ಮಂಗಳೂರು ಮುಡಾ ಕಚೇರಿಯಲ್ಲಿ Documents ಬದಲಾಯಿಸುತ್ತಿರುವ ಬ್ರೋಕರ್; ಹೇಳುವವರು ಕೇಳುವವರು ಯಾರು ಇಲ್ಲ
Jan 11, 2025, 08:30 IST
|
ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ವ್ಯಕ್ತಿಯೊಬ್ಬರು ಅಧಿಕಾರಿಯ ಕೊಠಡಿಗೆ ನುಗ್ಗಿ ಕಡತಗಳನ್ನು ಫೋರ್ಜರಿ ಮಾಡುತ್ತಿರುವ ಸಿ ರೆ ಸಿಸಿ ಕ್ಯಾಮರಾದ ವಿಡಿಯೋ ತುಣುಕು ಬುಧವಾರ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು ಸಿಸಿ ಕ್ಯಾಮೆರಾ ಇದ್ದರೂ ಭಯವಿಲ್ಲದೆ ಬಂದು ಕಾಗದ ಪತ್ರಗಳನ್ನು ತಿದ್ದಿ ತೀಡಿ ಮಾಡಿರೋದು ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದೆ.
ಹೌದು ಮೂಡ ಕಚೇರಿಯಲ್ಲಿ ಬ್ರೋಕರ್ ಹಾವಳಿ ದಿನೇ ದಿನೇ ಜಾಸ್ತಿಯಾಗುತ್ತಿರುವ ಬಗ್ಗೆ ನಾಗರಿಕರ ಆರೋಪಕ್ಕೆ ಪುಷ್ಠಿ ನೀಡುವಂತಿದೆ. ಅಗಂತುಕ ವ್ಯಕ್ತಿಯೊಬ್ಬರು ಮೂಡ ಅಧಿಕಾರಿಯೊಬ್ಬರ ಕೊಠಡಿ ಪ್ರವೇಶಿಸುತ್ತಾರೆ. ಮೇಜಿನ ಮೇಲಿರುವ ಕಡತ ಪರಿಶೀಲನೆ ನಡೆಸುತ್ತಾರೆ. ಬಳಿಕ ಕಡತವನ್ನು ಬದಲಾಯಿಸುತ್ತಿರುವ ದೃಶ್ಯ ಕಾಣುತ್ತದೆ.
ಹೀಗಾಗಿ ಇದು ಬೋಕರ್‌ಗಳು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ವೇಳೆ ಪ್ರವೇಶಿಸಿ ತಮಗೆ ಬೇಕಾದಂತೆ ಕಡತಗಳ ತಿದ್ದುಪಡಿ ಅಥವಾ ಕಡತಗಳ ನಾಪತ್ತೆ ಮಾಡುತ್ತಿರುವ ಬಗ್ಗೆ ನಾಗರಿಕರಲ್ಲಿ ಶಂಕೆ ಮೂಡುವಂತೆ ಈ ಘಟನೆಯ ದೃಶ್ಯಾವಳಿಗಳು ಕಂಡುಬರುತ್ತಿವೆ. ಕಡತಗಳನ್ನು ಫೋರ್ಜರಿ ಮಾಡುತ್ತಿರುವ ವಿದ್ಯಮಾನ ಮಂಗಳವಾರ ಮಧ್ಯಾಹ್ನ ನಡೆದಿರುವ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಕಾಣುತ್ತಿದೆ. ಮೂಡ ಕಚೇರಿಯಲ್ಲಿ ನಾಗರಿಕರ ಕೆಲಸ ಮಾಡಲು ಸತಾಯಿಸಲಾಗುತ್ತಿದೆ ಎಂಬ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿದೆ.
ಹೌದು ಜನವರಿ .7 ರಂದು ಮಧ್ಯಾಹ್ನ 1.30ರ ಹೊತ್ತಿಗೆ ರೆಕಾರ್ಡ್ ಆದ ಸಿಸಿಟಿವಿ ವೀಡಿಯೋ ಇದಾಗಿದ್ದು, ಇದರಲ್ಲಿ ಮಧ್ಯವರ್ತಿಯೊಬ್ಬ ಮುಡಾದ ಮೊದಲ ಮಹಡಿಯಲ್ಲಿನ ಕಚೇರಿಗೆ ಬಂದು, ಊಟದ ಸಮಯವಾದ ಕಾರಣ ಯಾರೂ ಇಲ್ಲದ್ದನ್ನು ಕಂಡು ಟೇಬಲ್ ಮೇಲಿನ ಕಡತಗಳಲ್ಲಿ ತನಗೆ ಬೇಕಾದದ್ದನ್ನು ಹುಡುಕಿ, ತನ್ನದೇ ಪೆನ್ ನಿಂದ ಬರೆಯುವುದು ಕಂಡು ಬಂದಿದೆ. ಆದರೆ ಮಧ್ಯವರ್ತಿ ಅಕ್ರಮ ಪ್ರವೇಶದ ಬಗ್ಗೆ ಮುಡಾ ಅಧಿಕಾರಿಗಳಿನ್ನೂ ಪೊಲೀಸರಿಗೆ ಪ್ರಕರಣ ದಾಖಲಿಸಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.