ಬಿಗ್ ಬಾಸ್ ಸ್ಪರ್ಧಿಗಳಿಗೆ ಹೊಡೆದು ಆಚೆ ಬರುತ್ತೇನೆ ಎಂದ ಬುಲೆಟ್ ಪ್ರಕಾಶ್ ಮಗ, ಕಿಚ್ಚನಿಗೂ ಕೂಡ ವಾರ್ನಿಂಗ್

 | 
Vh

ರಕ್ಷಕ್ ಅಂದ್ರೆ ತುಂಬಾ ಕೋಪಿಷ್ಟ ಸಖತ್ ನೇರವಾಗಿ ಮಾತನಾಡುತ್ತಾನೆ ಅಂದುಕೊಂಡಿದ್ದಾರೆ ಅದರೆ ಮತ್ತೊಂದು ಸೈಡ್ ಬೇರೆನೇ ಇದೆ. ಜನರಿಗೆ ತಿಳಿಸಬೇಕು ಅಂತ ಬಿಗ್ ಬಾಸ್ ಮನೆಯೊಳಗೆ ಬರುತ್ತಿರುವೆ. ನಾನ್‌ವೆಚ್‌ ಅಂದ್ರೆ ನನ್ನ ಪ್ರಾಣ ನನ್ನ ಜೀವ ಅದು. ದಿನದಲ್ಲಿ ಮೂರು ಸಲ ನಾನ್‌ವೆಚ್‌ ಕೊಟ್ಟರೂ ಮೂರು ಸಲವೂ ತಿನ್ನುವೆ ಆದರೆ ಬಿಗ್ ಬಾಸ್ ಮನೆಯೊಳಗೆ ಹೋಗಿ ಊಟ ಬಿಟ್ಟು ಹೇಗಿರುತ್ತೀನಿ ಗೊತ್ತಿಲ್ಲ ಭಯ ಶುರುವಾಗಿದೆ. ಎನ್ನುತ್ತಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು ರಕ್ಷಕ್.

ಬಿಗಬಾಸ್ ಮನೆಯಿಂದ 3 ನೇ ವಾರವೇ ಆಚೆಗೆ ಬಂದ ರಕ್ಷಕ್ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನಾನೇನೂ ಇಲ್ಲಿ ಕೇಳಿಕೊಂಡು ಬಂದವನಲ್ಲ. ಅವರಾಗೇ ನನ್ನ ಅಪ್ರೋಚ್ ಮಾಡಿದರು. ಒಪ್ಪಿಗೆ ಆಯ್ತು. ಒಳಗಡೆ ಬಂದೆ. ಒಂದು ತಿಂಗಳ ಇರಬೇಕು ಎಂಬ ಆಸೆ ಇತ್ತು. ಆ ದೇವ್ರು ಮುಂಚೆನೇ ಬರ್ದಿದ್ದ ಅನ್ಸತ್ತ. ನನ್ನ ಬೆಸ್ಟ್ ನಾನು ಕೊಟ್ಟಿದ್ದೀನಿ. ಒಳಗಡೆ ಇದ್ದಾಗ ಮನೆಯ ಕ್ಯಾಪ್ಟನ್ ಆದೆ. ಉತ್ತಮ ತಗೊಂಡೆ. 

ಎಲ್ಲರ ಜೊತೆ ತುಂಬ ಒಳ್ಳೆಯ ಬಾಂಡಿಂಗ್ ಇಟ್ಕೊಂಡಿದ್ದೆ. ಈ ಎಲ್ಲವೂ ಇನ್ನೂ ಸ್ಟ್ರಾಂಗ್ ಆಗುವ ಮೊದಲೇ ಆಚೆಬಂದೆ ಅಂತ ಖುಷಿ ಇದೆ ಎಂದು ಹೇಳಿದ್ದಾರೆ. ಹೋಗ್ತಾ ಹೋಗ್ತಾ ಇವೆಲ್ಲವೂ ಇನ್ನೂ ವರ್ಸ್ಟೇ ಆಗಿರೋದು. ನಾನು ಹಬ್ಬದ ಟೈಮಲ್ಲಿ ಕುಟುಂಬದವರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದೆ. ನಮ್ಮಮ್ಮ, ‘ನೀನಿಲ್ಲಾ ಅಂದ್ರೆ ಮನೇಲಿ ಕಳೆ ಇರಲ್ವೋ’ ಅಂತಿದ್ರು. ಯಾಕಂದ್ರೆ ನಮ್ಮನೇಲಿ ನಾನೊಬ್ನೇ ಸೌಂಡು ಮಾಡೋನು. ಅದು ಸಡನ್ನಾಗಿ ನೆನಪಾಗೋಯ್ತು. ‘ಓ ಈವತ್ತು ಹಬ್ಬ. ಮನೇಲಿ ಚಿತ್ರನ್ನ, ವಡೆ, ಪಲ್ಯ ಎಲ್ಲ ಮಾಡಿರ್ತಾರೆ. ಇದ್ದಾಗ ನಾವೆಷ್ಟು ದುರಹಂಕಾರದಿಂದ ಇದ್ವಿ. ಈವತ್ತು ಇಲ್ಲಿ ಏನೂ ಇಲ್ದೆ, ಏನಾದ್ರೂ ಕೊಡ್ರಪ್ಪಾ ಅಂತ ಅಲಿತಿದೀವಿ. 

ಬೀನ್ಸ್ ಕೊಡ್ರಪ್ಪಾ, ಬೀನ್ಸ್ ಪಲ್ಯ ಮಾಡೋಣ. ಅನ್ನ ಕೊಡ್ರಪ್ಪಾ, ಫಲಾವ್ ಮಾಡೋಣ ಅಂತ ಅನಿಸ್ತಿತ್ತು. ಅಷ್ಟ್ ಬೇಜಾರಾಗಿಬಿಟ್ಟಿತ್ತು. ಅನ್ನದ ಬೆಲೆ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡೆ ಎಂದಿದ್ದಾರೆ. ಉಳಿದೆಲ್ಲವನ್ನು ಅಲ್ಲಿ ಮಾಡಿದ್ದೇನೆ ಇನ್ನು ಇದ್ದಿದ್ದರೆ ಖಂಡಿತಾ ಯಾರಿಗಾದ್ರೂ ಹೊಡಿತಿದ್ದೆ .ಈ ಜರ್ನಿಯನ್ನು ಇನ್ನೂ ಕಂಟಿನ್ಯೂ ಮಾಡಬೇಕಿತ್ತು ನಾನು. ನನಗೆ ನಾನು ಯಾವತ್ತೂ ಮೋಸ ಮಾಡಿಕೊಂಡಿಲ್ಲ. ನಾಮಿನೇಷನ್‌ ಆಗಿರೋರ ಪಟ್ಟಿಯಲ್ಲಿ ನಾನು ಇರ್ತೀನಿ ಅಂತ್ಲೇ ಅಂದುಕೊಂಡಿರಲಿಲ್ಲ. 

ಸೆಕೆಂಡೋ ಥರ್ಡೋ ಸೇಫ್ ಆಗಿಬಿಡ್ತೀನಿ ಅಂದ್ಕೊಂಡಿದ್ದೆ. ರಕ್ಷಕ್ ಜಾಸ್ತಿ ಮಾತಾಡ್ತಾನೆ. ಕೋಪ ಬರತ್ತೆ ಅಂತೆಲ್ಲ ಇತ್ತು. ಅದೆಲ್ಲ ಯಾವ್ದೂ ಇಲ್ಲ. ಆಚೆ ಇರೋ ಜನಕ್ಕೆ ಒರಿಜಿನಲ್ ರಕ್ಷಕ್ ಕಾಣಿಸ್ಲಿಲ್ವೇನೋ. ನಾನು ಇರೋದೇ ಹಾಗೆ. ಮನೆಲೂ ಹಾಗೇ ಇರ್ತೀನಿ. ಇರುವಷ್ಟು ದಿನ ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.