನ ಸೀರಿಯಲ್ ಆರಂಭಗೊಂಡಂದಿನಿಂದ ಇಲ್ಲಿವರೆಗೆ ಕಥೆಗಿಂತ ಹೆಚ್ಚಾಗಿ ಪಾತ್ರವರ್ಗದಿಂದ ಸುದ್ದಿಯಾಗಿದ್ದೇ ಹೆಚ್ಚು. ಕಳೆದ ವರ್ಷ ಅಕ್ಟೋಬರ್ ಅಂತ್ಯಕ್ಕೆ ಆರಂಭವಾದ ಈ ಧಾರಾವಾಹಿ ಇದೀಗ ಕೇವಲ 166 ಎಪಿಸೋಡ್ ಗಳಿಗೆ ಅಂತ್ಯವಾಗುತ್ತಿದೆ.
ಹೌದು, ಹಲವು ಸೂಪರ್ ಹಿಟ್ ಧಾರಾವಾಹಿಗಳನ್ನು ಕೊಡುಗೆ ನೀಡಿದ್ದ ನಿರ್ಮಾಪಕ ರಾಮ್ಜಿ ಅವರ ಗರಡಿಯ ಬೃಂದಾವನ 5 ತಿಂಗಳ ಹಿಂದೆಯಷ್ಟೇ ಲಾಂಚ್ ಆಗಿತ್ತು. ಸದ್ಯ ಮುಕ್ತಾಯವಾಗ್ತಿದೆ. ಈ ತಿಂಗಳು ಕೊನೆಯವರೆಗೂ ಮಾತ್ರ ಬೃಂದಾವನ ಪ್ರಸಾರವಾಗಲಿದೆ. ಕೆಲವೇ ದಿನಗಳಲ್ಲಿ ಧಾರಾವಾಹಿ ಅಂತಿಮ ಘಟ್ಟಕ್ಕೆ ಬರಲಿದೆ. ಇನ್ನೂ, ಇಷ್ಟು ಕಡಿಮೆ ಅವಧಿಯಲ್ಲಿ ಧಾರಾವಾಹಿಯ ಅಂತ್ಯವಾಗ್ತಿರೋದರಲ್ಲಿ ಹಲವು ಕಾರಣಗಳು ಅಡಗಿವೆ.
ಧಾರಾವಾಹಿಯ ಅನೌನ್ಸ್ ಟೈಮ್ನಲ್ಲೇ ಎಡವಿತ್ತು ತಂಡ. ನಾಯಕನ ಆಯ್ಕೆ ವಿಷದಲ್ಲೇ ವೀಕ್ಷಕರು ನಿರಸ ಪ್ರತಿಕ್ರಿಯೆ ನೀಡಿದ್ರು. ಮೊದಲು ಬಿಗ್ಬಾಸ್ ಖ್ಯಾತಿಯ ವಿಶ್ವನಾಥ್ ಹಾವೇರಿಯವರನ್ನ ಆಯ್ಕೆ ಮಾಡಿತ್ತು. ಅದ್ಧೂರಿಯಾಗಿ ಲಾಂಚ್ ಕೂಡ ಆಯ್ತು. ಆದ್ರೇ ನಾಯಕಿ ಅಮೂಲ್ಯಗೆ ವಿಶ್ವ ತಮ್ಮನ ರೀತಿ ಕಾಣ್ತಾನೆ. ಮೊದಲು ನಾಯಕನನ್ನ ಬದಲಾವಣೆ ಮಾಡಿ ಅಂತಾ ಕೂಗು ಕೇಳಿ ಬಂದಿತ್ತು. ಈ ವಿಷಯವನ್ನ ಪರಿಗಣಿಸಿ ರಾತ್ರೋ ರಾತ್ರಿ ಬೃಂದಾವನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ವರುಣ್ ಗೌಡ ಅವರನ್ನು ಕರೆತರಲಾಯ್ತು.
ಇದಕ್ಕೂ ಪರ ವಿರೋಧದ ಮಾತುಗಳ ಕೇಳಿ ಬಂದಿದ್ದವು. ಇಷ್ಟೇಲ್ಲ ನಡಿತಿರ್ಬೇಕಾದ್ರೆ ತುಂಬು ಕುಟುಂಬ ಅಂತಾ ಅನೌನ್ಸ್ ಮಾಡಿದ್ದ ತಂಡ ತೆರೆಮೇಲೆ ತೋರಿಸುದ್ದು ಕೇವಲ ಕೆಲವೇ ಕೆಲವು ಜನರನ್ನ ಮಾತ್ರ. ಪ್ರೊಮೋದಲ್ಲಿ ಕಾಣಿಸಿದ್ದ 36 ಜನ ಧಾರಾವಾಹಿ ಶುರುವಾದಾಗ ಇರಲೇ ಇಲ್ಲ. ಇದು ಕೂಡ ವೀಕ್ಷಕರ ಬೇಸರಕ್ಕೆ ಕಾರಣ ಆಗಿತ್ತು. ಇದು ಟಿಆರ್ಪಿ ಮೇಲೆ ಹೊಡೆತ ಬಿಳೋದಕ್ಕೆ ಕಾರಣ ಆಯ್ತು. ಆರಂಭದಿಂದಲ್ಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡ್ತಿದ್ದ ಬೃಂದಾವನ ಸ್ಟೋರಿ ಕೊನೆಗೊಂಡಿದೆ. ಹಾಗಾಗಿ ಕಲಾವಿದರೆಲ್ಲರು ಧನ್ಯವಾದ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.