ಹೆಣ್ಣು ಮಕ್ಕಳ ತಂದೆ ತಾಯಿಗೆ ಬಂಪರ್ ಗಿಫ್ಟ್, ಪೋಷಕರು ಈ ಕೂಡಲೇ ಅಜಿ೯ ಹಾಕಿ

 | 
ರಬೂ

ಅನಾದಿಕಾಲದಿಂದಲೂ ಸಹ ಹೆಣ್ಣುಮಕ್ಕಳ ಮೇಲೆ ಹಾಗೂ ಹೆಣ್ಣು ಶಿಶುವಿನ ಮೇಲೆ ದೌರ್ಜನ್ಯ ನಡೆಯುತ್ತಲೇ ಬಂದಿದೆ. ಇನ್ನು ಬಡವರ ಕುಟುಂಬದಲ್ಲಿ ಹೆಣ್ಣು ಮಗು ಜನನವಾದರೆ ಮುಂದೆ ಆಕೆಯ ಜೀವನ ಹೇಗೆ ಆಕೆಯನ್ನು ಮದುವೆ ಮಾಡುವುದು ಹೇಗೆ ಇವತ್ತಿನ ದಿವಸ ಗಳಲ್ಲಿ ಹೆಣ್ಣು ಮಕ್ಕಳನ್ನ ಹೇಗಪ್ಪಾ ಬೆಳೆಸುವುದು.?

ಅವರನ್ನು ಹೇಗೆ ಮದುವೆ ಮಾಡಿಕೊಡುವುದು! ಇದಕ್ಕೆಲ್ಲ ನಮ್ಮ ಬಳಿಯಲ್ಲಿ ಹಣ ಇರುತ್ತದೆ ಎಂದು ಯೋಚನೆ ಮಾಡುವ ಮಂದಿಗೆ ಸಹಾಯವಾಗಲೆಂದೇ ಸರ್ಕಾರ ಭಾಗ್ಯಲಕ್ಷ್ಮಿ ಯೋಜನೆಯನ್ನು ಶುರು ಮಾಡಿತು. ಹಾಗೂ ಯಾರೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿದ್ದಾರೆ ಹಾಗೂ ಯಾರ ವಾರ್ಷಿಕ ಆದಾಯ ಬಹಳ ಕಡಿಮೆ ಇದೆ ಯಾರು ಕೂಲಿ ಮಾಡುತ್ತ ಜೀವನ ಸಾಗಿಸುತ್ತಾ ಇರುತ್ತಾರೆ ಬಿಲೋ ಪಾವರ್ಟಿ ಲೆವೆಲ್ ಅವರು ಈ ಯೋಜನೆಯ ಫಲವನ್ನ ಪಡೆದುಕೊಳ್ಳಬಹುದಾಗಿದೆ. 

ಹೌದು ಯಾಕೆ ಅಂದರೆ ಹೆಣ್ಣು ಮಕ್ಕಳು 18ವರುಷ ದಾಟುತ್ತಿದ್ದ ಹಾಗೆ ಅವರು ಮದುವೆ ವಯಸ್ಸಿಗೆ ಬರುತ್ತಾರೆ ಈ ವೇಳೆ ಹೆಣ್ಣು ಹೆತ್ತವರಿಗೆ ಹೆಣ್ಣುಮಕ್ಕಳನ್ನು ಮುಂದೆ ಓದಿಸುವುದಕ್ಕಾಗಿ ಆಗಲಿ ಅಥವಾ ಅವರಿಗೆ ಮದುವೆ ಮಾಡಿಕೊಡುವುದಕ್ಕೆ ಆಗಲಿ ಹಣದ ಕೊರತೆ ಉಂಟಾಗಬಾರದು ಬಡವರಿಗೆ ಸ್ವಲ್ಪವಾದರೂ ಹಣದ ಸಹಾಯವಾಗಲಿ ಎಂಬ ಕಾರಣಕ್ಕಾಗಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಯಿತು.

ಈ ಯೋಜನೆ ಜಾರಿಗೆ ಬಂದು ಈಗಾಗಲೇ ಸುಮಾರು ವರ್ಷ ಆಗಿದ್ದು ಇದರ ಅಡಿಯಲ್ಲಿ ಬಹಳಷ್ಟು ಜನರು ಈಗಾಗಲೇ ಫಲವನ್ನು ಪಡೆದುಕೊಂಡಿದ್ದಾರೆ. ಇನ್ನು ಕೆಲ ವರ್ಷಗಳಿಂದ ಭಾಗ್ಯಲಕ್ಷ್ಮೀ ಯೋಜನೆಯು ಎಲ್ಐಸಿ ಬದಲು ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆ ಹೆಸರಲ್ಲಿ ಮುಂದುವರಿಯಲಿದೆ. ಈ ಯೋಜನೆಗೆ ಎಲ್‌ಐಸಿ ಬದಲು ಅಂಚೆ ಇಲಾಖೆಯೇ ಏಜೆನ್ಸಿಯಾಗಿರುತ್ತದೆ. ಈ ಕುರಿತು ರಾಜ್ಯ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿತ್ತು. 

ಆದರೆ ಸಚಿವ ಸಂಪುಟದ ಒಪ್ಪಿಗೆ ಸಿಗಬೇಕಿತ್ತು. ಭಾಗ್ಯಲಕ್ಷ್ಮೀ ಯೋಜನೆಯನ್ನು ಮರು ವಿನ್ಯಾಸಗೊಳಿಸಿ ಜಾರಿ ಮಾಡುವುದರಿಂದ ಫಲಾನುಭವಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ. ಸರ್ಕಾರ ನೀಡಿದ್ದ ಭರವಸೆಯಂತೆಯೇ ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ 1 ಲಕ್ಷ ರೂಪಾಯಿ ಸಿಗುತ್ತದೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.