ಪವಿತ್ರ ಗೌಡ ದರ್ಶನ್ ಅವರನ್ನು ಪ್ರೀತಿಯಿಂದ ಯಾವ ಹೆಸರಿನಿಂದ ಕರೆಯುತ್ತಾರೆ ಗೊ.ತ್ತಾ

 | 
Hz

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿವಾದ ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ವುಡ್ಗೆ ಬೆಂಕಿ ಹಚ್ಚಿದೆ. 25 ಕೋಟಿ ವಂಚನೆ ಪ್ರಕರಣದಿಂದ ಪ್ರಾರಂಭವಾದ ವಿವಾದ ಬಳಿಕ ಹಲ್ಲೆ, ಇಂದ್ರಜಿತ್ ಆರೋಪ, ನಿರ್ಮಾಪಕ ಉಮಾಪತಿ ಮೇಲೆ ಮುನಿಸು, ದೊಡ್ಮನೆ ವಿಚಾರ ನಂತರ ನಿರ್ದೇಶಕ ಪ್ರೇಮ್ ವರೆಗೂ ಬಂದಿದೆ. ಇದೀಗ ಪವಿತ್ರಾ ಗೌಡ.

'ಡಿ-ಬಾಸ್' ಅಂತಾ ಅಭಿಮಾನಿಗಳಿಂದ ಕರೆಸಿಕೊಳ್ಳುವ ದರ್ಶನ್ ಅವರಿಗೆ, ಮೇಲಿಂದ ಮೇಲೆ ಸಮಸ್ಯೆ ಎದುರಾಗುತ್ತಿದೆ. ಕೌಟುಂಬಿಕ ಕಲಹವೇ ದರ್ಶನ್ ಅವರ ಸಿನಿಮಾ ಲೈಫ್ಗೂ ದೊಡ್ಡ ಅಡ್ಡಿ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗಲೇ ನಿನ್ನೆ ನಟ ದರ್ಶನ್ ಅವರ ಪತ್ನಿ ಗರಂ ಆಗಿ, ಪವಿತ್ರ ಗೌಡಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಇಷ್ಟೆಲ್ಲ ಬೆಳವಣಿಗೆ ನಡುವೆ ಇಂದು, ಪವಿತ್ರ ಗೌಡ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ! 

ಪವಿತ್ರಗೌಡ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಖಾಸಗಿ ಫೋಟೋಗಳನ್ನು ಶೇರ್ ಮಾಡಿ 10 ವರ್ಷದ ಸಂಬಂಧ ಎಂದು ಹೇಳಿದ್ದಾರೆ, ಅಲ್ಲದೆ ದರ್ಶನ್ ಅವರ ಜೊತೆಗಿನ ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಹೊರಬರುತ್ತಿದ್ದಂತೆ ವಿಜಯಲಕ್ಷ್ಮಿ ಅವರಿಗೆ ಸಿಡಿಲು ಬಡಿದಂತಾಗಿದೆ. ದರ್ಶನ್ ಅವರ ಜೊತೆಗೆ ಅವರ ಸಂಗಾತಿಯಂತೆ ಬಿಂಬಿಸುವ ಫೋಟೋಗಳವು. ದರ್ಶನ್ ಹಾಗೂ ಪವಿತ್ರ ಕತ್ತಿನಲ್ಲಿ ಮಾಲೆ ಧರಿಸಿ ಯಾವುದೋ ಪೂಜೆ ಮಾಡುತ್ತಿರುವ ಫೋಟೋ. 

ಸಾಮಾನ್ಯವಾಗಿ ಪೂಜೆ, ಮನೆ ಗೃಹ ಪ್ರವೇಶದಲ್ಲಿ ದಂಪತಿ ಹೀಗೆ ಕುತ್ತಿಗೆಗೆ ಹಾರ ಹಾಕಿ ಕೂತಿರುತ್ತಾರೆ.ಇಬ್ಬರು ಟ್ರಿಪ್ ಹೋಗಿರುವ ಫೋಟೋಗಳು ಹೀಗೆ ಹಲವಾರು ಫೋಟೋಗಳನ್ನು ಕಂಬೈನ್ ಮಾಡಿ ಹಾಕುವ ಮೂಲಕ ನಮ್ಮಿಬ್ಬರ ನಡುವೆ ಸಂಬಂಧ ಇದೆ ಎಂಬ ರೂಮರ್‌ ಅದು ರೂಮರ್ ಅಲ್ಲ ಸತ್ಯ ಎಂದು ಹೇಳಲು ಹೊರಟಿದ್ದಾರೆ ಪವಿತ್ರ ಗೌಡ. ಇನ್ನು ಪವಿತ್ರಾ ಗೌಡ ಯಾರು ಎಂಬುದು ಹಲವರಲ್ಲಿ ಮೂಡಿದ ಪ್ರಶ್ನೆ. ಇವರು ನಟನೆ ಜೊತೆ ಮಾಡಲಿಂಗ್‌ ಮಾಡುತ್ತಾರೆ. ಕನ್ನಡದ ಛತ್ರಿಗಳು ಸಾರ್ ಛತ್ರಿಗಳು, ಅಗಮ್ಯಾ, ಸಾಗುವ ದಾರಿ, 54321 ಚಿತ್ರದಲ್ಲಿ ಅಭಿನಯಿಸಿದ್ದಾರೆ. 

ಪ್ರೀತಿ ಕಿತಾಬು ಸಿನಿಮಾ ನಟಿ ಪವಿತ್ರಾ ಗೌಡಗೆ ಖ್ಯಾತಿ ತಂದುಕೊಟ್ಟ ಚಿತ್ರ. ಸದ್ಯ ಪವಿತ್ರಾ ಗೌಡ ಫ್ಯಾಷನ್ ಡಿಸೈನರ್ ಆಗಿದ್ದು ಬೋಟಿಕ್ ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗ ಸ್ಟಾರ್ ನಟಿಯರು ಹಾಗೂ ಜನ ಸಾಮಾನ್ಯರಿಗೆ ತಮ್ಮ ಡಿಸೈನರ್ ಉಡುಪುಗಳನ್ನು ನಟಿ ಪವಿತ್ರಾ ಗೌಡ ಮಾರಾಟ ಮಾಡುತ್ತಾರೆ. ಈ ಹಿಂದೆ ಇವರ ಮಗಳು ಕುಷಿ ಅವರ ಜೊತೆ ದರ್ಶನ್ ಹುಟ್ಟು ಹಬ್ಬ ಆಚರಿಸಿದ್ದು ಎಲ್ಲೆಡೆ ವೈರಲ್ ಆಗಿತ್ತು. ಅಲ್ಲದೆ ಇವರು ದರ್ಶನ್ ಅವರನ್ನು ಸುಬ್ಬ ಎಂದು ಕರೆಯುತ್ತಾರೆ. ಈ ಹಿಂದೆ ಇವರು ದರ್ಶನ್ ಜೊತೆ ಆಚರಿಸಿದ ಹುಟ್ಟು ಹಬ್ಬದ ಕೆಕ್ ಮೇಲೆ ಬರೆದಿತ್ತು. 

ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. ನಾನು ಅವರ ಬಾಳಲ್ಲಿ ಬರುವುದಕ್ಕೂ ಮುನ್ನ ಅವರಿಬ್ಬರ ಬಗ್ಗೆ ಇರುವ ಸಮಸ್ಯೆ ಬಗ್ಗೆ ನಿಮಗೆಲ್ಲರಿಗೂ ಗೊತ್ತು ಎಂದು ಭಾವಿಸಿದ್ದೇನೆ ಎಂದು ಪವಿತ್ರ ಗೌಡ ಅವರು ದರ್ಶಬ್‌ ಪತ್ನಿ ಮಾಡಿರುವ ಪೋಸ್ಟ್‌ ಗೆ ತಿರುಗೇಟು ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.