'ಶ್ರೀರಾಮನ ಅಕ್ಷತೆಗೆ ಅಡ್ಡಿ' ಮನೆ ಮೇಲೆ ನುಗ್ಗಿದ ಬುಲ್ಡೋಜರ್

 | 
Bz

ಹಿಂದೂ ಧರ್ಮದಲ್ಲಿ ಅಕ್ಕಿ ಅಥವಾ ಅಕ್ಷತೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಈ ಅಕ್ಷತೆಯು ವಿವಿಧ ಬಗೆಯ ಸತ್ವಗುಣಗಳನ್ನು ಹೊಂದಿರುತ್ತದೆ ಅನ್ನೋ ನಂಬಿಕೆ ಹಿಂದೂ ಧರ್ಮದಲ್ಲಿದೆ. ವೇದಗಳಲ್ಲಿ ಉಲ್ಲೇಖ ಪಡುವ ಅಕ್ಷತೆಯನ್ನೇ ಇಲ್ಲೂ ಬಳಸಲಾಗಿದೆ. ಆದರೆ ರಾಮ ನಾಮ ಉಚ್ಛರಿಸಲ್ಪಟ್ಟಿರುವ ಮಂತ್ರಾಕ್ಷತೆಯನ್ನ ರಾಮ ಮಂತ್ರಾಕ್ಷತೆ ಎಂದು ಕರೆಯಲಾಗುತ್ತದೆ.

ಅಯೋಧ್ಯೆಯಿಂದ ರಾಮ ಮಂತ್ರಾಕ್ಷತೆ ಊರೂರು ತಲುಪುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ  ಉದ್ಘಾಟನೆಗೆ ದಿನಗಣನೆ ಆರಂಭವಾಗುತ್ತಲೇ ಪ್ರತೀ ಹಿಂದೂಗಳ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಸ್ವಯಂ ಸೇವಕರು ವಹಿಸಿಕೊಂಡಿದ್ದಾರೆ. ಹಾಗಿದ್ರೆ ರಾಮ ಮಂತ್ರಾಕ್ಷತೆ ಕೊಡಲು ಬಂದವರ ಮೇಲೆ ಕಲ್ಲು ತೂರಿದ್ದ ವ್ಯಕ್ತಿಯ ಕಥೆ ಏನಾಗಿದೆ ಗೊತ್ತಾದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಿ.

ಹೌದು ಅಯೋಧ್ಯೆಯ ರಾಮ ಮಂದಿರ ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆ ಗೊಳ್ಳಲಿದೆ ಹಾಗಾಗಿ ಮನೆ ಮನೆಗೂ ರಾಮ ಮಂತ್ರಾಕ್ಷತೆ ನೀಡಲಾಗುತ್ತಿದ್ದು ಇದೀಗ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ತನ್ನ ಮನೆಗೆ ನೀಡಲು ಬಂದವರ ಮೇಲೆ ಕಲ್ಲು ಬೀರಿ ರಾಕ್ಷಸತನ ತೋರಿದ್ದಾನೆ. ಇದರಿಂದ ಬೇಸೆತ್ತ ವ್ಯಕ್ತಿಗಳು ವಾಪಸ್ಸು ಹೋಗಿ ಆ ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದಾರೆ.

ಇದರಿಂದಾಗಿ ಕಲ್ಲು ಬೀರಿದ್ದ ವ್ಯಕ್ತಿಯ ಮನೆಯನ್ನು ಒಡೆಯಲು ಬುಲ್ಡೋಜರ್ ಜೊತೆಗೆ ಪೋಲೀಸ್ ಅಧಿಕಾರಿಗಳು ಬಂದಿದ್ದು ಆ ವ್ಯಕ್ತಿಯ ಮನೆಯನ್ನು ಒಡೆಯಲಾಗ್ತಿದೆ. ಇನ್ನು ಮುಂದೆ ಇಂತಹ ಕೆಲಸ ಯಾರು ಕೂಡ ಮಾಡಬಾರದು ಜನರಿಗೆ ಭಯವಿರಬೇಕು. ಇಲ್ಲವಾದರೆ ಇಂತಹ ಕೆಲಸ ಹೆಚ್ಚಾಗುತ್ತದೆ ಎಂದು ನುಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.